ದಾಖಲೆಗಳಿಲ್ಲದೆ 200 ಆಶ್ರಯ ಮನೆಗಳ ಖಾತೆ

ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ಪಟ್ಟದ ಬಡವರಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ 2003-04 ಸಾಲಿನಲ್ಲಿ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು. ಅಧಿಕಾರಿಗಳಿಂದ ಬಹಳಷ್ಟು ಲೋಪದೋಷಗಳು ಮಾಡಿರುವುದು ಕಂಡುಬಂದಿದೆ.
ಅದರಲ್ಲೂ ಸಹ ಆ ಮನೆಗಳು ಬೇರೆಯವರಿಗೆ ಪರಬಾರ ಮಾಡಿರುವುದು ಬೆಳಕಿಗೆ ಬಂದಿದೆ ಕುಮಾರಸ್ವಾಮಿ ಬಡಾವಣೆ ಮನೆಗಳ ಫಲಾನುಭವಿಗಳಿಂದ ಕೊಂಡಿರುವವರ ಪರಿಸ್ಥಿತಿ ಅತಂತ್ರ.

Screenshot 2023 01 09 115117

ಪಾವಗಡ 2003-04ರಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಬಡವರಿಗಾಗಿ ಪಟ್ಟದ ವ್ಯಾಪ್ತಿಯಲ್ಲಿ 450 ಮನೆಗಳು ನಿರ್ಮಾಣ ಆಗಿನ ಶಾಸಕರಾದ ವೆಂಕಟರವಣಪ್ಪ ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಜಿ.ಎಸ್.ಧರ್ಮಪಾಲ್ ರವರ ಅಧಿಕರದ ಅವದಿಯಲ್ಲಿ ಮಾಡಲಾಗಿತ್ತು. ಅದರೆ ರಾತ್ರೋರಾತ್ರಿ ಸರ್ಕಾರ ಬದಲಾವಣೆ ಯಾದ ಕಾರಣ ಅಂದಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತರಾತುರಿಯಲ್ಲಿ ಉದ್ಘಾಟಿಸಿ ಹೋಗಿದ್ದರು.

ಈ ಬಡಾವಣೆಯಲ್ಲಿ ಸುಮಾರು 450 ಸಂಖ್ಯೆ ಯಲ್ಲಿ 395 ಕುಟುಂಬಗಳಿಗೆ ಮನೆಗಳು ನಿರ್ಮಾಣ ಮಾಡಿ ಅಂದಿನ ತಹಶಿಲ್ದಾರರ ಬಸವರಾಜು ಎಂಬವರಿಂದ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ನೀಡಿರುತ್ತಾರೆ. ಆದರೆ ಆ ಮನೆಗಳ ಮೂಲ ಹಕ್ಕುಪತ್ರಗಳು ಇಂದಿಗೂ ಪುರಸಭೆ ಕಚೇರಿಯಲ್ಲಿ ಕೂಳೆಯುತ್ತಿದೆ. 2004 ರಲ್ಲಿ ಕಾನೂನಿನ ಪ್ರಕಾರ ಫಲಾನುಭವಿ ಮುಖ್ಯ ದಾಖಲೆಗಳನ್ನು ನೋಂದಣಿ ಕಚೇರಿಯಲ್ಲಿ ಮುಖ್ಯಧಿಕಾರಿಯ ಹೆಸರಿಗೆ ಮಾಡ್ ಗೇಜ್‌ ಮಾಡಿ ಕೊಟ್ಟಿರುತ್ತಾರೆ.

ಕಾನೂನು ಪ್ರಕಾರ 15 ವರ್ಷಗಳ ಕಾಲ ಆಶ್ರಯ ಮನೆಗಳು ಯಾರಿಗೂ ಪರಬಾರ ಮಾಡಬಾರದು. ಎಂಬುದಾಗಿ ಕಾನೂನು ಹೊಂದಿದೆ.ತದನಂತರ ಅವಧಿ ಪೂರ್ಣ ಗೊಂಡಿದೆ ಅದರೆ ಇಲ್ಲಿನ ಪುರಸಭೆಯ ಅಧಿಕಾರಿಗಳು ಅವಧಿಯ ಮುನ್ನವೇ ಮೂಲ ದಾಖಲೆಗಳು ಇಲ್ಲದೆಯೇ ಖಾತೆ ಮಾಡಿಕೊಟ್ಟಿದ್ದಾರೆ ಮತ್ತು ಮೂಲ ಫಲಾನುಭವಿಗಳಿಂದ ಈಗಾಗಲೇ ಬೇರೆಯವರಿಗೆ ಎರಡ್ಮೂರು ಬಾರಿ ಮಾರಾಟ ಸಹ ಮನೆಗಳು ಮಾಡಿದ್ದಾರೆ.

ಅಂದಿನ ದಿನಗಳಲ್ಲಿ ಮನೆಗಳು ನೀಡುವ ಸಮಯದಲ್ಲಿ ಜೆರಾಕ್ಸ್ ಪ್ರತಿ ನೀಡಿರುತ್ತಾರೆ ಅದರ ಪ್ರತಿಯನ್ನು ಫಲಾನುಗಳಿಗೆ ತಿಳಿಯದೆ ಮೂಲ ದಾಖಲೆ ಇದೆ ಎಂಬುದಾಗಿ ತಿಳಿದು 15 ವರ್ಷಗಳ ಕಾಲ ಅವಧಿ ಮುಗಿದಿದೆ ಎಂಬುದಾಗಿ ನಕಲು ಪತ್ರ ನೀಡಿ ಬೆರೆಯವರಿಗೆ ಪರಬಾರ ಮಾಡಿದ್ದಾರೆ. ಅದರೆ ಅಧಿಕಾರಿಗಳ ಎಡವಟ್ಟಿನಿಂದ ಮೂಲ ದಾಖಲೆಗಳನ್ನು ಕಚೇರಿಯಲ್ಲಿ ಉಳಿದುಕೊಂಡಿದೆ ಬೇರೆಯವರಿಗೆ ಪರಬಾರ ಮಾಡಿರುವುದು ಯಾವ ದಾಖಲೆಗಳನ್ನು ತೆಗೆದುಕೊಂಡು ಫಲಾನುಭವಿಗಳಿಂದ ಬೇರೆಯವರಿಗೆ ಮಾರಾಟ ಯಾವರೀತಿಯ ಮಾಡಿದ್ದಾರೆ ಎಂಬುದು ಶಂಕೆ ಉಲ್ಬಣಗೊಂಡಿದೆ ಕಾನೂನು ಉಲಂಘನೆ ಮಾಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೂಳ್ಳಬೇಕು ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಇಂದಿಗೂ ಶೇ.5ರಷ್ಟು ಮನೆಗಳು ಅರ್ಹರಿಗೆ ನೀಡಿಲ್ಲ. ಇಲ್ಲಿ ಸೂರಿದ್ದರೂ ಬಡವರಿಗೆ ಹಂಚಿಕೆ ಯಾಗಿಲ್ಲ, ಇನ್ನು ನೂರಕ್ಕೂ ಹೆಚ್ಚು ಮನೆಗಳು ಖಾಲಿ ಇವೆ. ಅದೆಷ್ಟೋ ಬಡವರು ಇಂದಿಗೂ ಗುಡಿಸಲಿನಲ್ಲೇ ಬದುಕು ಸಾಗಿಸುತ್ತಿದ್ದರೂ, ಅವರಿಗೆ ವಸತಿ ಭಾಗ್ಯ ನೀಡಬೇಕು ಉಳ್ಳವರಿಗೆ ಮನೆಗಳು ನೀಡಿದ್ದಾರೆ ಎಂಬ ಹಲವು ವರ್ಷಗಳಿಂದ ದೂರಗಳು ಬರುತ್ತಲೇ ಇವೆ.


ಈಗಾಗಲೇ ಇಲ್ಲಿ ಕೆಲವರು ವಾಸಿಸುತ್ತಿದ್ದರೆ ಅವರ ಹೆಸರಿಗೂ ಖಾತೆ ಮಾಡಿಕೊಡುತ್ತಿಲ್ಲ. ಇರುವ ಮನೆಗಳಿಗೆ ಮೂಲ ಸೌಕರ್ಯವೂ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.

Leave a Reply

Your email address will not be published. Required fields are marked *