Janataa24 NEWS DESK
ಜಿಲ್ಲೆಯ ಹೈ-ವೊಲ್ಟೇಜ್ ಕ್ಷೇತ್ರವಾದ ಗುಬ್ಬಿ ತಾಲೋಕಿನಲ್ಲಿ ಹೊಸ ರಾಜಕೀಯ ಬೆಳವಣಿಗೆ ಉಂಟಾಗಿದೆ.

ಗುಬ್ಬಿ ತಾಲೂಕಿನಲ್ಲಿ ಬಂಡಾಯದ ಬಿಸಿ ಜೋರಾಗಿದ್ದು ಬಿಜೆಪಿ ಪ್ರಭಾವಿ ಅಭ್ಯರ್ಥಿ ಯಾಗಿದ್ದ ಜಿ ಏನ್ ಬೆಟ್ಟಸ್ವಾಮಿ ಹಾಗೂ ಕಾಂಗ್ರೆಸ್ ಪ್ರಭಾವಿ ಮುಂಖಂಡರಾದ ಹೊನ್ನಗಿರಿ ಗೌಡರು ಜೆ ಡಿ ಎಸ್ ಭದ್ರಕೋಟೆ ಉಳಿಸಿಕೊಳ್ಳಲು ತಯಾರಗಿದ್ದಾರೆ.
ಇಂದು ತಾಲೂಕಿಗೆ ಆಗಮಿಸಿದ ಜೆಡಿಎಸ್ ವರಿಷ್ಠ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಅತೃಪ್ತ ಇಬ್ಬರು ಪ್ರಭಾವಿ ಮುಖಂಡರನ್ನು ಸಂತೈಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಜಿಎನ್ ಬೆಟ್ಟಸ್ವಾಮಿ ಮಾತನಾಡಿ ಬಿಜೆಪಿಪ್ರಬಾವಿ ಮುಖಂಡರದ ನಾನು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ನವರು ತೋರಿದ ಮಾರ್ಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದರೆ ಬಿಜೆಪಿ ಆಂತರಿಕ ಭಿನ್ನಮತದಿಂದ ನನ್ನನ್ನು ತೇಜೋವದೆ ಮಾಡುತ್ತಾ ಬಂದಿದ್ದಾರೆ ನಾನು ಕೆಜೆಪಿಯಿಂದ ಒಂದು ಬಾರಿ ಬಿಜೆಪಿ ಪಕ್ಷದಿಂದ ಎರಡು ಬಾರಿ ಅಭ್ಯರ್ಥಿಯಾಗಿದ್ದೆ. ನನ್ನ ಕ್ಷೇತ್ರದ ಮತದಾರರು ನನ್ನನ್ನು ಕೈ ಹಿಡಿದಿದ್ದಾರೆ ಅವರಿಗೆ ನಾನು ಯಾವಾಗಲೂ ಚಿರಋಣಿ ಆಗಿರುತ್ತೇನೆ ನನಗೆ ಟಿಕೆಟ್ ಕೈತಪ್ಪಲು ಪಕ್ಷವನ್ನು ತೊರೆದು ಬರಲು ಜೆ ಸಿ ಮಾಧಸ್ವಾಮಿನೇರ ಕಾರಣ ತಾಲೂಕಿನಲ್ಲಿ ಜೆಡಿಎಸ್ ನ ಬಿಎಸ್ ನಾಗರಾಜ್ ಅವರನ್ನು ಗೆಲ್ಲಿಸುವ ಮೂಲಕ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದು ಕಿಡಿಕಾರಿದರು.

ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಪ್ರತಿ ಬಾರಿಯೂ ಸಹ ಅವರಿವರೆಗೆ ಟಿಕೆಟ್ ತಪ್ಪಿಸಿ ಕುತಂತ್ರದ ರಾಜಕಾರಣ ಮಾಡುವ ಎಸ್ ಆರ್ ಶ್ರೀನಿವಾಸ್ಗೆ ನಾಚಿಕೆಯಾಗಬೇಕು. ಜೆಡಿಎಸ್ ನಲ್ಲಿದ್ದಾಗ ದೇವೇಗೌಡರು ಸಂಬಂಧಿ ಎಂದು ಕಾಂಗ್ರೆಸ್ ಗೆ ಬಂದಾಗ ಡಿಕೆ ಶಿವಕುಮಾರ್ ಸಂಬಂಧಿ ಎಂದು ಜನರನ್ನು ಮರಳು ಮಾಡುತ್ತಾ ರಾಜಕಾರಣ ಮಾಡುತ್ತಿದ್ದಾರೆ ಇಷ್ಟು ವರ್ಷಗಳ ಕಾಲ ನಿಮ್ಮ ಅಧಿಕಾರವನ್ನು ಜನರು ನೋಡಿದ್ದಾರೆ ಈ ಬಾರಿ ಮನೆಗೆ ಕಳಿಸಲು ಸಿದ್ದರಾಗಿದ್ದಾರೆ ಎಂದ ಅವರು
ಬಿಎಸ್ ನಾಗರಾಜ್ ಅವರನ್ನು ಶಾಸಕರನ್ನಾಗಿ ಮಾಡಿ ನಿಮ್ಮನ್ನು ಸೋಲಿಸಿ ತೀರಿಸುತ್ತೇವೆಂದು ಹರಿಹಾಯ್ದರು.
ಜೆಡಿಎಸ್ ಅಭ್ಯರ್ಥಿ ಬಿಎಸ್ ನಾಗರಾಜು ಮಾತನಾಡಿ ಇಬ್ಬರು ಮುಖಂಡರು ಬಂದಿರುವುದು ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಎಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯಿಂದ ಅನೇಕ ಸೌಲಭ್ಯಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಲುವೇ ಈ ಬಾರಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕಿರಯ್ಯ, ಮುಖಂಡರಾದ ಯೋಗನಂದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ, ಇತರರು ಹಾಜರಿದ್ದರು
ವರದಿ
ಗುಬ್ಬಿ:ಶ್ರೀಕಾಂತ್