ಪಾವಗಡ: ಇಮ್ರಾನ್ ಉಲ್ಲಾ
ಇವತ್ತಿನ ದಿನ ಹೆಣ್ಣು ಮಕ್ಕಳಿಗೆ ಇಲ್ಲಸಲ್ಲದ ಸಮಸ್ಯೆಗಳು ಇದ್ದರೂ ಯಾವುದು ಸಹ ಬಗೆಹರಿಸುವ ನಿಟ್ಟಿನಲ್ಲಿ ಇಲ್ಲ.

ಹದಿಹರೆಯದ ಹೆಣ್ಣು ಮಕ್ಕಳು ಶಾಲೆಯಿಂದ ಗ್ರಾಮಕ್ಕೆ ತೆರಳಲು ಪ್ರತಿದಿನ ಎಂಟು ಕಿಲೋಮೀಟರ್ ನಡೆಯಬೇಕು.
ಆಟೋ ಇಲ್ಲ ಸಾರಿಗೆ ವ್ಯವಸ್ಥೆ ಇಲ್ಲ ನಮ್ಮ ಸಮಸ್ಯೆ ಬಗೆಹರಿಸಲು ಇನ್ನು ಯಾರು ಮುಂದೆ ಬಂದಿಲ್ಲ.
ಪ್ರತಿದಿನ ಜಂಗಮರಹಳ್ಳಿ.ಮರೊರು.ಟುಮ್ ಕುಂಟೆ ಗೇಟ್ ಯಿಂದ ಮಂಗಳವಾಡ ಕಾಲೇಜಿಗೆ ಹೋಗಲು ಪ್ರತಿದಿನ ಎಂಟು ಕಿ.ಲೋ. ನಡೆಯಬೇಕು.
ಇರುವ ಒಂದು ಸಾರಿಗೆ ಬಸ್ ಬೆಳಿಗ್ಗಿನ ಜಾವ ಹೊಗಿಬಿಡುತ್ತದೆ. ಕಾಲೇಜು ಮತ್ತು ಶಾಲೆಯ ವೇಳೆಗೆ ಹೊಗಲು ಅನುಕೂಲ ವಾಗುತ್ತಿಲ್ಲ ಪ್ರತಿದಿನ 12 ರಿಂದ 15 ಜನ ಹೆಣ್ಣು ಮಕ್ಕಳು ಈ ರಸ್ತೆಯಲ್ಲಿ ಪ್ರತಿದಿನ ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ.
ನಮ್ಮ ಸಮಸ್ಯೆ ಆಲಿಸುವವರು ಯಾರು ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿದೆ.