Janataa24 NEWS DESK

ಪಾವಗಡ: ತಾಲ್ಲೂಕಿನ ಕಸಬಾ ಹೋಬಳಿ, ನೇರಳೆಗುಂಟೆ ಗ್ರಾಮದ ಸರ್ವೆ ನಂ.55/2,3.4.5 ರಲ್ಲಿ ಹಾದು ಹೋಗುವ ನಕಾಶೆಯ ಕಾಲುದಾರಿಯನ್ನು ಎಲೆಕ್ಟ್ರಾಯ್ ಪವರ್ ಪ್ರವೇಟ್ ಲಿಮಿಟೆಡ್ ಕಂಪನಿ, ರವರು ಒತ್ತುವರಿ ಮಾಡಿಕೊಂಡು ತಂತಿ ಬೇಲಿಯನ್ನು ಹಾಕಿಕೊಂಡಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ರೈತರು ಬೇಸಾಯ ಮಾಡಲು ಜಮೀನುಗಳಿಗೆ ಹೋಗಲು ಮತ್ತು ಜಮೀನುಗಳಲ್ಲಿ ಬೆಳೆಯುವ ಆಹಾರ ದಾನ್ಯಗಳನ್ನು ತರಲು ಎತ್ತಿನ ಗಾಡಿ, ಟ್ರಾಕ್ಟರ್, ಇತ್ಯಾದಿ ವಾಹನಗಳು ಓಡಾಡಲು ಅವಕಾಶವಿಲ್ಲದಂತೆ ಬೇಲಿ ಹಾಕಿರುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ.

ಈ ವಿಚಾರವಾಗಿ ತಹಶೀಲ್ದಾರ್ ರವರ ಆದೇಶದ ಮೇರೆಗೆ ರೀ.ಸ.ನಂ. 55/2.3.4.5 ರಲ್ಲಿ ತಾಲ್ಲೂಕು ಭೂಮಾಪಕರು ಅಳತೆ ಕಾರ್ಯನಿರ್ವಹಿಸಿದ್ದು ಕಾಲು ದಾರಿಯನ್ನು ಎಲೆಕ್ಟ್ರಾಯ್ ಪವರ್ ಪ್ರವೇಟ್ ಲಿಮಿಟೆಡ್ ಕಂಪನಿ ರವರು ನಕಾಶೆಯಂತೆ ಮತ್ತು ಸರ್ವೆದಾಖಲೆಗಳಂತೆ ಒತ್ತುವರಿ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆ Annexure No. 1, ಎಂಬುದಾಗಿ ಗುರ್ತಿಸಿ ಲಗತ್ತಿಸಿದೆ.

ತಹಶೀಲ್ದಾರ್ ರವರ ಕಾರ್ಯಾಲಯ, ಪಾವಗಡ ತಾಲ್ಲೂಕು, ಪಾವಗಡ ರವರ ಪತ್ರ ಸಂಖ್ಯೆ:ಎನ್.ಸಿ.ಆರ್, ಸಿಆರ್:55/222-23, ದಿನಾಂಕ:04/02/2023 ರ ಪತ್ರದಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ನಿಯಮ 39(3)ರಲ್ಲಿನ ನಿಯಮಗಳನ್ವಯ ಒತ್ತುವರಿ ತೆರವುಗೊಳಿಸಲು ದಿನಾಂಕ:12/02/2023 ರಂದು ದಿನಾಂಕ ನಿಗಧಿಪಡಿಸಿದ್ದು ಸದರಿ ದಿನಾಂಕದಂದು ಕಾಲುದಾರಿ ಒತ್ತುವರಿ ತೆರವುಗೊಳಿಸಿ ತೆರವುಗೊಳಿಸಿರುವ ಬಗ್ಗೆ ಕಛೇರಿಗೆ ವರದಿ ಮಾಡುವಂತೆ ಸೂಚಿಸಿ ರಾಜಸ್ವ ನೀರೀಕ್ಷಕರು, ಕಸಬಾ ಹೋಬಳಿ ಮತ್ತು ತಾಲ್ಲೂಕು ಭೂಮಾಪಕರಿಗೆ ತಿಳಿಸಿರುತ್ತಾರೆ. ಅದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಈ ಭಾಗದ ರೈತರಿಗೆ ಸಮಸ್ಯೆ ಸಮಸ್ಯೆ ಯಾಗಿಯೇ ಉಳಿದಿದೆ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದಾಗಿ ತಿಳಿಸಿದ್ದಾರೆ.

ವರದಿ: ಇಮ್ರಾನ್ ಉಲ್ಲಾ.ಪಾವಗಡ