Janataa24 NEWS DESK

ಪಾವಗಡ: ಪಾವಗಡ ಪಟ್ಟಣದ ಬೆಟ್ಟ ಇನ್ನು ಕೆಲವೆ ದಿನಗಳಲ್ಲಿ ನಮಗೆ ನೋಡಲು ಸಿಗುವುದಿಲ್ಲಾ, ಕೃಷಿ ಉತ್ಪನ್ನ ಮಾರುಕಟ್ಟೆ ಹಿಂಬಾಗದ ಸರ್ವೆ ನಂ 144 ರಲ್ಲಿನ ಸರ್ಕಾರಿ ಜಮೀನಲ್ಲಿ ಏಕಾಏಕಿ ತಲೆ ಎತ್ತಿರುವ ಲೇಔಟ್ ಕಾಮಾಗಾರಿ ಬೆಟ್ಟದ ಬುಡವನ್ನೆಲ್ಲಾ ಮಾಯಾ ಮಾಡಲು ಮುಂಸಾಗಿರುವ ಲೇಓಟ್ ಮಾಪೀಯಾ.

ಭಾನುವಾರ ದಲಿತ ಸಂಘಟನೆಗಳ ಒಕ್ಕೂಟಗಳ ಮುಖಂಡರುಗಳು ತಡೆದು ತಹಶೀಲ್ದಾರ್ ಡಿ.ವರದರಾಜು ರವರಿಗೆ ಮೊಬೈಲ್ ನಲ್ಲಿ ಮಾಹಿತಿ ತಿಳಿಸಿದರು, ತಪ್ಪಿತಸ್ಥ ಲೇಔಟ್ ಮಾಲೀಕರು ಹಾಗೂ ಕಾಮಗಾರಿ ಮಾಡುತ್ತಿರುವ ಜೆ.ಸಿ.ಬಿ. ಮತ್ತು ಹಿಟಾಚಿ, ಮತ್ತು ಲಾರಿ ಮಾಲೀಕರು ವಿರುದ್ದ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾನುವಾರ ಆಗ್ರಹಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಇಲ್ಲಿಂದ ಕದಲುವುದಿಲ್ಲಾ ಎಂದು ಪ್ರತಿಭಟನೆ ನಡೆಸಿದರು.
ಇದಾದ 2 ಘಂಟೆಗಳ ನಂತರ ಸ್ಥಳಕ್ಕೆ ಕಸಬಾ ಅರ್. ಐ. ರಾಜಗೋಪಾಲ್, ಮತ್ತು ಪಾವಗಡದ ಗ್ರಾಮ ಅಡಳಿತಾಧಿಕಾರಿ ರಾಜೇಶ್, ಮತ್ತು ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಈ ಬಗ್ಗೆ ದಲಿತ ಮುಖಂಡ ಎಸ್. ಹನುಮಂತರಾಯಪ್ಪ ಮಾತನಾಡಿ,ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದು, ಈ ಕೂಡಲೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದಲಿತ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಪಾವಗಡದ ಸರ್ವೇ ಣಂ 144 ಕ್ಕೆ ಸೇರಿದ ಜಮೀನಾಗಿದ್ದು, ನಮ್ಮ ಪೂರ್ವಿಕರಿಗೆ ಸೇರಿದ ಜಮೀನಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಕಾಮಗಾರಿಯನ್ನು ಮಾಡುತ್ತಿದ್ದು, ನೀವೇಶನಗಳನ್ನು ಮಾಡುತ್ತಿದ್ದು, ಈ ಜಮೀನು ಪರಿಶಿಷ್ಟಜಾತಿಗೆ ಸೇರಿದ ನರಸಿಂಹಪ್ಪ ಎನ್ನುವರಿಗೆ ಸೇರಿದ್ದು, ಅನಧಿಕೃತವಾಗಿ,ಈ ಕಾಂಗಾರಿಯನ್ನು ಮಾಡುತ್ತಿದ್ದಾರೆ ಎಂದು ಅರೋಪಿಸಿ, ಈ ತಕ್ಷಣ ಸಂಬಂದಪಟ್ಟ ಅಧಿಕಾರಿಗಳು ಕೈಗೊಳ್ಳಬೇಕೆಂದು ಒತ್ತಾಯಿಸಿ
ದಲಿತ ಮುಖಂಡರಾದ ಕಡಪಲಕೆರೆಹನುಮಂತರಾಯ, ತಮಟೆಸುಬ್ಬರಾಯಪ್ಪ, ಹಾಬ್ಬಂಡೆಗೋಪಾಲ್, ಪಳವಳ್ಳಿನರಸಿಂಹ ಮತ್ತಿತರ ದಲಿತ ಮಖಂಡರುಗಳು ಮಾತನಾಡಿ, ಇದು ಖಾಸಗಿ ಜಮೀನ ಅಥವಾ ಸರ್ಕಾರಿ ಜಮಿನು ಎಂಬುದನ್ನು ಸರ್ವೆ ನಡೆಸಿ ಈ ಕಾಮಗಾರಿಯನ್ನು ಕೈಗೊಂಡವರ ವಿರುದ್ದ ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಕಸಬಾ ಅರ್. ಐ. ರಾಜಗೋಪಾಲ್, ಮತ್ತು ಪಾವಗಡದ ಗ್ರಾಮ ಅಡಳಿತಾಧಿಕಾರಿ ರಾಜೇಶ್,ಸ್ಥಳಕ್ಕಾಗಮಿಸಿ ದಲಿತ ಮುಖಂಡರ ಜೊತೆಯಲ್ಲಿ ಚರ್ಚೆ ನಡೆಸಿದರು, ಇದಕ್ಕೆ ಸಂಬಂದಿಸಿದ ಜಮೀನು ಮಾಲಿಕನೆಂದು ಹೇಳಿಕೊಂಡು, ರಮೇಶ್ ಎನ್ನುವರು ಆಗಮಿಸಿ ದಾಖಲೆಗಳನ್ನು ತೋರಿಸಿದಾಗ, ದಲಿತ ಮುಖಂಡರುಗಳು ಒಪ್ಪಲಿಲ್ಲಾ, ನಂತರ ಕಂಧಾಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರು.
ಈ ವೇಳೆ ಕಂದಾಯಾಧಿಕಾರಿ ರಾಜಗೋಪಾಲ್ ಮಾತನಾಡಿ, ಈ ಬಗ್ಗೆ ಸಂಬದಿಸಿದಂತೆ ತಹಶೀಲ್ದಾರ್ ಗೆ ವರದಿ ಸಲ್ಲಿಸಿ,ಸರ್ವೆ ಇಲಾಖೆಯಿಂದ ಸರ್ವೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಟ್ಟಣದ ಡಾಬಾವೊಂದರ ಮಾಲೀಕ ತಿಪ್ಪೇಸ್ವಾಮಿ ಎನ್ನುವರು ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾವಗಡ ತಾಲ್ಲೂಕುನಲ್ಲಿ ಇದೇ ರೀತಿಯ ಹಲವು ಪ್ರಕರಣಗಳು ಕಂಡು ಬರುತ್ತಿದ್ದರೂ ಪಟ್ಟಣದಲ್ಲಿ ಪಾರ್ಕ ಒತ್ತುವರಿ, ರಾಜಕಾಲುವೆ, ಮತ್ತಿತರ ಸರಕಾರಿ ಸ್ಥಳಗಳನ್ನು ಕಬಳಿಸುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ