ಪಾವಗಡ: ಇಮ್ರಾನ್ ಉಲ್ಲಾ

ಸಂವಿಧಾನ ತಂದುಕೊಟ್ಟ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ರವರಿಗೆ 74ನೇ ಗಣರಾಜ್ಯೋತ್ಸವ ಅಂಗವಾಗಿ ಪುರಸಭೆಯ ಕಚೇರಿಯಲ್ಲಿ ಕಾರ್ಯಕ್ರಮ ವೇಳೆ ಅಂಬೇಡ್ಕರ್ ರವರ ಭಾವಚಿತ್ರ ಇಡದೆ ಅವಮಾನ ಮಾಡಿದ್ದಾರೆ.
ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಯಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಪ್ರತಿಯೊಂದು ಇಲಾಖೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡಬೇಕು ಎಂಬ ಆದೇಶ ಇದ್ದರು ಇಲ್ಲಿ ಅಂಬೇಡ್ಕರ್ ಪೋಟೋ ಇಡದೇ ಪುರಸಭೆ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ.
ಇದರ ಬಗ್ಗೆ ಮಾಧ್ಯಮದವರು ವಿಷಯದ ಬಗ್ಗೆ ಪ್ರಶ್ನಿಸಿದಾಗ ಮುಖ್ಯಾಧಿಕಾರಿ ಜಗರೆಡ್ಡಿ ಎತ್ತರ ದ್ವನಿಯಿಂದ ಮಾತನಾಡಿದ್ದಾರೆ.
ನಂತರ ಪುರಸಭೆಯ ಕೆಲ ಸದಸ್ಯರು ಅಂಬೇಡ್ಕರ್ ರವರ ಪೋಟೋ ಇಲ್ಲದ ಬಗ್ಗೆ ಮುಖ್ಯಧಿಕಾರಿಗೆ ಗಜರೆಡ್ಡಿಯವರಿಗೆ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ನಂತರ ಅಂಬೇಡ್ಕರ್ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಪುರಸಭೆ ಪಟ್ಟಣದ ಇಲಾಖೆಯಲ್ಲಿ ಇಂತಹ ಘಟನೆ ನಡೆದಿರುವುದು ಶೋಚನೀಯ ಸಂಗತಿ.