Janataa24 NEWS DESK

ತುರುವೇಕೆರೆ: ಇಂದು ಸಂಜೆ ತಾಲೂಕಿನ ಟಿ ಬಿ ಕ್ರಾಸ್ ಸರ್ಕಲ್ ಬಳಿ ಸುಮಾರು 150ಕ್ಕೂ ಹೆಚ್ಚು ಎಸ್ ಬಿ ಜಿ ಶಾಲಾ ವಿದ್ಯಾರ್ಥಿಗಳು ,ವಿದ್ಯಾರ್ಥಿನಿಯರು, ತುರುವೇಕೆರೆ -ಬೆಂಗಳೂರು ಮಾರ್ಗ ಮತ್ತು ತುಮಕೂರು-ಮೈಸೂರು ಮಾರ್ಗ ಸಂಚರಿಸುವ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ಇಂದು ಸಂಜೆ 5 ರಿಂದ 7 ರವರೆಗೆ ಸತತ ಎರಡು ಗಂಟೆಗಳ ಕಾಲ ಬಸ್ ಗಳನ್ನು ತಡೆದು ಪ್ರತಿಭಟನೆ ಮಾಡಿದರು.

ಇದೇ ವೇಳೆ ವಿದ್ಯಾರ್ಥಿಗಳು ಮಾತನಾಡಿ ಚಾಲಕ ಮತ್ತು ನಿರ್ವಾಹಕರಿಂದ ನಮ್ಮಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ, ಶಾಲಾ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ನಮ್ಮಗಳಿಗೆ ಇಲ್ಲ, ವಿದ್ಯಾರ್ಥಿಗಳು ಬಸ್ ಹತ್ತಲು ಹೋದರೆ ಅಡ್ಡಲಾಗಿ ನಿಲ್ಲುತ್ತಾರೆ ನಿರ್ವಾಹಕರು.

ಇದರ ಜೊತೆಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸುವ ಬದಲು ಶಾಲಾ ವಿದ್ಯಾರ್ಥಿಗಳನ್ನು ನೋಡಿ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಬಸ್ಸನ್ನು ನಿಲ್ಲಿಸುತ್ತಾರೆ, ನಾವುಗಳು ಹೋಗುವಷ್ಟರಲ್ಲಿ ಶಾಲೆಗೆ ತೆರಳಲು ಹಾಗೆ ನಮ್ಮ ನಮ್ಮ ಊರುಗಳಿಗೆ ತೆರಳಲು ಇದರಿಂದ ತುಂಬ ತೊಂದರೆ, ಇದರ ಜೊತೆಗೆ ಕೆ ಎಸ್ ಆರ್ ಟಿ ಸಿ ಬಸ್ ನ, ಕೆಲ ನಿರ್ವಾಹಕರು, ಮತ್ತು ಚಾಲಕರು,ನಮ್ಮಗಳನ್ನು ಏಕವಚನದಲ್ಲಿ ನಿಂದಿಸುತ್ತಾರೆ ಎಂದು ವಿದ್ಯಾರ್ಥಿಗಳು ನೇರ ಆರೋಪ ಮಾಡಿದರು.
ತದನಂತರ ಪ್ರತಿಭಟನೆ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಆಗಮಿಸಿ ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಆಲಿಸಿ, ಮಾತನಾಡಿದ ಅವರು ಕೂಡಲೇ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗೆ ವಿಷಯವನ್ನು ತಿಳಿಸಿ, ಶಾಲಾ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಬಸ್ ಸಂಚಾರದಲ್ಲಿ ಯಾವುದೇ ಸಮಸ್ಯೆ ಬಾರದ ಹಾಗೆ ಸರಿಪಡಿಸುತ್ತೇವೆಂದು ಭರವಸೆ ನೀಡಿದರು.

ಪ್ರತಿಭಟನೆ ಸಂದರ್ಭದಲ್ಲಿ ಅಲ್ಲೇ ಇದ್ದ ಸಾರ್ವಜನಿಕರು ಕೂಡ ವಿದ್ಯಾರ್ಥಿಗಳು ಈ ಸರ್ಕಾರಿ ಬಸ್ ಗಳಿಂದ ಅನುಭವಿಸುತ್ತಿರುವ ಸಮಸ್ಯೆಯನ್ನು ಡಿಪೋ ಮ್ಯಾನೇಜರ್ ಗೆ ಮನವರಿಕೆ ಮಾಡಿ ಕೊಟ್ಟರು.
ಇನ್ನು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಶಾಲಾ ಮಕ್ಕಳ ಪ್ರತಿಭಟನೆಗೆ ಸಾತ್ ನೀಡಿದರು.

ಪ್ರತಿಭಟನಾ ಸ್ಥಳದಲ್ಲಿ ತುರುವೇಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಚಂದ್ರಯ್ಯ, ಮಾಯಸಂದ್ರ ಉಪ ವಿಭಾಗ ಎ ಎಸ್ ಐ ಶಂಕರಪ್ಪ ,ಹಾಗೂ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಕ್ರಮ ವಹಿಸಿದರು.
ವರದಿ
ತುರುವೇಕೆರೆ: ಮಂಜುನಾಥ್