ತುರುವೇಕೆರ:ಮಂಜುನಾಥ್

ತುರುವೇಕೆರೆ ತಾಲೂಕಿನ ಕೋಡಿ ನಾಗಸಂದ್ರ ಗೇಟ್ ಬಳಿ ಇರುವ ಎಸ್ ಬಿ ಜೆ ಶಾಲಾ ಆವರಣದ ಮುಂಭಾಗ ಕೋಡಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಇಂದು ಮೊದಲನೇ ವರ್ಷದ ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು,
ಇದರ ಉದ್ಘಾಟನೆಯನ್ನು ಪಟೇಲ್ ರಾಜು, ಗುಡಿಗೌಡ ಮಂಜಣ್ಣ, ಶಂಕರ್, ಗೋಪಾಲಯ್ಯ, ದಾಸ್ ಅಂಡ್ ದಾಸ್ ಗ್ರೂಪ್ (ಕಂಟ್ರಾಕ್ಟರ್) ಶಿವು ಇವರುಗಳು ಉದ್ಘಾಟನೆ ನೆರವೇರಿಸಿದರು,

ಇನ್ನು ಈ ಪಂದ್ಯಾವಳಿಯಲ್ಲಿ ಮೊದಲನೇ ಬಹುಮಾನವಾಗಿ 10,001,ದ್ವಿತೀಯ ರೂ.7001, ತೃತೀಯ 5001,ನಾಲ್ಕನೇ ಬಹುಮಾನ 3001,ಗಳನ್ನು ಜೊತೆಗೆ ಟ್ರೋಪಿ ಒಳಗೊಂಡಿದ್ದು ,

ಒಟ್ಟಾರೆ ಈ ಪಂದ್ಯಾವಳಿಯಲ್ಲಿ ಮಾಯಸಂದ್ರ ಹೋಬಳಿಯ 18 ತಂಡಗಳು ಭಾಗವಹಿಸಿದ್ದು, ಈ ಕಬ್ಬಡಿ ಪಂದ್ಯಾವಳಿಯನ್ನು ಕೋಡಿ ಬಾಯ್ಸ್ ತಂಡ ಆಯೋಜನೆ ಮಾಡಲಾಗಿದ್ದು , ಇನ್ನು ಈ ಸಂದರ್ಭದಲ್ಲಿ ದಿಲೀಪ್ ರಾಜ್, ಕರವೇ ತಾಲೂಕು ಉಪಾಧ್ಯಕ್ಷರು, ಮಂಜುನಾಥ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು, ದರ್ಶನ್ ಕಂಚಿಹಟ್ಟಿ, ರಾಘವೇಂದ್ರ ಛಾಯಾಪ್ರಕಾಶ್, ಮಂಜುನಾಥ್, ಶಶಿಕಲಾ ಹನುಮೇಗೌಡ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ತೀರ್ಪುಗಾರರಾದ, ಗಿರೀಶ್, ಸ್ವಾಮಿ ,ಚಿರಂಜೀವಿ, ಪುನೀತ್, ಸ್ಕಂದ ಬಾಯ್ಸ್ ಟಿ ಬಿ ಕ್ರಾಸ್, ಮುಬಾರಕ್ ಮಟನ್ ಸ್ಟಾಲ್, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಹಾಜರಿದ್ದರು.