Document

ತುಮಕೂರು ಸ್ಮಾರ್ಟ್ ಸಿಟಿ ಹೆಸರಿನಲ್ಲಿ 8 ಕೋಟಿ ಪಂಗನಾಮ ಹಾಕಿದ ಚೈನೈನ ಖಾಸಗೀ ಕಂಪನಿ

Janataa24 NEWS DESK

IMG 20231208 WA0051 2

ಸ್ಮಾರ್ಟ್ ಸಿಟಿ(Samrt City) ಹೆಸರಿನಲ್ಲಿ 8 ಕೋಟಿ ಪಂಗನಾಮ ಹಾಕಿದ ಚೈನೈ(Chennai)ನ ಖಾಸಗೀ ಕಂಪನಿ

IMG 20231208 WA0063

ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಇವರಿಗೆ ಸಾಥ್…?

images 2 6

ಸದಸ್ಯರಂತು ಬಳೆ ಹಾಕೊಂಡು ಚಪ್ಪಾಳೆ ಹೊಡೆಯುತ್ತಿದ್ದಾರೆ ಎನಿಸುತ್ತಿದೆ ನಾಚಿಕೆ ಆಗಬೇಕು ಇಂತಹ ಜನಪ್ರತಿನಿಧಿಗಳಿಗೆ.

IMG 20231208 WA0090


ನಮ್ಮ ತುಮಕೂರು ಜನರನ್ನ ಮಂಗ ಮಾಡುತ್ತಿರುವ ತುಮಕೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ.
ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ.


1) Smart City ಯೋಜನೆ ಅಡಿಯಲ್ಲಿ 5-00 ಕೋಟಿ ರೂಗಳನ್ನು ಚೈನೈನ GG Pvt Lmt ಖಾಸಗೀ ಕಂಪನಿಗೆ ಪರಿಸರದಿಂದ ಲೋಹಗಳನ್ನು(Biomining)ಗಾಗಿ ಬಿಡುಗಡೆಯಾಗಿದ್ದು, ಆದರೆ ಇಲ್ಲಿಯವರೆಗೂ 5% ಕೆಲಸ ಮಾಡಿಲ್ಲ. ಈಗಾಗಲೇ ಇವರ ಅವಧಿ ಮುಗಿದು 3-4 ತಿಂಗಳ ಮುಗಿದಿದ್ದು, ಈಗಲೂ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ.

IMG 20231208 WA0102


2) ತ್ಯಾಜ್ಯ ಸಗ್ರಿಗೇಷನ್ ಸ್ಥಳಕ್ಕೆ 2 ಕೋಟಿ 97 ಲಕ್ಷ ರೂಗಳನ್ನು ಮೇಲ್ಕಂಡ ಕಂಪನಿಗೆ ಬಿಡುಗಡೆಯಾಗಿದ್ದು. ಇವರು ಮಾಡಿರುವ ಕೆಲಸ 2% ಕೆಲಸ ವಿನಿಯೋಗ ಆಗಿಲ್ಲ.

IMG 20231208 WA0009


3) ಘಟಕ ಪ್ರಾರಂಭವಾಗಿನಿಂದ ವೇಯಿಂಗ್ ಬ್ರಡ್ಜ್(Weing Bridge) ನಿರ್ವಹಣೆ ಇಲ್ಲ. – ಇದೊಂದು ದೊಡ್ಡ ಭ್ರಹ್ಮಾಂಡ ಭ್ರಷ್ಟಾಚಾರ.

IMG 20231208 WA0023


4) ಸಿ.ಸಿ.ಟ.ವಿ ನಿರ್ವಹಣೆ ಇಲ್ಲ. ಕಳ್ಳತನ ಮಾಡಲು ತುಮಕೂರು ಮಹಾನಗರ ಪಾಲಿಕೆಯವರ ಕಾರ್ಯತಂತ್ರ.


4) ಲೆಕ್ಕಕ್ಕೆ 28-30 ಜನ ಕಾರ್ಮಿಕರು ಆದರೆ ಕೆಲಸ ಮಾಡುವುದು ಬರೀ ಬೆರಳಿಕೆ ಕಾರ್ಮಿಕರು.


5) ಕಾರ್ಮಿಕರಿಗೆ ಶೌಚಾಲಯವಿಲ್ಲ, ವಸತಿ ಗೃಹಗಳ ನಿರ್ವಹಣೆ 0% ಮಾಡಿಲ್ಲ, ಕುಡಿಯಲು ನೀರಿಲ್ಲ.

.
6) ಲಕ್ಷಾಂತರ ರೂ ಖರ್ಚು ಮಾಡಿ ತಂದಿರುವ ಜನರೇಟರ್ ತುಕ್ಕು ಹಿಡಿದಿದೆ.

images 2 5



ಒಟ್ಟಾರೆ ಈ ಘಟಕದಲ್ಲಿ ಏನೇನೂ ಚಟುವಟಿಕೆ ನಡೀತಿಲ್ಲ. ಬರೀ ಶೂನ್ಯ, ಹಣ ಮಾಡಲು ಗುತ್ತಿಗೆದಾರನನ್ನು ನೇಮಿಸಿಕೊಂಡಿದ್ದಾರೆ.
ಎಲ್ಲಾ ಅನುದಾನ ಮತ್ತು ಇಡೀ ವ್ಯವಸ್ಥೆ ಒಳೆಯಲ್ಲಿ ಹುಳಸೆಹಣ್ಣು ಕಿವುಚದಂತಾಗಿದೆ.

IMG 20231208 WA0007



ಈ ಬಗ್ಗೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಸಿದ್ದಲಿಂಗೇಗೌಡರು ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಲೋಕಾಯುಕ್ತಕ್ಕೆ ಮನವಿ ಮಾಡಿದ್ದು, ಪ್ರಾಧಿಕಾರಗಳಿಗೆ ವರದಿ ನೀಡಲು ಶ್ರೀಸಿದ್ದಲಿಂಗೇಗೌಡರ ಸೂಚನೆಯಂತೆ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಡಮರುಗ ಉಮೇಶ್ ಹಾಗೂ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್.ಎಂ.ಎಸ್ ರವರು ಬೇಟಿ ನೀಡಿ ಈ ಬಗ್ಗೆ ವಸ್ತು ಸ್ಥಿತಿ ವರದಿಯನ್ನು ನೀಡಲಾಗಿದೆ.

Document

Leave a Reply

Your email address will not be published. Required fields are marked *