Janataa24 NEWS DESK
ಪಾವಗಡ ಬ್ರೇಕಿಂಗ್
ತಾಲೂಕಿನ ಯಾದವ್ ಸಮುದಾಯ ಕಾಂಗ್ರೆಸ್ ಪರ.

ಪಾವಗಡ ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಮಂಗಳವಾರ ನಡೆದ ಯಾದವ ಸಮುದಾಯದ ಬೃಹತ್ ಸಭೆಯಲ್ಲಿ ಯಾದವ ಮುಖಂಡರು ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಹೆಚ್ ವಿ ವೆಂಕಟೇಶ್ ರವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಯಾದವ ಸಮುದಾಯದವರು ಘೋಷಿಸಿದರು..

ಸಮುದಾಯದ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ವೆಂಕಟರಮಣಪ್ಪ ನವರು ಮಾತನಾಡಿ ಯಾದವ್ ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದೇನೆ, ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ, ಹಾಗಾಗಿ ಈ ಬಾರಿಯೂ ನಿಮ್ಮ ಮತವನ್ನು ನನ್ನ ಪುತ್ರ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರಿಗೆ ಮತನೀಡಿ ಹಾರೈಸಬೇಕೆಂದು ಮನವಿ ಮಾಡಿದರು…
ಇದೆ ವೇಳೆ ಮಾಜಿ ಸಂಸದರಾದ ಬಿ ಎನ್ ಚಂದ್ರಪ್ಪ ನವರು.

ಕಾಂಗ್ರೆಸ್ ಅಭ್ಯರ್ಥಿಯಾದ ಹೆಚ್ ವಿ ವೆಂಕಟೇಶ್ ರವರು ಮಾತನಾಡಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇಪ್ಪತ್ತ ರಿಂದ ಇಪ್ಪತೈದು ಸ್ಥಾನ ಮಾತ್ರ ಬರುತ್ತದೆ,ಅದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತದೆ ಎಂಬುದಾಗಿ ಬಿಗುತ್ತಿದ್ದಾರೆ.ರಾಜ್ಯದಲ್ಲಿ ಮತ್ತು ಇಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಬರುತ್ತದೆ ಮತ್ತೆ ಬಡವರ ಪರ ಕೆಲಸ ಮಾಡುತ್ತೇವೆ ಎಂದರು.

ಈ ವೇಳೆ ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ರವರು,ಮಾಜಿ ಶಾಸಕ ಉಗ್ರ ನರಸಿಂಹಪ್ಪ ನವರು,ಎಐಸಿಸಿ ವೀಕ್ಷಕರಾದ ಸಂಜಯ್ ದತ್, ಕುಲ್ ದೀಪ್ ರವರು,ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ ನವರು,ಯಾದವ ಮುಖಂಡರಾದ ಮುಗದಾಳಬೆಟ್ಟ ನರಸಿಂಹಪ್ಪ ರವರು,ಕೋಟೆ ಪ್ರಭಾಕರ್ ರವರು,ಚಿಕ್ಕಣ್ಣ ನವರು, ಭಗವಂತಪ್ಪ ನವರು,ನಿವೃತ್ತ ಪೊಲೀಸ್ ಅಧಿಕಾರಿ ರಾಮಯ್ಯ ನವರು,ಮಾನಂ ವೆಂಕಟಸ್ವಾಮಿ ರವರು, ನರಸಿಂಹರೆಡ್ಡಿ ರವರು,ಮೈಲಾರಪ್ಪ ನವರು, ದಿವ್ಯ ಆರ್ ಕೆ ರವರು, ಸುಮಾ ರವರು, ಉಷಾರಾಣಿ ರವರು ಸೇರಿ ಇನ್ನೂ ಮುಂತಾದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು..

ವರದಿ
ಪಾವಗಡ:ಇಮ್ರಾನ್ ಉಲ್ಲಾ