Janataa24 NEWS DESK
ಪಾವಗಡ: ಶಾಲಾ ಶಿಕ್ಷಣ ಇಲಾಖೆ ಮತ್ತು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿ ಬೆಂಗಳೂರು ರವರ ವತಿಯಿಂದ ಪ್ರತಿ ವರ್ಷ ಕೊಡಲಾಗುವಂತೆ 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತುಮಕೂರು, ಉತ್ತರ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಶ್ರೀಯುತ ರೇಣುಕರಾಜ್ ಜಿ.ಹೆಚ್ ರವರು ಆಯ್ಕೆಯಾಗಿದ್ದಾರೆ.ಅವರಿಗೆ ದಿನಾಂಕ 05-09-2023 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕ ರಾಗಿರುವ ಶ್ರೀಯುತ ರೇಣುಕರಾಜ್ ಜಿ.ಹೆಚ್ ರವರ
ಪ್ರಕಾರ ಒಮ್ಮೆ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಸಾಕು, ಅವರನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರದ್ದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಖಾಸಗಿ ಶಾಲಾ ವಿದ್ಯಾರ್ಥಿಗಳಿಗಿಂತ ಹಿಂದೆ ಉಳಿಯಬಾ ರದು ಎಂದು ಶಕ್ತಿ ಮೀರಿ ಪ್ರಯತ್ನಿಸುವ ಅಪರೂಪದ ಶಿಕ್ಷಕರ ಪೈಕಿ ಒಬ್ಬರಾಗಿರುವ ಇವರು, ದಾನಿಗಳಿಂದ ಸರ್ಕಾರಿ ಶಾಲೆಯ ಪುನಶ್ಚೇತನಕ್ಕೆ, ಮೂಲಸೌಕರ್ಯ ಕ್ಕಾಗಿ ದೇಣಿಗೆ ಸಂಗ್ರಹಿಸಿಕೊಡುವುದೇ ಮೊದಲಾದ ಹಲವು ಪೂರಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ನಡುವಲ್ಲಷ್ಟೇ ಅಲ್ಲದೇ ಕಚೇರಿಗಳಲ್ಲೂ ಸಮಾಜ ಮುಖಿ ಶಿಕ್ಷಕರೆಂದು ಜಿ.ಹೆಚ್.ರೇಣುಕರಾಜ್ ಜನಪ್ರಿಯರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಕೇವಲ ಬೋಧನೆಯಷ್ಟೇ ಅಲ್ಲ, ವಿವಿಧ ಸಂಸ್ಥೆಗಳಿಂದ ಪಡೆದ ಶಾಲಾ ಪ್ರಯೋಗಗಳ ಕಿಟ್ ಮೂಲಕ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ತರಗತಿಯ ಹೊರಗಡೆಯೂ ಮಕ್ಕಳಿಗೆ ಸುಲಭವಾಗಿ ಕ್ಲಿಷ್ಟ ವಿಷಯಗಳನ್ನು ಮನನ ಮಾಡಿಸಿದ್ದಾ ರೆ. ಶಿಕ್ಷಣ ಇಲಾಖೆಯ ದೀಕ್ಷಾ ಜಾಲತಾಣಕ್ಕೆ ಹಾಗೂ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಸ್ಥಾಪಿಸಿ ಅದರಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಸುಮಾರು 290+ ವೀಡಿಯೋಗಳನ್ನು ತಯಾರಿಸಿ ಅಪ್ ಲೋಡ್ ಮಾಡಿ ಸುಮಾರು 2K+ Subscribers ಗಳನ್ನು ಹೊಂದಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದ್ದಾರೆ,ಅದರಲ್ಲೂ ಕೋವಿಡ್ ನ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡಾ ಛಲ ಬಿಡದೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಂತರವಾಗಿರಲೂ ಆನ್ ಲೈನ್ ತರಗತಿ ಗಳನ್ನು ಮತ್ತು ಪ್ರತಿ ಊರಿಗೂ ತೆರಳಿ ILP ಸಂಸ್ಥೆ ಒದಗಿಸಿರುವ ವಿಜ್ಞಾನದ ಕಿಟ್ ಸಹಾಯದಿಂದ ಸಂಚಾರಿ ಪ್ರಯೋಗಾಲಯದ ಮೂಲಕ ಪ್ರಯೋಗಗಳನ್ನು ಮಾಡಿ ತೋರಿಸುವಲ್ಲಿ ಸಿದ್ದಹಸ್ತರಾಗಿದ್ದಾರೆ.

ಕಲಿಕೆಗಾಗಿ ಶಾಲೆಗಳಿಗೆ ಅಗತ್ಯವಾಗಿರುವ ಭೋದನಾ ಪರಿಕರಗಳಾದ ಹಸಿರು ಹಲಗೆ,ಸ್ಮಾರ್ಟ್ ಬೋರ್ಡ್, ಯು.ಪಿ.ಎಸ್ ಅಲ್ಲದೇ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ದಾನಿಗಳ ನೆರವಿನಿಂದ ಕೊಡಿಸಿದ್ದಾರೆ. ಸುಮಾರು 18 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ತಿದ್ದು ಬೇರೆ ಬೇರೆ ತರಬೇತಿ ಮಾದರಿಗಳಲ್ಲಿ ವಿಜ್ಞಾನ ವಿಷಯದ ಕುರಿತು ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ, ತಾಲೂಕು,ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ.ಮತ್ತು DSERT ವತಿಯಿಂದ ಕೊಡಲ್ಪಡುವ ತರಭೇತಿಗಳ ಸಾಹಿತ್ಯ ರಚನೆ ಮತ್ತು ವಿವಿಧ ಕಲಿಕಾ ಸಾಮಗ್ರಿಗಳ ತಯಾರಿಕೆಯಲ್ಲಿ ಇವರ ಪಾತ್ರವಿದೆ.
ವಿದ್ಯಾರ್ಥಿಗಳಿಗೆ NTSE ಮತ್ತು NMMS ಎಂಬ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿಯನ್ನು ನೀಡಿ ಆಯ್ಕೆಯಾಗುವಲ್ಲಿ ಸತತ ಪರಿಶ್ರಮ ಪಡುತಿದ್ದು
ಕರ್ನಾಟಕ ರಾಜ್ಯದಲ್ಲಿರುವ 6 ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಲ್ಲಿ ಅರಸೀಕೆರೆ ಶಾಲೆ ಒಂದಾಗಿದ್ದು ಅದನ್ನು ಯಶಸ್ವಿಯಾಗಿ ಮುಂದುವರೆಸಿ ಕೊಂಡು ಹೋಗುತಿದ್ದು ಅದನ್ನು ನೋಡಲು ವಿವಿಧ ತಾಲೂಕಿನ ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪ್ರತಿ ತರಗತಿಯನ್ನು ಕೂಡಾ ಸ್ವತಃ ತಾವೇ ತಯಾರಿಸಿದ ಪಿಪಿಟಿ ಮತ್ತು ವೀಡಿಯೋಗಳನ್ನು ವಿಜ್ಞಾನದ ವಿಭಾಗವಾರು ಅಂದರೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಮತ್ತು ಜೀವಶಾಸ್ತ್ರಗಳ ತರಗತಿಯನ್ನು ಪ್ರತ್ಯೇಕವಾದ ಪ್ರಯೋಗಾಲಯದಲ್ಲಿ ನಡೆಸುತ್ತಿದ್ದು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್ ಮತ್ತು ಎಲ್.ಇ.ಡಿ ಪರದೆ ಯಲ್ಲಿ ತರಗತಿಯನ್ನು ಮಾಡುತ್ತಿದ್ದಾರೆ ಈ ರೀತಿಯಾಗಿ ವಿದ್ಯಾರ್ಥಿಗಳಿಗಾಗಿ ವಿನೂತನವಾದ ಚಟುವಟಿಕೆಗಳನ್ನು,ಪ್ರಯೋಗಗಳನ್ನು ಕೈಗೊಳ್ಳುವುದರ ಮೂಲಕ ಮುಂದಿನ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು.
ಅಲ್ಲದೇ ಯೋಗ ಶಿಕ್ಷಕನಾಗಿ ಯೋಗಾಸವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ ಪರಿಸರಪ್ರೇಮಿ ಯಾಗಿ ಶಾಲೆಯ ಆವರಣದಲ್ಲಿ ಅನೇಕ ಸಸ್ಯಗಳನ್ನು ಬೆಳಸಿ ಶಾಲಾ ಹಸಿರೀಕರಣದಲ್ಲಿ ಪಾತ್ರವಿದೆ ಅಲ್ಲದೇ
ಸಾಮಾಜಿಕ ಮೌಲ್ಯಗಳನ್ನು ಬೆಳೆಸಲು ಪ್ರತಿ ವರ್ಷವೂ ಕೂಡಾ ಬಡವರಿಗೆ ಆಹಾರದ ಕಿಟ್ ಗಳನ್ನು ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಉನ್ನತ ಶಿಕ್ಷಣಕ್ಕೆ ಹಣಕಾಸಿನ ನೆರವನ್ನು ನೀಡುತ್ತಿರುವುದು ಪ್ರಶಂಸನೀಯವಾಗಿದೆ.
ಅಲ್ಲದೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಯನ್ನು ಬೆಳೆಸಲು ವಿಜ್ಞಾನ ದಿನಾಚರಣೆ, ವಿಜ್ಞಾನ ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಗಳನ್ನು ಆಯೋಜಿಸಿ ತಾಲೂಕು,ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ,ಹೀಗೆ ಅರಸೀಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ತರು,ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸನ್ಮಾನಿತರಾದ ಇವರಿಗೆ ಈಗಾಗಲೇ 2021 ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ,
ಸಂಖ್ಯಾಗೌಡ ಟ್ರಸ್ಟ್ ವತಿಯಿಂದ,ಗಡಿನಾಡು ಕನ್ನಡ ಸಂಸ್ಥೆ, ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್, ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2017-18 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿಜ್ಞಾನ ಶಿಕ್ಷಕರ ಸಂಘದ ವತಿಯಿಂದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ,ಮತ್ತು ರೋಟರಿ ಕ್ಲಬ್ ಪಾವಗಡ ದ ವತಿಯಿಂದ ನೇಷನ್ ಬಿಲ್ಡರ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ.
ಇವರು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಶಾಲೆಯ ಶಿಕ್ಷಕರು ,ಎಸ್.ಡಿ.ಎಂ.ಸಿ ಅದ್ಯಕ್ಷರು ,ಸರ್ವ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.