ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ತಾಲೂಕಿನಲ್ಲಿ ಬುಧವಾರ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನವರು ತಾಲ್ಲೂಕಿನ ರಂಗಸಮುದ್ರ.ವದನಕಲ್ಲು.ಲಿಂಗದಹಳ್ಳಿ.ಸಾಸಲಕುಂಟೆ.ಈ ಭಾಗದಲ್ಲಿ ವಿವಿಧ ಕಮಾಗಾರಿಗಳನ್ನು ಗುದ್ದಲಿ ಪೂಜೆ ನೆರೆವರಿಸಿ ಮಾತನಾಡಿದ ಅವರು ಈ ಬಾರಿ ಚುನಾವಣೆಯ ಜವಾಬ್ದಾರಿ ತಾಲೂಕಿನ ಜನರ ಮೇಲಿದೆ ಸುಳ್ಳು ಹೇಳಿಕೊಂಡು ಪ್ರತಿ ಬಾರಿ ಆಶುವಷಣೆಗಳು ಹೇಳಿಕೊಂಡು ಮತ ಕೇಳುವವರಿಗೆ ಬೆಂಬಲಿಸುತ್ತಿರೋ ಪ್ರಾಮಾಣಿಕವಾಗಿ ನಿಮ್ಮ ಮುಂದೆ ಇರುವ ಅಭಿವೃದ್ಧಿ ಕಾಮಗಾರಿಗಳು ಗಮನಿಸಿ ಮತ ನೀಡುತ್ತಿರೋ ಅದು ನಿಮ್ಮ ಹೊಣೆಗಾರಿಕೆ.ಈ ಭಾಗದ ಜನರು ಪ್ರಾಮಾಣಿಕವಾಗಿ ಮನದಟ್ಟು ಮಾಡಿಕೊಳ್ಳಬೇಕು ಕಳೆದ 30 ವರ್ಷಗಳಿಂದ ಈ ಭಾಗದಲ್ಲಿ ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಗಮನಿಸಿ. ರಸ್ತೆಗಳು ಸಮುದಾಯ ಭವನಗಳು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಷ್ಟೊಂದು ಅಭಿವೃದ್ಧಿಗಳು ಮಾಡಲಾಗಿದೆ ಪಟ್ಟಿ ಮಾಡಿ ನೋಡಿ ಎಂದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೆಚ್.ವಿ.ವೆಂಕಟೇಶ್ ಮಾತನಾಡಿ ಬಿಜೆಪಿ ಅಧಿಕಾರದಲ್ಲಿ ಕೆಲಸ ಮಾಡುವುದೆ ಕಷ್ಟಕರ ಕೆಲಸ ಅದರಲ್ಲೂ ಶಕ್ತಿಮಿರಿ ಕೆಲಸ ನಮ್ಮ ತಂದೆ ಯವರು ಮಾಡಿದ್ದಾರೆ ಈ ಭಾಗದ ಜನರು ನಮ್ಮ ತಂದೆಯವರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಅದೆ ರೋತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಸಹ ಕೈ ಜೊಡಿಸಬೇಕು ಈ ದಿನ ಈ ಭಾಗದಲ್ಲಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಬಳಿ ಮೂವತ್ತು ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ರಂಗಸಮುದ್ರ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಮುದಾಯ ಭವನ ಉದ್ಘಾಟನೆ ಮಾಡಿದರು, ದೊಡ್ಡೇನಹಳ್ಳಿಯಲ್ಲಿ 13.90 ವೆಚ್ಚದ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಚಳ್ಳಕೆರೆ-ಪಾವಗಡ ರಸ್ತೆಯ ಚಿಕ್ಕತಿಮ್ಮನಹಟ್ಟಿ ಗ್ರಾಮದ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ,ಗೋವರ್ಧನ ಗಿರಿ ಬಳಿ 15 ಲಕ್ಷ ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ, ವದನಕಲ್ ತಿಪ್ಪೆರುದ್ರ ಸ್ವಾಮಿ ದೇವಸ್ಥಾನ ಬಳಿ 10 ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು
ವದನಕಲ್ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಮಲ್ಲಮ್ಮನಹಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಲಿಂಗದಹಳ್ಳಿ-ಸಾಸಲಕುಂಟೆ (ಮುಂದುವರೆದ) 1.50 ಕೋಟಿ ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ,ಸಾಸಲಕುಂಟೆ ಗ್ರಾಮದಲ್ಲಿ 13.90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ,ಕೆಂಚಮ್ಮನಹಳ್ಳಿ ಗ್ರಾಮದಲ್ಲಿ 13.90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ,ಕೆಂಚಮ್ಮನಹಳ್ಳಿ-ಮಲ್ಲಮ್ಮನಹಳ್ಳಿ 50 ಲಕ್ಷ ವೆಚ್ಚದ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು.
ಈ ಅಭಿವೃದ್ದಿ ಕಾಮಗಾರಿಗೆ, ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ. ಶಂಕರ್ ರೆಡ್ಡಿ. ಪುರಸಭಾ ಸದಸ್ಯ ರಾಜೇಶ್ ರವರು,ಸಣ್ಣ ರಾಮರೆಡ್ಡಿ, ಮಲ್ಲಣ್ಣ, ರುದ್ರಮುನಿ,ಚಂದ್ರಶೇಖರ ರೆಡ್ಡಿ,ಅಜಿತ್, ರಘು ನಂದನ್,ಎಪಿಎಂಸಿ ಮಾಜಿ ಅಧ್ಯಕ್ಷ ಮಾರಣ್ಣ, ಕರಿಯಣ್ಣ, ನಾಗರಾಜಪ್ಪ, ಗೋಪಾಲ್ ಗೌಡ, ನಾಗೇಂದ್ರ ನಾಯಕ, ವದನಕಲ್ ಬ್ರಹ್ಮ,ಸಾಸಲಕುಂಟೆ ರಾಜು, ಹನುಮಂತು,ಮದನ್ ರೆಡ್ಡಿ,ಗ್ರಾ. ಪಂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಗೌಡಪ್ಪ, ಮಂಜುನಾಥ್ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ರಾಮಲಿಂಗ ರೆಡ್ಡಿ ಸೇರಿ ಇನ್ನೂ ಹಲವಾರು ಮಂದಿ ಉಪಸ್ಥಿತರಿದ್ದರು.