ಪಾವಗಡ: ಇಮ್ರಾನ್ ಉಲ್ಲಾ
ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದ ಹೆಲ್ಪ್ ಸೊಸೈಟಿ.
ಪಾವಗಡ ತಾಲೂಕಿನ ಸಿಕೆಪುರ ಗ್ರಾಮದ ಪ್ರಾಥಮಿಕ ಶಿಕ್ಷಣದಲ್ಲೇ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆಯುತ್ತಿರುವ ಕ್ರೀಡಪಟು ಕುಮಾರಿ ರೀತುಶ್ರೀ ಗೆ ಸನ್ಮಾನಿಸಿದರು.

ತಂದೆ ಮಹಲಿಂಗಪ್ಪ ತಾಯಿ ಜಯ್ಯಮ್ಮ ಜನ್ಮ ಸ್ಥಳ: ಸಿಕೆ ಪುರ ಪ್ರಾಥಮಿಕ ಶಿಕ್ಷಣ ಸ.ಹಿ.ಪ್ರ ಶಾಲೆ ಸಿಕೆ ಪುರ ರಿಲೇ ಓಟದಲ್ಲಿ ರಾಜ್ಯಮಟ್ಟ 8ನೇ ತರಗತಿಯ ವಿಭಾಗದಲ್ಲಿ ಮೂಡಬಿದರೆ ಆಲ್ವಾಸ್ ಕ್ರೀಡ ಶಾಲೆಗೆ ಆಯ್ಕೆ, ವ್ಯಯಕ್ತಿಕ ಓಟ 800ಮೀ ಓಟ 2022ರಲ್ಲಿ ಕರ್ನಾಟಕ ಸ್ಟೇಟ್ ಅತ್ಲೆಟಿಕ್ಸ್ ಸಂಸ್ಥಯಿಂದ ಕಠೀರವ ಕ್ರೀಡಾಂಗಣದಲ್ಲಿ ನಡೆದ ಜೂನಿಯರ್ ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ 800ಮೀಟರ್ ಓಟದಲ್ಲಿ ಪ್ರಥಮ ಸ್ಥಾನ
2022ರಲ್ಲಿ ಅಸ್ಸಾಂ ನಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನ ಆಂದ್ರಪ್ರದೇಶ ಗುಂಟೂರಿನಲ್ಲಿ ನಡೆದ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಸ್ಥಾನ ಈಗ ಹೋದುತ್ತಿರುವ ತರಗತಿ ಪ್ರಥಮ ಪಿಯುಸಿ ಈ ಕೀಡಾಪಟುವನ್ನು ಗುರತಿಸಿ 31/12/2022 ರಂದು ಪಾವಗಡ ಹೆಲ್ಪ್ ಸೊಸೈಟಿ ಯಿಂದ ಸನ್ಮಾನಿಸಲಾಯಿತು.
ರೀತುಶ್ತೀ ರವರ ಶಿಕ್ಷಕರಾದ ನಿವೃತ್ತಿ ದೈಹಿಕ ಶಿಕ್ಷಕರಾದ ಹನುಮಂತರಾಯಪ್ಪ ಮಾತನಾಡಿ ರೀತುಶ್ರಿ ಈ ಮಟ್ಟಕ್ಕೆ ಬೆಳೆಯಲು ಮೊದಲು ಅವರ ಕ್ರೀಡಾ ಶ್ರದ್ಧೆ ಮೂಲಕಾರಣ ಎಂದು ಹೇಳಬಹುದು ಯಾವುದೇ ವಿಷಯ ತೆಗೆದುಕೊಂಡು ನೋಡಿ ಶಿಕ್ಷಕರು ವಿಷಯದ ಬಗ್ಗೆ ಹೇಳುವ ವೇಳೆ ಆಸಕ್ತಿಯಿಂದ ಗಮನಿಸಿದರೆ ಅದರ ಪರಿಣಾಮ ರೀತುಶ್ರೀ ರೀತಿಯಲ್ಲಿ ನಾವು ಕಾಣಬಹುದಾಗಿದೆ.ಹಾಗಾಗಿ ನನ್ನ ವಿದ್ಯಾರ್ಥಿ ಎಂಬುದಾಗಿ ಸಮಾಜದಲ್ಲಿ ನನಗೆ ಗೌರವ ತಂದುಕೊಟ್ಟ ಹಾಗೇ ಅಲ್ಲವೇ.ಪ್ರತಿಯೊಬ್ಬ ವ್ಯೆಕ್ತಿಯಲ್ಲಿ ತನ್ನದೇ ಯಾದ ಒಂದು ಪರಿಶ್ರಮ ಇದ್ದಾಗಲೆ ಇಂತಹ ಸಾದನೆಗಳು ಮಾಡಲು ಸಾದ್ಯ ಎಂದರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಸಂದ್ಯ ಶಶಿಕಿರಣ್,
ಹೆಚ್ ಆರ್ ರಾಕೇಶ್, ಪುನಿತ್ ಕುಮಾರ, ರೀತೂಶ್ರಿ ಕುಂಟುಂಬದವರು ಹಾಜರಿದ್ದು ಶುಭ ಹಾರೈಸಿದರು.