Document

ಮಾದಿಗ ಸಮುದಾಯಕ್ಕೆ ಸಚಿವರ ಸ್ಥಾನ ನೀಡಲು ನ್ಯಾಯವಾದಿ ಹನುಮೇಶ್ ಗುಂಡೂರ್ ಆಗ್ರಹ.

Janataa24 NEWS DESK

IMG 20230518 WA0004



ಬೆಂಗಳೂರು: ಬಾರಿಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ಬರಲು ಸಹಕಾರಿಯಾಗಿದೆ ನಮ್ಮ ಮಾದಿಗ ಸಮುದಾಯಕ್ಕೆ ಸೇರಿದ ಹಿರಿಯ ಕಾಂಗ್ರೆಸ್
ನಾಯಕರಾದ ಆರ್.ಬಿ.ತಿಮ್ಮಾಪುರ,ಕೆ.ಎಚ್. ಮುನಿಯಪ್ಪ, ಮಾಯಕೊಂಡ ಕ್ಷೇತ್ರದ ಬಸವಂತಪ್ಪ ಇವರುಗಳಿಗೆ ಈ ಬಾರಿಗೆ ಸಚಿವರನ್ನಾಗಿ ನೇಮಕ ಮಾಡಲು ಕಾಂಗ್ರೆಸ್ ಪಕ್ಷದ ಯುವ ನಾಯಕ ಹನುಮೇಶ್ ಗುಂಡೂರು ವಕೀಲರು ಮನವಿ ಮಾಡಿದರು.


ಈ ಬಾರಿ ದಲಿತರು ಶೇ 60% ಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆ ಆಗಿವೆ ಕಾರಣ ಕಾಂಗ್ರೆಸ್ ಪಕ್ಷ ಮಾತ್ರ ದಲಿತರಿಗೆ ಒಳ್ಳೆಯ ಯೋಜನೆ ಸಾಮಾಜಿಕ ನ್ಯಾಯ ನೀಡುವ ಪಕ್ಷ ಎನ್ನುವ ದಲಿತರಿಗೆ ಅಚಲವಾದ ನಂಬಿಕೆ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದೆ.
ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆ ಅನುಗುಣವಾಗಿ ಬಜೆಟ್ ಹಣಕಾಸು ನಿಗದಿ ನಿಗಮಗಳಿಗೆ ಹೆಚ್ಚು ಅನುದಾನ,ಕಾಂಟ್ರಾಕ್ಟ್ ಗಳಲ್ಲಿ ದಲಿತರಿಗೆ ಮೀಸಲಾತಿ,ಉದ್ಯಮ ಸ್ಥಾಪನೆ ಸಾಕಷ್ಟು ಯೋಜನೆಗಳನ್ನ ನೀಡಿದ್ದಾರೆ ಈ ತರಹ ದಲಿತರ ಅಭಿವೃದ್ಧಿಗಾಗಿ ಯೋಜನೆ ಯೋಚನೆ ಕಾಂಗ್ರೆಸ್ ಪಕ್ಷ ಮಾಡುತ್ತದೆ ಎನ್ನುವ ಆಶಾದಾಯಕ ಮನೋಭಾವದಿಂದ ಈ ಬಾರಿ ಬಹುತೇಕ ದಲಿತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡುವ ಮೂಲಕ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗಿದೆ.
ಮಾದಿಗ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸರ್ವರಿಗೂ ಸಮಪಾಲು ಸಮಬಾಳಿಗಾಗಿ ಜನಸಂಖ್ಯೆ ಅನುಗುಣವಾಗಿ ಹೆಚ್ಚು ಮಂತ್ರಿ ಸ್ಥಾನಗಳನ್ನು ನೀಡಬೇಕು ಆ ಮೂಲಕ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿಯಾಗಿ ಮಾದಿಗ ಸಮುದಾಯ ಪಕ್ಷದ ಬೆನ್ನೆಲುಬು ನಿಲ್ಲುತ್ತದೆ.

Document

Leave a Reply

Your email address will not be published. Required fields are marked *