Document

ಸಂವಿಧಾನದ ಅರಿವು ಮೂಡಿಸಿ ಗುಂಡ್ಲುಪೇಟೆಯಲ್ಲಿ ಬಿ.ಎಸ್.ಪಿ ಗೆಲುತ್ತದೆ: ವಕೀಲ ಕಾಂತರಾಜ್ ಅಸುರ ಅಭಿಮತ

ಗುಂಡ್ಲುಪೇಟೆ:- ಕಾಂತರಾಜು

ಗುಂಡ್ಲುಪೇಟೆ :- ಚುನಾವಣೆಯ ರಣರಂಗದಲ್ಲಿ ಪರಿಣಾಮ ಬೀರುವ ದೃಷ್ಟಿಯಲ್ಲಿ ಒಳ ಮಟ್ಟದಲ್ಲಿ ಸಂಘಟನೆ ಮಾಡುತ್ತಿರುವ ಬಿಎಸ್ ಪಿ ಕಾರ್ಯಕರ್ತರು. ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಯಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ ತಾಲ್ಲೂಕಿನಲ್ಲಿ ನಡೆದಿರುವ ಇದುವರೆಗಿನ ವಿಧಾನ ಸಭಾ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಉಳಿದ ಪಕ್ಷದ ಅಭ್ಯರ್ಥಿ ಗಳ ನಿದ್ದೆ ಗೆಡಿಸಿದು ಸುಳ್ಳಲ್ಲ ಇದು ಎಲ್ಲಾರಿಗೂ ಗೊತ್ತಿರುವ ವಿಚಾರ. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳು ಹೆಚ್ಚು ಒಲವನ್ನುಬಿ.ಎಸ್.ಪಿ ಕಡೆಗೆ ಮೊದಲಿಂದಲೂ ತೊರಿಸುತ್ತಿದ್ದು ಈವಾಗಲೂ ತಾಲ್ಲೂಕು ಬಿ.ಎಸ್.ಪಿ ಸದ್ದಿಲ್ಲದೆ ಮತವನ್ನು ಕ್ರೂಢಿಕರಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಬಿಎಸ್ ಪಿ ತಾಲ್ಲೂಕು ಅಧ್ಯಕ್ಷ ಕಿಲಗೆರೆ ಬಸವಣ್ಣ ಹೇಳಿದರು.

WhatsApp Image 2022 11 04 at 3.14.47 PM

ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ಶೀಘ್ರದಲ್ಲೇ ಸಂವಿಧಾನದ ಉಳಿವಿಗಾಗಿ ಜೈ ಭೀಮ್ ಜನ ಜಾಗೃತಿ ಜಾಥಾವನ್ನು ಪ್ರತಿ ಗ್ರಾಮಗಳಿಗೂ ತೆಗೆದುಕೊಂಡು ಹೋಗಿ ಸಂವಿಧಾನ ದ ಅರಿವು ಮೂಡಿಸುವ ಮೂಲಕ ಪಕ್ಷವನ್ನು ಬಲಪಡಿಸುವ ಕಾರ್ಯ ಕ್ರಮವನ್ನು ರೂಪಿಸುತ್ತೇವೆ ಅದರ ಮೂಲಕ ಕ್ಷೇತ್ರದಲ್ಲಿ ಶಾಸಕರು ತಮ್ಮ ಆಡಳಿತದ ಮುಖಾಂತರ 40% ಕಮಿಷನ್ ಆಸೆ ಯಿಂದಾಗಿ ಬಿಜೆಪಿಯಲ್ಲಿ ಮೂರು ಬಣಗಳಾಗಿದ್ದು ಅದರಂತೆಯೇ ಕಾಂಗ್ರೆಸ್ ಪಕ್ಷದಲೂ ಹಿರಿಯರನ್ನು ಕಡೆಗಣಿಸಿರುವ ಕಾರಣ ಎರಡು ಬಣಗಳಾಗಿ ರೂಪುಗೊಂಡಿದ್ದು ಮತ್ತು ವಿರೋಧ ಪಕ್ಷವಾಗಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದೆ ನಿಷ್ಕ್ರಿಯ ವಾಗಿರುವ ಕಾರಣ ಎರಡು ಪಕ್ಷಗಳ ಕಾರ್ಯಕರ್ತರು ಬಿ.ಎಸ್.ಪಿ ಕಡೆ ಒಲವು ತೋರುತ್ತಿದ್ದಾರೆ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಎರಡು ಮತ್ತು ಮೂರು ಬಣಗಳು ಆಗುತ್ತಿರುವ ಕಾರಣ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಉಪ್ಪಾರ ಸಮುದಾಯಗಳು ಹೊಂದಾದರೆ ಬಹುಜನ ಸಮಾಜ ಪಕ್ಷವು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ಭ್ರಷ್ಟಾಚಾರದ ಆಡಳಿತದ ವಿರುದ್ಧ ಸಂವಿಧಾನ ದಲ್ಲಿರುವ ಪರಿಹಾರ ಮಾರ್ಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಬಹುಜನ ಸಮಾಜ ಪಕ್ಷದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಜೊತೆಗೂಡಿ ಸಂಘಟನೆ ಮಾಡಲಾಗುವುದು ಎಂದು ತಾಲ್ಲೂಕಿನಲ್ಲಿ ನಡೆದ ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ವಕೀಲರು ಮತ್ತು ಬಿ.ಎಸ್.ಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಕಾಂತರಾಜ್ ಅಸುರ ತಿಳಿಸಿದರು. ಗೋಷ್ಠಿಯಲ್ಲಿ ಬಿ.ಎಸ್.ಪಿ ತಾಲ್ಲೂಕು ಉಪಾಧ್ಯಕ್ಷ ಚಂದ್ರು ಉಪ್ಪಾರ ಬೀಮನಬೀಡು, ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಾಜು , ಚಿನ್ನಮ್ಮ, ಸುಧಾ ಮತ್ತು ಬಿ.ಎಸ್.ಪಿ ಮುಖಂಡ ಬಸವಣ್ಣ ಬೋಮ್ಮಲಾಪುರ , ಎಸ್. ಮಹದೇವಸ್ವಾಮಿ ಮುಂಟಿಪುರ , ಪ್ರಸನ್ನ ಕಗ್ಗಳ, ಪ್ರತಾಪ್ ಮದ್ದಯ್ಯನಹುಂಡಿ, ಶಿವು ಕುನ್ನವಳಿಯ್ಯ, ನಟರಾಜ್, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *