Document

ಜೈನ ಮುನಿಗಳ ಹತ್ಯೆ ಖಂಡಿಸಿ ತುರುವೇಕೆರೆಯಲ್ಲಿ ಪ್ರತಿಭಟನೆ.

Janataa24 NEWS DESK

IMG 20230713 WA0000


ತುರುವೇಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇಂದು,
ಸಮಸ್ತ ಜೈನ ಸಮಾಜ ತುರುವೇಕೆರೆ, ಮಾಯಸಂದ್ರ, ತಂಡಗ, ಇವರ ಸಂಯುಕ್ತ ಆಶ್ರಯದಲ್ಲಿ.

ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕು, ಹೀರೆಕೋಡಿ ಗ್ರಾಮದಲ್ಲಿ ನಂದಿ ಪರ್ವತ ಎಂಬ ಆಶ್ರಮದಲ್ಲಿ ದಿಗಂಬರ ಜೈನ ಮಂದಿರವಿದ್ದು,

IMG 20230713 WA0001



ಅಲ್ಲಿ ಪರಮಪೂಜ್ಯ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮುನಿ ಮಹಾರಾಜರನ್ನು ಅಪಹರಿಸಿ ,

ಬರ್ಬರವಾಗಿ ಹತ್ಯೆ ಮಾಡಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ವಿಕೃತಗೊಳಿಸಿ, ಕೊಲೆ ಮಾಡಿರುವುದನ್ನು ಖಂಡಿಸಿ,

ಇಂದು ತುರುವೇಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಶ್ವನಾಥ ದಿಗಂಬರ ಜೈನ ಸಮಾಜ ಮಾಯಸಂದ್ರ, ಮಹಾವೀರ ದಿಗಂಬರ ಜೈನ ಸಮಾಜ ತಂಡಗ ,ಸರಸ್ವತಿ ಮಹಿಳಾ ಜೈನ ಸಮಾಜದ ವತಿಯಿಂದ,

ಜೈನ ಮುನಿಗಳ ಹತ್ಯೆ ಮಾಡಿದ ಹಂತಕರಿಗೆ ಯಾವುದೇ ರೀತಿಯ ಕರುಣೆ ತೋರಬಾರದು, ಇವರಿಗೆ ಅತ್ಯಂತ ಕಠಿಣ ಮತ್ತು ಅತ್ಯಧಿಕ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂಬ ಘೋಷಣೆ ಕೂಗುತ್ತಾ ,ಬಿತ್ತಿ ಪತ್ರಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ, ತಾಲೂಕು ಕಚೇರಿಗೆ ಆಗಮಿಸಿ,

ತುಮಕೂರು ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಿದರು.



ಇದೆ ವೇಳೆ ಜೈನ ಸಮಾಜದ ಮುಖಂಡರುಗಳಾದ ವಿಪುಲ್, ಪ್ರಭು, ಚಂದ್ರಕೀರ್ತಿ ಟಿ ಪಿ ,ಪ್ರಮೀಳಾ ಬ್ರಹ್ಮಸೂರಯ್ಯ ,ಸುಮತಿ ಪ್ರಕಾಶ್ ,ಮಂಜುಳಾ ಪ್ರಭಾಕರ್, ಪದ್ಮಾಶ್ರೆಯಾ0ಶ,ಆನಂದಮ್ಮ, ಕುಶಾಲ ಪ್ರಕಾಶ್, ಇನ್ನು ಅನೇಕ ಜೈನ ಸಮಾಜದ ಮಹಿಳೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

IMG 20230713 WA0002

ವರದಿ ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *