ಬಾದಾಮಿ: ರಾಜೇಶ್.ಎಸ್.ದೇಸಾಯಿ
ಬಾದಾಮಿ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಬಾದಾಮಿ ಮತಕ್ಷೇತ್ರದ ಹಾಲಿ ಶಾಸಕ ಸಿದ್ಧರಾಮಯ್ಯ ನವರು ಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ಪುನಃ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಜಾಲಿಹಾಳ ಜಿ.ಪಂ. ಭಾಗದ ಮುಖಂಡರು ಆಗ್ರಹಿಸಿದರು.

ಅವರು ಬುಧವಾರ ನಗರದ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಎಫ್.ಆರ್.ಪಾಟೀಲ, ಹೊಸೂರು ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷರಾದ ಬಸವರಾಜ ಡೊಳ್ಳಿನ,ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಈಶ್ವರಯ್ಯ ಫಳಾರಿ,ಮಲ್ಲಿಕಾರ್ಜುನ ಮೇಟಿ, ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಾದಾಮಿ ಶಾಸಕರಾದ ನಂತರ ಮಲಪ್ರಭಾ ನದಿಯಿಂದ ನೀರು ಬಿಡುವಂತೆ ಮಾಡಿ ವರ್ಷದುದ್ದಕ್ಕೂ ಬೆಳೆ ಬೆಳೆಯಲು ಸಹಕಾರಿಯಾಗಿದೆ, ಹೊಳೆಸಾಲ ಭಾಗದ ಜನರಿಗೆ ರೈತರಿಗೆ ಆಶಾಕಿರಣವಾಗಿದ್ದಾರೆ. ಕಳೆದ 4 ವರ್ಷಗಳಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಸುಮಾರು 3500 ಕೋಟಿ ರೂ.ಅನುದಾನ ತಂದಿದ್ದಾರೆ. ಬಾದಾಮಿ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಿ ಆಗಿದೆ. ಆದಕಾರಣ 2023 ರ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಇಲ್ಲಿಂದಲೇ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಲಿ. ಬರಿ ನಾಮಪತ್ರ ಸಲ್ಲಿಸಿ ಹೋದರೆ ಸಾಕು ನಾವು ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಬಾದಾಮಿ ಅವರಿಗೆ ದೂರವಾದರೂ ಪರವಾಗಿಲ್ಲ ಇಲ್ಲಿಂದಲೇ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡದಿದ್ದರೆ ಬೆಂಗಳೂರಿನ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ತಮ್ಮ ಪ್ರೀತಿ ಭರಿತ.ಆಕ್ರೋಶವನ್ನು ಹೊರಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಾತರಕಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಆರ್.ಪಾಟೀಲ, ರಂಗನಗೌಡ.ಗೌಡರ, ಬಸಪ್ಪ ಗಡಾದ, ಗಂಗಾಧರ ವಡ್ಡರ,ರಂಗು ಗೌಡರ, ಪ್ರಕಾಶ.ಎಸ್. ದೇಸಾಯಿ, ರಂಗನಾಥ ಪಾಟೀಲ, ಮಹೇಶ ದೇವರಮನಿ, ಮಲ್ಲಪ್ಪ ಗಡಾದ, ಹುಲ್ಲಪ್ಪ ಬಿಳೇಕಲ್,ಮಲ್ಲಪ್ಪ ಸಿಂಗಾಡಿ,ಹನಮಂತ ಜಾಲಿಕಟ್ಟಿ, ಶಿವಣ್ಣ ಹೊಸೂರ ಉಪಸ್ಥಿತರಿದ್ದರು.