Document

ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಹ ಬಿಡದ ತಾರತಮ್ಯ: ಮಾನವ ಹಕ್ಕುಗಳ ಉಲ್ಲಂಘನೆ.

Janataa24 NEWS DESK

IMG 20231104 WA0019



ಪಾವಗಡ: ಪಾವಗಡದ ಹೆಣ್ಣುಮಕ್ಕಳ ಪ್ರಾರ್ಥಮಿಕ ಪಾಠ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ.

IMG 20231104 WA0025



ಮಕ್ಕಳಲ್ಲಿ ವಿಭಿನ್ನ ರೀತಿಯ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಇಂತಹ ಒಂದು ಕಾರ್ಯಕ್ರಮ ಮಾಡಲು ಮುಂದಾಗಿದ್ದು. ಇಂತಹ ಕಾರ್ಯಕ್ರಮದಲ್ಲಿ ಹತ್ತು ಹಲವು ರೀತಿಯ ಪ್ರತಿಭೆಗಳನ್ನು ಹೊರತರುವಂತಹ ನಿಟ್ಟಿನಲ್ಲಿ ಮಾಡುವಂತಹ ಕಾರ್ಯಕ್ರಮವೇ ಪ್ರತಿಭಾಕಾರಂಜಿ ಆದರೆ ಇಲ್ಲೂ ಸಹ ಬಿಡದ ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.

IMG 20231104 WA0021



ಮೊದಲಿಂದಲೂ ಶಾಲೆಗಳಲ್ಲಿ ಹಣವಂತರ ಮಕ್ಕಳಿಗೆ ಪ್ರಭಾವಿಗಳ ಮಕ್ಕಳಿಗೆ ಆಯ್ಕೆ ಮಾಡುವುದು ಸರ್ವೇಸಾಮಾನ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಪರಿಚಿತ ವ್ಯಕ್ತಿಗಳ ಮಕ್ಕಳಿಗೆ ಆದ್ಯತೆ ನೀಡುವುದು ಹಲವು ತರದ ಇಂತಹ ಕಾರ್ಯಕ್ರಮಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕಣ್ಣು ಮುಚ್ಚಿಕುಳಿತ್ತಿದ್ದಾರೆ.

IMG 20231104 WA0024



ಬೆಳಗಿನಿಂದಲೂ ಬಿಸಿಲಿನಲ್ಲಿ ಕುಳಿತು ವಿವಿಧ ರೀತಿಯ ಸ್ಥಬ್ದ ಚಿತ್ರಗಳನ್ನು ಉತ್ತಮ ರೀತಿಯಲ್ಲಿ ಮಾಡಿ ಪ್ರಶಸ್ತಿ ಗಳಿಸೋಕಿಂತ ಉತ್ತಮವಾಗಿ ಕಾಣಬೇಕು ಎಂಬ ಅಭಿಲಾಷೆಯೊಂದಿಗೆ, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

IMG 20231104 WA0018
IMG 20231104 WA0020

ಇಂತಹ ಕಾರ್ಯಕ್ರಮದಲ್ಲಿ ಅವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ದೊರಕಿಸಿ ಕೊಡದ ಶಿಕ್ಷಕರ ವೃಂದ ಒಂದು ಕಡೆ ಅದರೆ ಸರ್ಕಾರದ ಆದೇಶ ಎಂಬುದು ತಿಳಿದು ಕಾಟಚಾರಕ್ಕೆ ಮಾಡಿ ಕಾರ್ಯಕ್ರಮ ಮುಗಿಸಿ ಕೈ ತೊಳೆದುಕೊಳ್ಳಬೇಕು ಎಂಬುದು ಮತ್ತೊಂದು ಕಡೆ.

IMG 20231104 WA0022
IMG 20231104 WA0026

ವಾಸ್ತವವಾಗಿ ಕೆಲ ನಿಯಮಗಳನ್ನೇ ಪಾಲಿಸದ ಶಿಕ್ಷಣ ಇಲಾಖೆ ಅಧಿಕಾರಿಗಳು.


ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *