Document

ಸಚಿವ ಮುರುಗೇಶ್ ನಿರಾಣಿ ವಿದುದ್ದ ಧರಣಿ ಸತ್ಯಾಗ್ರಹ

ಬಾದಾಮಿ: ರಾಜೇಶ್.ಎಸ್.ದೇಸಾಯಿ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲ ಕುರ್ಕಿ ಯಲ್ಲಿ ದಿಗಂಬರೇಶ್ವರ ಮಠದ ಷಡಕ್ಷರ ಮಹಾಸ್ವಾಮಿಗಳ ಸಾರಥ್ಯದಲ್ಲಿ ನಡೆಯುತ್ತಿರುವ ಸಚಿವ ಮುರಗೇಶ ನಿರಾಣಿ ವಿರುದ್ಧದ ಧರಣಿ ಸತ್ಯಾಗ್ರಹ 60 ನೆ ದಿನಕ್ಕೆ ಕಾಲಿಟ್ಟಿದ್ದು ರೈತರ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಸಚಿವ ಮುರುಗೇಶ್ ನಿರಾಣಿ ಕೂಡಲೇ ರೈತರ ಭೂಸ್ವಾಧೀನ ಕೈ ಬಿಟ್ಟು ರೈತರ ಜೊತೆ ಮಾತುಕತೆಗೆ ಬರಬೇಕು ಇಲ್ಲವಾದಲ್ಲಿ ಇಂದು ಹಲ ಕೂರ್ಕಿ ಇಂದ ಬಾಗಲಕೋಟೆಗೆ ಹೋಗುವ ರಸ್ತೆ ಯನ್ನಷ್ಟೆ ಬಂದ್ ಮಾಡಿದ್ದೇವೆ.

WhatsApp Image 2022 11 21 at 2.35.03 PM

ಮುಂದೆ ಕೆರೂರನ ರಾಷ್ಟ್ರೀಯ ಹೆದ್ದಾರಿಯನ್ನು ಕೂಡ ಬಂದ್ ಮಾಡುವ ಸಿದ್ಧತೆ ಮಾಡಿಕೊಂಡಿದ್ದೇವೆ. ಕೂಡಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಮಾತನಾಡಬೇಕು ರೈತರು ತಾಳ್ಮೆ ಕಳೆದುಕೊಂಡು ಒಕ್ಕ ಲೆದ್ದರೆ ಮುರಗೇಶ ನಿರಾಣಿ ಅಷ್ಟೇ ಅಲ್ಲ ಬೊಮ್ಮಾಯಿಯವರು ಹಾಗೂ ಇಡೀ ಸರ್ಕಾರವನ್ನೇ ಅಲ್ಲಾಡಿಸಿ ಬಿಡುತ್ತೇವೆ ಎಂದು ಸರಕಾರಕ್ಕೂ ಮಾಧ್ಯಮದ ಮೂಲಕ ಎಚ್ಚರಿಸಿದರು..ನಾಳೆ ಅಸಿಸ್ಟಂಟ್ ಕಮಿಷನರ್ ಅವರು ಗ್ರಾಮಕ್ಕೆ ಆಗಮಿಸುವ ಸಾಧ್ಯತೆ ಇರುವುದರಿಂದ ನಾಳೆ ಸಭೆ ನಡೆದು ಭೂಸ್ವಾಧೀನ ಕೆ ಸಂಬಂಧಪಟ್ಟಂತೆ ರೈತರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ರೈತ ಮುಖಂಡ ಪ್ರಕಾಶ್ ನಾಯ್ಕರ್ ಇದೇ ಸಂದರ್ಭದಲ್ಲಿ ಮಾಧಮಕ್ಕೆ ತಿಳಿಸಿದರು.

WhatsApp Image 2022 11 21 at 2.34.51 PM

ಇದೇ ಸಂದರ್ಭದಲ್ಲಿ ಸಚಿವ ಮುರ ಗೇಶ್ ನಿರಾಣಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿ ರಸ್ತೆಯುದ್ದಕ್ಕೂ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ಟೈರ್ ಗೆ ಬೆಂಕಿ ಹಚ್ಚಿ ರಸ್ತೆಯ ಎರಡೂ ಕಡೆ ಮುಳ್ಳಿನ ಬೇಲಿ ಹಚ್ಚಿ ಸಂಪೂರ್ಣ್ ಬಂದ್ ಮಾಡಲಾಗಿತ್ತು. ಸುಮಾರು 3 ರಿಂದ 4 ಗಂಟೆಗಳ ವರೆಗೆ ಬಂದ್ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

WhatsApp Image 2022 11 21 at 2.35.06 PM

ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ತಹಶೀಲ್ದಾರ ಮಲ್ಲಿಕಾರ್ಜುನ್ ಮಜ್ಜಗಿ ನಾಳೆ ಎ.ಸಿ.ಯವಾರಿಗೆ ಜಿಲ್ಲಾಧಿಕಾರಿಯವರಿಗೆ ಕೂಡ ತಿಳಿಸಿ ಮಾತನಾಡುವುದಕ್ಕೆ ಇಲ್ಲಿಗೆ ಬರಲು ತಿಳಿಸುವೆ ಎಂದು ಭರವಸೆ ನೀಡಿದ ನಂತರ ರೈತರು ರಸ್ತೆ ತಡೆಯನ್ನು ತಾತ್ಕಾಲಿಕವಾಗಿ ರಸ್ತೆ ತಡೆಯನ್ನು ಕೈಬಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೈತ ಮಹಿಳೆಯರು, ರೈತರು ಭಾಗವಹಿಸಿದ್ದರು.

Document

Leave a Reply

Your email address will not be published. Required fields are marked *