Janataa24 NEWS DESK
ಪಾವಗಡ ಮೂಲದ ವಿಜಯ್ ಕುಮಾರ್ ಎಂ.ಎನ್ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಪಾವಗಡ ತಾಲೂಕಿನ ಡಾ. ವಿಜಯ್ ಕುಮಾರ ಮೇಗಲ್ ಪಾಳ್ಯ ಅವರು 17.10.2023 ರಂದು ನಡೆದ 58ನೇ ಘಟಿಕೋತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಸ್ಥಳಾಂತರ ಮತ್ತು ಪುನರ್ವಸತಿ ಒಂದು ಅನುಭವ ಶ್ರೀಯುತರು ಪಾವಗಡ ತಾಲ್ಲೂಕಿನ, ಮೇಗಲ ಪಾಳ್ಯ ಗ್ರಾಮದ ಶ್ರೀ ಎಂ ನಾಗಣ್ಣ ಹಾಗೂ ಶ್ರೀಮತಿ ಭಾಗ್ಯಮ್ಮ ರವರ ಮಗನಾಗಿ ಜನಿಸಿ, ಹುಟ್ಟೂರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನ ಹುಟ್ಟೂರಲ್ಲೇ ಮುಗಿಸಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪಾವಗಡದ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿ,

ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅದ್ಯಯನ ಕೇಂದ್ರದಲ್ಲಿ ನಂತರ ಪಿಹೆಚ್.ಡಿ. ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಕೇಂದ್ರದಲ್ಲಿ ಡಾ. ವಿಜಯಲಕ್ಷ್ಮಿ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ “ಸ್ಥಳಾಂತರ ಮತ್ತು ಪುನರ್ವಸತಿ ಒಂದು ಅನುಭವ ” ಎಂಬ ವಿಷಯದ ಮೇಲೆ ಸಂಶೊಧನ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಶ್ರೀಯುತರಿಗೆ ಪಾವಗಡ ತಾಲೂಕಿನ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಅಭಿನಂದನೆಗಳು ಸಲ್ಲಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ.
ಪಾವಗಡ