ಚಿತ್ರದುರ್ಗ: ಭಗತ್ ಸಿಂಗ್ ನೇಣುಗಂಬಕ್ಕೇರುವ ಪಾತ್ರದ ಅಭ್ಯಾಸದ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಓರ್ವ ವಿದ್ಯಾರ್ಥಿ ಮೃತಪಟ್ಟ ಘಟನೆ ಚಿತ್ರದುರ್ಗ ನಗರದ ಕೆಳಗೋಟೆಯಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಎಸ್.ಎಲ್.ವಿ. ಶಿಕ್ಷಣ ಸಂಸ್ಥೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಜಯ್.
ಪೋಷಕರ ಆಕ್ರಂದನ ಮುಗಿಲುಮಟ್ಟಿದೆ.

ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಗತ್ ಸಿಂಗರ ಪಾತ್ರ ಮಾಡಬೇಕಿದ್ದ ಸಂಜಯ್. ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆಯ ಸಮಯದಲ್ಲಿ ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೋಷಕರು ಮನೆಯಲ್ಲಿ ಇಲ್ಲದೇ ಇದ್ದ ಸಮಯದಲ್ಲಿ ಪಾತ್ರ ಅಭ್ಯಾಸ ಮಾಡುತ್ತಿದ್ದ ಸಂಜಯ್.
ನೇಣಿಗೆ ಕೊರಳೊಡ್ಡುವ ಸಂದರ್ಭದ ದೃಶ್ಯ ಫ್ಯಾನಿಗೆ ಹಗ್ಗವನ್ನು ಕಟ್ಟಿಕೊಂಡಿದ್ದನು.
ಆಕಸ್ಮಿಕವಾಗಿ ಜಾರಿದ ಸ್ಟೂಲ್..!
ಕುತ್ತಿಗೆಯನ್ನು ಬಿಗಿದ ಹಗ್ಗ ಸಂಜಯ್ ನ ಪ್ರಾಣವನ್ನೇ ತೆಗೆದು ಬಿಟ್ಟಿದೆ.