Document

ಜೆ ಡಿ ಎಸ್ ಪಕ್ಷಕ್ಕೆ ಸೋಮವಾರ ರಾಜೀನಾಮೆ: ಶಾಸಕ ಎಸ್ ಆರ್ ಶ್ರೀನಿವಾಸ್

ಜೆ ಡಿ ಎಸ್ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡುವುದಾಗಿ ಬಹಿರಂಗ ಪಡಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್.

IMG 20230325 WA0021



ಗುಬ್ಬಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹೇಮಾವತಿ ಇಲಾಖೆ ವತಿಯಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ನನ್ನ ಕಾರ್ಯಕರ್ತರು ಹಾಗೂ ನನ್ನ

image 4
ಜಾಹೀರಾತು/Advertisement

ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದೇನೆ ಮಾನ್ಯ ಕುಮಾರಸ್ವಾಮಿಯವರು ನಾನು ಜೆಡಿಎಸ್ ಪಕ್ಷದಲ್ಲಿ ಇರುವಾಗಲೇ ಬೇರೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದರು.

IMG 20230325 WA0020

ಮಾಡದ ತಪ್ಪಿಗೆ ನಾನು ಶಿಕ್ಷೆಯನ್ನು ಸಹ ಅನುಭವಿಸಿದ್ದೇನೆ ಹಾಗಾಗಿ ನಾನು ನನಗೆ ಗೌರವ ಸಿಗುವ ಜಾಗದಲ್ಲಿ ಇರಲು ಇಚ್ಛೆ ಪಡುತ್ತೇನೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ಸಮುದಾಯದ ಮತಗಳು ನಿರ್ಣಾಯಕ.

IMG 20230325 WA0018


ಯಾವುದೋ ಒಂದು ಸಮುದಾಯದಿಂದ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಿಲ್ಲ ಮತ್ತು ನನ್ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದೇನೆ ಹಾಗಾಗಿ ನಾನು ಸೋಮವಾರ ನನ್ನ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ಬಹಿರಂಗಪಡಿಸಿದರು.



ಬಿಜೆಪಿ ಸರ್ಕಾರವು ಮೀಸಲಾತಿ ವಿಚಾರವಾಗಿ ಚುನಾವಣಾ ಸಂದರ್ಭವನ್ನು ಮುಂದಿಟ್ಟುಕೊಂಡು ಮೂಗಿಗೆ ತುಪ್ಪ ಸಾವರುವ ಕೆಲಸ ಮಾಡುತ್ತಿದೆ ಬರೀ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ವಿನಹ ಇನ್ನು ಅನುಷ್ಠಾನಕ್ಕೆ ಬಂದಿಲ್ಲ ಕೇಂದ್ರ ಸರ್ಕಾರವು ಇದನ್ನು ಅಂಗೀಕರಿಸಿ ಮಾನ್ಯತೆ ನೀಡಬೇಕು ಆದರೆ ಕೇಂದ್ರ ಸರ್ಕಾರವು ಮಾನ್ಯತೆ ನೀಡುವುದಿಲ್ಲ ಇದು ಚುನಾವಣೆ ಗಿಮಿಕ್ ಎಂದರು

image 3
ಜಾಹೀರಾತು/Advertisement


ಇದೇ ರೀತಿ ಶಿರಾ ಉಪ ಚುನಾವಣೆಯಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು ಅನುಷ್ಠಾನಗೊಳಿಸಿದರು ಈ ನಿಗಮಕ್ಕೆ ರಾಜ್ಯ ಸರ್ಕಾರವು ಯಾವುದೇ ರೀತಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು

ಇದೇ ಸಂದರ್ಭದಲ್ಲಿ ಗಿರೀಶ್ ಸಣ್ಣ ಕರಿಯಪ್ಪ ಸಣ್ಣ ರಂಗಯ್ಯ ಪಾಂಡುರಂಗಯ್ಯ ಹೊಸಹಳ್ಳಿ ಪ್ರಕಾಶ್ ವಿವಿ ತಿಮ್ಮೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರ.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *