Document

ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಗ್ಗತ್ತಲಲ್ಲಿ ಮುಳುಗಿದ ಗ್ರಾಮ

Janataa24 NEWS DESK

IMG 20231005 WA0021



ಗುಬ್ಬಿ: ಬೆಸ್ಕಾಂ ಇಲಾಖೆಯು ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ನಯನ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.

IMG 20231005 WA0019



ತಾಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಬೆಸ್ಕಾಂ ಇಲಾಖೆಯು ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ.
ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ನಡುವೆ ಬೆಸ್ಕಾಂ ಇಲಾಖೆಯು ಕಣ್ಣ ಮುಚ್ಚಲೆ ಆಡುತ್ತಿದೆ.
ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಆಹಾಕಾರ ಉಂಟಾಗಿದೆ.
ಸಂಬಂಧಪಟ್ಟ ಅಧಿಕಾರಿಗಳಾದ ಎಸ್ ಓ, ಎ ಇ ಇ,ಗಮನಕ್ಕೆ ತಿಳಿಸಿದರೆ ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆ. ಮತ್ತು ರೈತರ ಕರೆಗಳನ್ನು ಸ್ವೀಕರಿಸುತ್ತಿಲ್ಲ.

IMG 20231005 WA0020



ವಿದ್ಯುತ್ ಕಂಬಗಳಿಗೆ ಜಂಗಲ್ ಮತ್ತು ಮರಗಳು ಸುತ್ತಿಕೊಂಡಿದ್ದು ಜಂಗಲ್ ತೆರವು ಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಮಾರಶೆಟ್ಟಿಹಳ್ಳಿ ಗ್ರಾಮದ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿಯನ್ನು ತೋರುತ್ತಿದ್ದಾರೆ ಅದನ್ನು ಖಂಡಿಸಿ ಸಾವಿರಾರು ಸಂಖ್ಯೆಯಲ್ಲಿ ಬೆಸ್ಕಾಂ ಕಛೇರಿ ಎದುರು ಉಗ್ರ ಸ್ವರೂಪ ಹೋರಾಟವನ್ನು ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

IMG 20231005 WA0018



ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪರಮಶಿವಯ್ಯ, ಬೋರೇಗೌಡ, ಸಿದ್ದಲಿಂಗಯ್ಯ, ಬಸವಲಿಂಗಯ್ಯ, ನಾಗಣ್ಣ,ಮಹೇಶ್ ಇತರರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *