ಪಾವಗಡ:-ಇಮ್ರಾನ್ ಉಲ್ಲಾ
ತಾಲ್ಲೂಕಿನ ಪೊನ್ನ ಸಮುದ್ರ ಗ್ರಾ.ಪಂ ಯ ನೂತನ ಅಧ್ಯಕ್ಷರಾಗಿ ತಾಳೇ ಮರದಹಳ್ಳಿ ಸುಮಿತ್ರಾ ವಿನೋದ್ ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸುಮಿತ್ರಾ ವಿನೋದ್ ಕುಮಾರ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ವಾಗಿ ಆಯ್ಕೆಗೊಂಡರು. ನಂತರ ನೂತನ ಅಧ್ಯಕ್ಷೆ ಸುಮಿತ್ರಾ ಮಾತನಾಡಿ, `ಸರ್ಕಾರದ ಸವಲತ್ತು ಗಳನ್ನು ಗ್ರಾ.ಪಂ. ಮೂಲಕ ಅರ್ಹ ಫಲಾನುಭವಿ ಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೆ ಎಲ್ಲಾ ಸದಸ್ಯರೊಂದಿಗೆ ಜೊತೆಗೂಡಿ ಶ್ರಮಿಸುತ್ತೇನೆ’. ಗ್ರಾಮಗಳ ಅಭಿ ವೃದ್ಧಿಗೂ ಹೆಚ್ಚಿನದಾಗಿ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ತಾಳೆ ಮರದಹಳ್ಳಿ ಹಿರಿಯ ಕಾಂಗ್ರೆಸ್ ಮುಖಂಡ ನರಸಿಂಹಯ್ಯ, ಗ್ರಾಪಂ ಉಪಾಧ್ಯಕ್ಷ ರಾಮರೆಡ್ಡಿ,ಪಿ ಎಚ್ ಮಹೇಶ್,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಸತೀಯಲ್,ಗ್ರಾ.ಪಂ. ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.
ಪೊನ್ನಸಮುದ್ರ ಗ್ರಾ.ಪಂ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಾಳೇಮರದಹಳ್ಳಿ ಸುಮಿತ್ರಾ ವಿನೋದ್ ಕುಮಾರ ಅವರನ್ನು ಸ್ಥಳೀಯ ಮುಖಂಡರು ಅಭಿನಂದಿಸಿದರು.