ಸರ್ಕಾರಿ ಶಾಲೆಯ ಮಕ್ಕಳಿಗೆ ಶೌಚಾಲಯಕ್ಕೆ ಹೋಗಲು ಇಂದಿಗೂ ಗ್ರಾಮದ ಸೊಂದಿಗಳೆ ಗತಿ

ಪಾವಗಡ:ಇಮ್ರಾನ್ ಉಲ್ಲಾ

ಈ ಪಾಡು ಸಮಸ್ಯೆ ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಸ್ಥಳ ಎಲ್ಲಿ ಎಂದರೆ.
ಪಾವಗಡ ತಾಲೂಕಿನ ಮಂಗಳವಾಡ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮದ್ದೆ ಗ್ರಾಮದಲ್ಲಿ ಈ ಪದ್ದತಿ ಜಾರಿಯಲ್ಲಿದೇ. ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬೃಹತಾಕಾರದಲ್ಲಿ ಶೌಚಾಲಯ ನಿರ್ಮಾಣ ಮಾಡಿ ಇಂದಿಗೂ ಉದ್ಘಾಟನೆ ಬಗ್ಗೆ ಸಿಕ್ಕಿಲ್ಲ.

WhatsApp Image 2023 01 06 at 10.30.23 AM

ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ 55 ಮಕ್ಕಳಿದ್ದು ಈಗಾಗಲೇ ಈ ಶಾಲೆಯ ಅವರಣದಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಅಮೃತ ಮಹೋತ್ಸವ ಸವಿನೆನಪಿಗಾಗಿ ಈ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2021-22 ಸಾಲಿನಲ್ಲಿ ಮಂಗಳವಾಡ ಗ್ರಾಮ ಪಂಚಾಯಿತಿ ಯಿಂದ ಶೌಚಾಲಯ ನಿರ್ಮಾಣ ಮಾಡಿ ಸುಮಾರು ಏಳು ಎಂಟು ತಿಂಗಳಾಗಿದೆ ಅದರು ಉಪಯೋಗ ಭಾಗ್ಯ ಸಿಕ್ಕಿಲ್ಲ.

ಕಾಮಗಾರಿ ಮಾಡಿ ಬಿಲ್ಲು ನೀಡಿಲ್ಲ ಎಂಬುದಾಗಿ ಹೇಳಿ ಕೊಳ್ಳಲು ಇದು ಎನ್.ಆರ್.ಇ.ಜಿ ಅನುದಾನದಲ್ಲಿ ಅಗಿರುವ ಕಾರಣ ತಡೆಯುವಂತಿಲ್ಲ. ದುರಾದೃಷ್ಟಕರವೇನೆಂದರೆ ಈ ಶಾಲೆಗೆ ಮುಖ್ಯ ಶಿಕ್ಷಕ ಮೂರು ದಿನ ಇಲ್ಲಿ ಮೂರು ದಿನ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇಂತಹ ಸಮಸ್ಯೆಗಳು ಇನ್ನು ಹೆಚ್ಚು ತಲೆ ಎತ್ತುವ ಪರಿಸ್ಥಿತಿಗಳಿವೆ.

ಐದು ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಮೈದಾನ ನಿರ್ಮಾಣ ಮಾಡಿ ಪ್ರತಿದಿನ ಮಕ್ಕಳು ಬೀದ್ದು ಗಾಯಗಳು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಅದೇ ಐದು ಲಕ್ಷ ವೆಚ್ಚದಲ್ಲಿ ಕೊಠಡಿಗಳು ನಿರ್ಮಾಣ ಮಾಡಿಕೊಟ್ಟಿದ್ದರೆ ಉತ್ತಮವಾದಿತ್ತು.ಅದರೆ ಇದರಿಂದಾಗಿ ಪ್ರತಿದಿನವೂ ಮಕ್ಕಳು ಈ ಕಾಂಕ್ರೀಟ್ ಮೈದಾನದಲ್ಲಿ ಮಕ್ಕಳು ಬಿದ್ದು ಗಾಯಗಳು ಮಾಡಿಕೊಳುತ್ತಿವೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಇದೇ ವೇಳೆ ಗುದ್ದಲಿ ಪೂಜೆ ಗಾಗಿ ಬಂದಂತಹ ಶಾಸಕರಿಗೆ ಶಾಲೆಯ ಅವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಅಡಿಗೆ ಕೋಣೆ ಸಹ ಇಲ್ಲ ಎಂಬುದು ಶಿಕ್ಷಕಿ ಶಾಸಕರಿಗೆ ದೂರು ಸಲ್ಲಿಸಿದರು. ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಈ ಶಾಲೆಗೆ ಬೇಟಿ ನೀಡಿ ಶೌಚಾಲಯ ಮತ್ತು ಕಾಂಕ್ರೀಟ್ ಮೈದಾನ ದಿಂದ ಅಗುತ್ತಿರುವ ಸಮಸ್ಯೆ ಬಗ್ಗೆ ಹರಿಸಬೇಕು ಎಂಬುದು ಸ್ಥಳೀಯ ಜನರ ಆರೋಪ.

Leave a Reply

Your email address will not be published. Required fields are marked *