ಪಾವಗಡ: ಇಮ್ರಾನ್ ಉಲ್ಲಾ
ಪಾವಗಡ ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಬೇಟಿ ನೀಡಿ ಸ್ವಾಮೀಜಿಯವರನ್ನು ಕಂಡು ಆಶೀರ್ವಾದವನ್ನು ಪಡೆದು ಅನೇಕ ವಿಚಾರಗಳ ಚಿಂತನ ಮಂಥನವನ್ನು ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಬಸವರಾಜು ರವರೊಂದಿಗೆ ಶ್ರೀ ಗುರುಮಲ್ಲಪ್ಪ, ಶ್ರೀಮತಿ ಭವಾನಮ್ಮ, ವಿದ್ವಾನ್ ಸಿದ್ದರಾಮಯ್ಯ ಹಾಗೂ ಶ್ರೀ ಅಂತರಗಂಗೆ ಶಂಕರಪ್ಪ ರವರು ಉಪಸ್ಥಿತರಿದ್ದರು.

ಸ್ವಾಮೀಜಿಯವರು ಶರಣ ಸಾಹಿತ್ಯದ ಬಗ್ಗೆ ಹಾಗೂ ಕನ್ನಡ ಭಾಷೆಯ ಬಗ್ಗೆ ಅನೇಕಾನೇಕ ವಿಚಾರಗಳನ್ನು ವಿಮರ್ಶೆ ಮಾಡಿದರು. ಇದೇ ಸಂದರ್ಭದಲ್ಲಿ ಗಮಕ ಕಲೆಯಲ್ಲಿ ನೈಪುಣ್ಯತೆಯನ್ನು ಪಡೆದಿರುವ ಶ್ರೀ ಕೆ.ಆರ್.ಬಸವರಾಜು ರವರಿಗೆ ಎಲ್ಲರ ಪರವಾಗಿ ಧನ್ಯವಾದವನ್ನು ಅರ್ಪಿಸಿ ಗಮಕ ಕಲೆ ತಾಯಿ ಭುವನೇಶ್ವರಿಯ ಪಾದಾರವಿಂದಗಳಿಗೆ ಸಮರ್ಪಿಸುವ ಅಪೂರ್ವವಾದ ಪುಷ್ಪವೆಂದು ಭಾವಿಸಿ ಈ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪುವಂತೆ ಅಹರ್ನಿಷಿ ದುಡಿಯುತ್ತಿರುವ ಶ್ರೀ ಬಸವರಾಜು ರವರಿಗೆ ಶುಭ ಕೋರಿದರು. ಶರಣ ಸಾಹಿತ್ಯದ 100ನೇ ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಯವರನ್ನು ಶ್ರೀ ಬಸವರಾಜು ರವರು ಆಹ್ವಾನಿಸಿದ್ದಾರೆ.
ಪೂಜ್ಯ ಸ್ವಾಮಿ ಜಪಾನಂದಜೀ ರವರು ತಾವು ರಚಿಸಿದ ಗ್ರಂಥವನ್ನು ಎಲ್ಲರಿಗೂ ಕೊಡುಗೆಯಾಗಿ ನೀಡಿದರು. ಪ್ರಸಾದವನ್ನು ಸ್ವೀಕರಿಸಿ ಇಂದು ಶ್ರೀ ಕುಮಾರವ್ಯಾಸನ ಜಯಂತಿ ಪ್ರಯುಕ್ತ ಪೂಜ್ಯ ಸ್ವಾಮೀಜಿಯವರನ್ನು ಕಂಡು ಅವರೊಂದಿಗೆ ಸಂಭಾಷಣೆ ನಡೆಸಿದ ಸೌಭಾಗ್ಯ ನಮ್ಮದಾಯಿತು ಎಂದು ಬಂದ ಎಲ್ಲ ಪರಿಷತ್ತಿನ ಸದಸ್ಯರು ತಮ್ಮ ಗೌರವವನ್ನು ಸಲ್ಲಿಸಿದರು.