Janataa24 NEWS DESK

ಗುಬ್ಬಿ: ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯನ್ನು ಖಂಡಿಸಿ ಹಾಗೂ ಕರ್ನಾಟಕದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ತನಿಕೆ ನಡೆಸುವಂತೆ ಡಿ. ಎಸ್.ಎಸ್.ಗುಬ್ಬಿ ತಾಲೂಕು ಶಾಖೆ ವತಿಯಿಂದ ಪ್ರತಿಭಟನೆ ನಡೆಸಿದರು .
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ಯವರಿಗೆ ವಾದ್ಯಗೋಷ್ಠಿಯೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ತಾಲೂಕು ಕಚೇರಿಯ ಮುಂಬಾಗ ತಲುಪಿದರು. ಇದೇ ಸಂದರ್ಭದಲ್ಲಿ ದಲಿತ್ ಗಂಗಣ್ಣನವರು ಕ್ರಾಂತಿ ಗೀತೆ ಹಾಡುವ ಮೂಲಕ ಪ್ರತಿಭಟನಾಕಾರರನ್ನು ಉರಿದುಂಬಿಸಿದರು
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಯ್ಯ ಮಾತನಾಡಿ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಇಡೀ ದೇಶವೇ ತಲೆತಗ್ಗಿಸುವ ವಿಚಾರವಾಗಿದೆ ಮಣಿಪುರದ ಬಿಜೆಪಿ ಸರ್ಕಾರವನ್ನು ವಜಾ ಗೊಳಿಸಿ ರಾಜ್ಯಪಾಲರ ಆಳ್ವಿಕೆಗೆ ನೀಡಬೇಕು ಹಾಗೂ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಮರು ಪರಿಶೀಲನೆ ನಡೆಸಬೇಕು.
ಗುಬ್ಬಿತಾಲೂಕಿನಲ್ಲಿ ದಲಿತರ ಸಮಸ್ಯೆಗಳು ಸರಮಾಲೆಯಂತಿದ್ದು ಉನ್ನತ ಅಧಿಕಾರಿಗಳು ದಲಿತರ ಬೇಡಿಕೆಗೆ ಸ್ಪಂದಿಸಬೇಕಾಗಿದೆ
ನಿಟ್ಟೂರು ಹೋಬಳಿಯ ಕರಡಿ ಕಲ್ಲು ವ್ಯಾಪ್ತಿಯಲ್ಲಿ ದಲಿತ ಜನಾಂಗದ ಮುನಿಯಪ್ಪನವರು ಸುಮಾರು 50 ವರ್ಷಗಳಿಂದ ಜಮೀನನ್ನು ಪರಬಾರೆ ಮಾಡುತ್ತಿದ್ದು ಉನ್ನತ ಜಾತಿಯವರು ಅದನ್ನು ಕಸಿದುಕೊಳ್ಳುವ ಉನ್ನಾರ ಮಾಡುತ್ತಿದ್ದಾರೆ.
ಸುಮಾರು ವರ್ಷದಿಂದ ದಲಿತ ಮುಖಂಡರು ಜನಪರವಾಗಿ ಹೋರಾಟ ನಡೆಸುತ್ತಿದ್ದು ಅವರಿಗೆ ವಸತಿ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
ದಲಿತ ಮುಖಂಡ ಜಗನ್ನಾಥ್ ಮಾತನಾಡಿ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಇಡೀ ದೇಶವೇ ತಲೆತಗ್ಗಿಸುವ ವಿಷಯ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿರುವುದು ಸರ್ವರು ಸಮಾನತೆಯಿಂದ ಸಹಬಾಳ್ವೆಯಿಂದ ಜೀವನ ನಡೆಸಲು.
ಆದರೆ ಮನುಷ್ಯತ್ವ ಮಾನವೀಯತೆ ಮರೆತವರು ಮಹಿಳೆಯರನ್ನು ಬೆತ್ತಲೆ ಗೊಳಿಸಿದ್ದಾರೆ. ನರೇಂದ್ರ ಮೋದಿ ಅವರು ಭೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆಯನ್ನು ನೀಡಿದ್ದಾರೆ. ಆದರೆ ಮಣಿಪುರದಲ್ಲಿ ಹೋರಾಟ ನಡೆಸಿದ ಎಷ್ಟೋ ಜನರು ಪ್ರಾಣ ತೆತ್ತು ಸೆರೆವಾಸ ಅನುಭವಿಸುತ್ತಿದ್ದಾರೆ.
ದಲಿತರಿಗೆ ಸರ್ಕಾರ ಬಹಳ ಅನ್ಯಾಯ ಮಾಡುತ್ತಿದೆ. ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿದ್ದಾರೆ.
ವಿದ್ಯಾರ್ಥಿ ನಿಲಯದಲ್ಲಿ ಊಟ ಕಡಿತಗೊಳಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರನ್ನು ಕಡಿತಗೊಳಿಸಿದ್ದಾರೆ.
ಅದೇ ಬ್ರಾಹ್ಮಣ ಸಮುದಾಯದವರಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ದಲಿತರಿಗೆ ಶಿಕ್ಷಣದಿಂದ ವಂಚಿ ವಂಚಿಸಲು ಉನ್ನರ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಸ್ಮಶಾನ ಕ್ಕೆ ನೀಡಿದ ಜಾಗದಲ್ಲಿ ಉಳ್ಳವರು ತೆಂಗಿನ ಸಸಿ ಅಡಿಕೆ ಸಸಿ ನೆಟ್ಟು ಜಾಗ ಕಬಳಿಸುವ ಕೆಲಸ ಮಾಡುತ್ತಿದ್ದಾರೆ. ದಲಿತರಿಗೆ ಸ್ಮಶಾನ ನೀಡುವ ಕೆಲಸ ಮಾಡಬೇಕು.
ಜಿ ಅರಿವೆಸಂದ್ರ ಗ್ರಾಮದಲ್ಲಿ ದಲಿತ ಕಾಲೋನಿಯ ಪಕ್ಕ ಇಟ್ಟಿಗೆ ಫ್ಯಾಕ್ಟ್ರಿಯನ್ನು ತೆರೆವುಗೊಳಿಸಬೇಕು. ಬೊಮ್ಮರಸನಹಳ್ಳಿ ಸರ್ವೆ ನಂಬರ್ 101ರಲ್ಲಿ 6.13ಎಕರೆ ಜಮೀನು ಜಿಲ್ಲಾ ಅಧಿಕಾರಿಯ ಹೆಸರಿನಲ್ಲಿದ್ದು ಅದನ್ನು ಅದಲಗೆರೆ, ಬೊಮ್ಮರಸನಹಳ್ಳಿ, ದಲಿತರಿಗೆ ನಿವೇಶನ ನೀಡಬೇಕು. ಹಾಗೂ ಎಂಎನ್ ಕೋಟೆ ಇಂದ ಕೋಟೆ ಗುಡ್ಡಕ್ಕೆ ಹೋಗುವ ರಸ್ತೆಯನ್ನು ಸವರ್ಣಿಯರು ಆಕ್ರಮಿಸಿದ್ದು ಇದನ್ನು ತೆರವುಗೊಳಿಸಿ ಹಾಗೂ ದಲಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಲಿತ ಸಂಘಟನೆ ಮುಖಂಡರು ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿಯ ಮನವಿಯನ್ನು ಸ್ವೀಕರಿಸಿ ತಹಶೀಲ್ದಾರ್ ಬಿ ಆರತಿ ಮಾತನಾಡಿ ಬೇಡಿಕೆಯನ್ನು ಕಾನೂನು ನಿಯಮಾನುಸಾರ ನೆರವೇರಿಸುತ್ತೇವೆ ಎಂದುಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹಿರಿಯ ಹೋರಾಟಗಾರ ಮಾರನಹಳ್ಳಿ ಶಿವಣ್ಣ,ಎನ್ ಎ ನಾಗರಾಜ್, ನಾಗಭೂಷಣ್ ತಾಲೂಕು ಉಸ್ತುವಾರಿ ಸಂಚಾಲಕರಾದ ,ಅದಲಗೆರೆ ಈಶ್ವರಯ್ಯ,ಕಡಬ ಶಂಕರ್, ಜಿ ಅರಿವೇಸಂದ್ರ ಕೃಷ್ಣಪ್ಪ , ಕೋಟೆ ಕಲ್ಲೇಶ್,ಕಿಟ್ಟದಗುಪ್ಪೆ ನಾಗರಾಜ್, ಕುಂದರನಹಳ್ಳಿ ನಟರಾಜ್, ರವಿ, ದೊಡ್ಡಯ್ಯ, ರಮೇಶ್, ಶಿವಣ್ಣ,ಬೆಟ್ಟಸ್ವಾಮಿ,ಇತರರು ಹಾಜರಿದ್ದರು.
ವರದಿ
ಗುಬ್ಬಿ: ಶ್ರೀಕಾಂತ್