ಬೆಂಗಳೂರು: ರಾಜ್ಯ ಸರ್ಕಾರದಿಂದ (Karnataka State Government) ಎಲ್ಲಾ ಗ್ರಾಮ ಪಂಚಾಯ್ತಿಗಳ (Grama Panchayat) ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ.

ಈ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಳ ಮಾಡಿ, ಗುಡ್ ನ್ಯೂಸ್ ನೀಡಲಾಗಿದೆ.ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ.

ಅದರಂತೆ ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರುಗಳಿಗೆ ರೂ.3,000, ಉಪಾಧ್ಯಕ್ಷರಿಗೆ ರೂ.2,000 ಹಾಗೂ ಸದಸ್ಯರಿಗೆ ರೂ.1000 ಮಾಸಿಕ ಗೌರವಧನವನ್ನು ನಿಗಧಿಪಡಿಸಲಾಗಿತ್ತು ಎಂದಿದ್ದಾರೆ.ಪ್ರಸ್ತುತ ಗೌರವಧನವನ್ನು (Honorarium) ಪರಿಷ್ಕರಿಸಿ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ರೂ.6,000, ಉಪಾಧ್ಯಕ್ಷರುಗಳಿಗೆ ರೂ.4,000 ಹಾಗೂ ಸದಸ್ಯರುಗಳಿಗೆ ರೂ.2,000 ಮಾಸಿಕ ಗೌರವಧನವನ್ನು ಪರಿಷ್ಕರಿಸಿ ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ.