ಪಾವಗಡ:ಇಮ್ರಾನ್ ಉಲ್ಲಾ
ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿಯ ಹೊಸಹಳ್ಳಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡರಾದ
K.ಮಂಜುನಾಥ ರವರು ಬುಧವಾರ ಗಡಿ ಭಾಗವಾದ ಆಂಧ್ರ ಪ್ರದೇಶದ ಅನಂತಪುರದ ಬಳಿ ಇರುವ ಶ್ರೀ ಗುರು ರಾಘವೇಂದ್ರ ವೃದ್ಧಶ್ರಮದಲ್ಲಿರುವ ನಿರ್ಗತಿಕರಿಗೆ ಹಾಗೂ ವೃದ್ಧರಿಗೆ ಹಾಗೂ ಸಣ್ಣ ಮಕ್ಕಳಗೆ ಬಿಸ್ಕೆಟ್,ಹಣ್ಣುಗಳು, ಅಕ್ಕಿ, ಪ್ಯಾಕೆಟ್ ವಿವಿಧ ದಿನಸಿ ವಸ್ತುಗಳನ್ನು ಉಚಿತವಾಗಿ ನೀಡಿ ಹಿರಿಯರ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.

ನಂತರ ಮಾತನಾಡಿದ ಅವರು ಈ ಎರಡು ದಿನದ ಜೀವನದಲ್ಲಿ ನಮ್ಮದೇಯಾದ ಬಹಳಷ್ಟು ಕಷ್ಟ ಸುಖ ಎಲ್ಲವೂಗಳ ಮದ್ಯ ನಾವು ಭೂಮಿಗೆ ಬಂದ ಮೇಲೆ ನಮ್ಮ ಕರ್ತ್ಯವ್ಯ ಏನು ಎಂಬುದು ಬಹಾಳಷ್ಟು ಜನರಿಗೆ ಇಂದಿಗೂ ತಿಳಿದು ಬಂದಿಲ್ಲ ಹಣ ಸಂಪತ್ತು ಐಶ್ವರ್ಯ ಇದಕ್ಕೆಲ್ಲ ಮಿಗಿಲಾದದ್ದು ಪ್ರೀತಿ ವಿಶ್ವಾಸ. ದಾನ ಧರ್ಮ ಮಾಡುವ ಮೂಲಕ ಬೇರೆಯವರಲ್ಲಿ ಪ್ರೀತಿ ಗಳಿಸುವುದೇ ಜೀವನದ ಅತಿ ದೊಡ್ಡ ಸಾಧನೆ ಎಂಬುದು ನನ್ನ ವಿಚಾರದಲ್ಲಿ ಅರಿತುಕೊಂಡು ದೇವರು ನೀಡಿದ ಅಲ್ಪ ಸ್ವಲ್ಪ ದಿಂದ ನನ್ನ ಚಿಕ್ಕ ಅಳಿಲು ಸೇವೆ ಮಾಡಲು ಮುಂದಾಗಿದ್ದೆನೆ ಇಲ್ಲಿ ಬಹಾಳಷ್ಟು ವೃದ್ಧರು ಮಾನಸಿಕ ಖಿನ್ನತೆಗೆ ಒಳಗಾದ ಜನರು ಹಾಗೂ ಪುಟಾಣಿ ಮಕ್ಕಳು ಇರುವ ಆಶ್ರಮಕ್ಕೆ ಅಳಿಲು ಸೇವೆ ಮಾಡಲು ನನಗೆ ಅದೃಷ್ಟ ಕಲ್ಪಿಸಿ ಎಂದರು.