Janataa24 NEWS DESK

ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದ ವಾಸಿಯಾದ
ವೆಂಕಟಯ್ಯ ಮತ್ತು ಹನುಮಮ್ಮ ದಂಪತಿಗಳ ಮಗನಾದ ಪಾಂಡುರಂಗಯ್ಯ ಎಚ್ ವಿ ಇವರು.
ತುಮಕೂರು ವಿಶ್ವವಿದ್ಯಾನಿಲಯದ ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ. ನಾಗಭೂಷಣ ಬಗ್ಗನಡು ಅವರ ಮಾರ್ಗದರ್ಶನದಲ್ಲಿ ,
ಮಂಡಿಸಿರುವ ದಲಿತ ಭೂ ಹೋರಾಟಗಳು, ಮತ್ತು ಪ್ರತಿಭಟನಾ ಸಾಹಿತ್ಯ (ತುಮಕೂರು ಜಿಲ್ಲೆಯನ್ನು ಅನುಲಕ್ಷಿಸದಂತೆ) ಎಂಬ ಮಹಾ ಪ್ರಬಂಧಕ್ಕೆ,
ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರ್ರೇಟ್ ಪದವಿ ನೀಡಿದೆ ,
ಪ್ರಸ್ತುತ ಪಾಂಡುರಂಗಯ್ಯ ಅವರು, ಹುಲ್ಲೇಕೆರೆಯ, ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಂಗ ಶಾಲೆಯಾದ ದೊಂಬರನಹಳ್ಳಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ,
ಜೊತೆಗೆ ಇವರು, ತೂತಿಟ್ಟ ಮಡಿಕೆಯಲ್ಲಿ ನೀರು ಇಟ್ಟು ತೂಗಿ(2012 )ಎಂಬ ಕವನ ಸಂಕಲವನ್ನು ಕೂಡ ಸಹ ಹೊರತಂದಿದ್ದಾರೆ.
ಒಟ್ಟಾರೆ ಪಾಂಡುರಂಗಯ್ಯ ಎಚ್ ವಿ,ಇವರಿಗೆ ಡಾಕ್ಟರೇಟ್ ಸಿಕ್ಕಿರುವುದು ತಾಲೂಕಿನ ಜನತೆಗೆ ಖುಷಿ ತಂದಿದೆ.
ವರದಿ: ಮಂಜುನಾಥ್ ತುರುವೇಕೆರೆ