ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ. ಇಂದು ನಡೆದ ಸಭೆಯಲ್ಲಿ ಅಸಮಾಧಾನ ಮರೆತು ಒಂದಾದ ನಟ ಅನಿರುದ್ದ್ ಮತ್ತು ನಿರ್ದೇಶಕ ಆರೂರು ಜಗದೀಶ್.

ನಟ ಅನಿರುದ್ಧ್ ಅವರನ್ನು ಕನ್ನಡದ ಕಿರುತೆರೆಯಿಂದ ಬ್ಯಾನ್ ಮಾಡಬೇಕು ಎಂಬ ವಿಚಾರ ಸಂಬಂಧ ಟೆಲಿವಿಷನ್ ಅಸೋಸಿಯೇಷನ್ ಹಾಗೂ ನಿರ್ಮಾಪಕರ ಸಂಘದ ವತಿಯಿಂದ ಚಾಮರಾಜಪೇಟೆ ಕ್ಲಬ್ನಲ್ಲಿ ಸಭೆ ನಡೆಸಲಾಗಿದೆ. ಇದಾದ ಬೆನ್ನಲ್ಲೇ ತನ್ನ ವಿರುದ್ಧ ಮುನಿಸಿಕೊಂಡಿದ್ದ ನಿರ್ಮಾಪಕ ಆರೂರು ಜಗದೀಶ್ ಅವರೊಂದಿಗೆ ನಟ ಅನಿರುದ್ಧ್ ಸಂಧಾನದ ಮಾತುಗಳನ್ನು ಆಡಿದ್ದರು. ಜಗದೀಶ್ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಭಾವುಕರಾದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅನಿರುದ್ಧ್, ಜೊತೆ ಜೊತೆಯಲ್ಲಿ ಧಾರವಾಹಿ ಘಟನೆಯಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಈ ವಿಚಾರವಾಗಿ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳ್ತೇನೆ.
ಇಂತಹದ್ದೊಂದು ಘಟನೆ ನಡೆಯಬಾರದಿತ್ತು. ನಾವೆಲ್ಲ ಒಮ್ಮತ ನಿರ್ಧಾರಕ್ಕೆ ಬಂದಿದ್ದೀವಿ.
ಮುಂದೆ ಒಟ್ಟಿಗೆ ಕೆಲಸವೂ ಮಾಡ್ತೀವಿ. ಈಗ ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಇಬ್ಬರ ನಡುವಿನ ಬಹುದಿನದ ಮುನಿಸಿಗೆ ನಾಂದಿ ಹಾಡಿದ್ರು.