Document

ದಲಿತರ ಕಾಲೋನಿಗಿಲ್ಲ ಮೂಲಭೂತ ವ್ಯವಸ್ಥೆ: ಆರೋಗ್ಯ ಸಮಸ್ಯೆ ತಾಂಡವ…

Janataa24 NEWS DESK

ದಲಿತರ ಕಾಲೋನಿಯನ್ನು ಮೂಲಸೌಕರ್ಯದಿಂದ ದೂರ ಮಾಡಿದಿಯಾ ? ಲೋಕಮ್ಮನಹಳ್ಳಿ, ಪಂಚಾಯಿತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು.

IMG 20230511 WA0010



ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ,
ಕೋಳಘಟ್ಟ ಗ್ರಾಮದ ದಲಿತ ಕಾಲೋನಿಯು,20 ವರ್ಷಕ್ಕೂ ಹೆಚ್ಚು ಕಾಲದಿಂದ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದೆ.

ಈ ದಲಿತ ಕಾಲೋನಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು ಈ ಮನೆಗಳಿಗೆ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರುಗಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ,

ಇನ್ನೂ ಇದರ ಸಂಬಂಧ ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

IMG 20230511 WA0011



ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ದಲಿತರ ಕಾಲೋನಿ ಗೆ ಭೇಟಿಕೊಟ್ಟು ಕೇವಲ ಆಶ್ವಾಸನೆಯನ್ನು ಕೊಟ್ಟು ಹಿಂದಿರುಗುತ್ತಿದ್ದಾರೆ,

ಆದರೆ ಯಾವುದೇ ಅಭಿವೃದ್ಧಿಯನ್ನು ಕೂಡ ಇಲ್ಲಿ ಮಾಡಿಲ್ಲ ಹಾಗಾದರೆ ದಲಿತರನ್ನು ಮೂಲ ಸೌಕರ್ಯದಿಂದ ದೂರ ತುಳ್ಳುತ್ತಿದ್ದಾರೆಯೇ ಎಂಬುದೇ ಪ್ರಶ್ನೆ ?

ಇನ್ನು ಇಲ್ಲಿ ಗಮನಿಸಬಹುದಾದ ವಿಷಯ ಏನೆಂದರೆ ದಲಿತರು ವಾಸವಿರುವ ಜಾಗ ಸರ್ವೆ ನಂಬರ್ ನಲ್ಲಿ ಇದ್ದು , ಇಲ್ಲಿ ದಲಿತರು ಬಹಳ ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ.

ಇದನ್ನ ತಿಳಿದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಜಾಗಕ್ಕೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ಕೊಡದೆ ಸುಮ್ಮನೆ ಅಭಿವೃದ್ಧಿ ಮಾಡುತ್ತೇವೆ ಎಂದು ಕಾಟಾಚಾರದ ಮಾತುಗಳನ್ನ ಆಡಿ ಹಿಂದಿರುಗುತ್ತಿದ್ದಾರೆ,

ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಕೊಟ್ಟು ದಲಿತರ ಕಾಲೋನಿಯ ಸಮಸ್ಯೆಯನ್ನು ಬಗೆಹರಿಸುವರೆ ಕಾದುನೋಡಬೇಕಾಗಿದೆ.

IMG 20230511 WA0012

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *