Janataa24 NEWS DESK

ತುಮಕೂರು/Tumakuru
ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ವೀಣಾ ಅಂಜನ್ ಕುಮಾರ್ ಹಾಗೂ ಇತರೆ ಹಲವು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ.
ಪಾವಗಡ ಮಾಜಿ ಪುರಸಭೆ ಅಧ್ಯಕ್ಷ.ಹಾಗೂ ಯಾದವ್ ಸಮುದಾಯದ ಹಿರಿಯ ಮುಖಂಡ .ಪಿ.ಅಂಜನ್ ಕುಮಾರ್ (ಬುಜ್ಜಿ) ಮತ್ತು ಅವರ ಬೆಂಬಲಿಗರು ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ ಸಂಮುಕದಲ್ಲಿ ಗುರುವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಗೊಂಡರು.

ಯಾದವ್ ಸಮುದಾಯದ ಹಿರಿಯ ಮುಖಂಡ ಮಾಜಿ ಪುರಸಭೆ ಅಧ್ಯಕ್ಷ ಪಿ.ಅಂಜನ್ ಕುಮಾರ್ ಮಾತನಾಡಿ ನಾನು ಕಾಂಗ್ರೆಸ್ ನಲ್ಲಿ ಹಲವು ವರ್ಷಗಳ ಕಾಲ ದುಡಿದ್ದಿದ್ದೆನೆ ಅಧ್ಯಕ್ಷನಾಗಿ ಸಹ ಕೆಲಸ ಮಾಡಿದ್ದೆನೆ ತತ್ವ ಸಿದ್ದಾಂತಗಳು ಒಪ್ಪದೆ ಬೇಶರತ್ ಆಗಿ ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೆನೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹುದ್ದೆ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ವೀಣಾ ಅಂಜನ್ ಕುಮಾರ್ ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ದುಡಿದಿದ್ದರು ಸಹ ಪ್ರಯೋಜನವಿಲ್ಲ. ಈ ಹಿಂದೆ ನಮ್ಮ ಮನೆಯೇ ಕಾಂಗ್ರೆಸ್ ಕಚೇರಿಯ ರೀತಿಯಲ್ಲಿ ಬಳಸಿಕೊಂಡು ಅವರಿಗೆ ಬೇಕಾಗುವ ಅನುಕೂಲಗಳಿಗೆ ಮಾತ್ರ ನಾವು ಬೇಕು.ಇತ್ತಿಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಂತಿದೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇವೆ ಸಾಕು ಬೇಸತ್ತು ಹೋಗಿ ಪಕ್ಷ ಬದಲಾವಣೆ ಮುಂದಾಗಲು ಕಾರಣವಾಗಿದೆ. ಜೆಡಿಎಸ್ ಕೆ.ಎಂ.ತಿಮ್ಮಾರಾಯಪ್ಪ ರವರಿಗೆ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಪಳವಳ್ಳಿ ನರಸಿಂಹ ರೆಡ್ಡಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಮಾತನಾಡಿದ ಅವರು.ಪಾವಗಡ ಪುರಸಭೆ ಉಪಾಧ್ಯಕ್ಷೆಯ ಗಂಡ ಕಾಂಗ್ರಸ್ ಮುಖಂಡ ಕೋಳಿ ಬಾಲಾಜಿ ಜೆಡಿಎಸ್ ಸೇರ್ಪಡೆಗೊಂಡು ನಂತರ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ವಾತಾವರಣ ದಿನೆ ದಿನೆ ಕಲ್ಮಶಗೊಳ್ಳುತ್ತಿದೆ ಹಾಗಾಗಿ ಪಕ್ಷ ತೊರೆದು ತಿಮ್ಮಾರಾಯಪ್ಪ ಗೆಲುವಿಗಾಗಿ ಶ್ರಮಿಸಲು ಮುಂದಾಗಿದ್ದೆವೆ ಎಂದರು.
-ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮಾರಾಯಪ್ಪ ಮಾತನಾಡಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡ ವೀಣಾ ಅಂಜನ್ ಕುಮಾರ್ ಮತ್ತು ಕೋಳಿ ಬಾಲಾಜಿ.ಪಳ್ಳವಳ್ಳಿ ನರಸಿಂಹ ರೆಡ್ಡಿ ಮತ್ತು ಇತರೆ ಎಲ್ಲರಿಗೂ ಸಂತೋಷ ದಿಂದ ಬರಮಾಡಿಕೊಳ್ಳುವ ಮೂಲಕ ನಮ್ಮ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಸ್ಥಾನ ಮಾನ ನೀಡುವ ಮೂಲಕ ಗೌರವಿಸಿತ್ತೇವೆ ಎಂದರು.
ಇನ್ನೂ ಅನೇಕ ಮಂದಿ ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಯವರ ಕಾರ್ಯವೈಖರಿ ಮೆಚ್ಚಿ ನಮ್ಮ ಪಕ್ಷಕ್ಕೆ ಸೇರುತ್ತಿದ್ದರೆ.ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮಂದಿ ನಮ್ಮ ಪಕ್ಷಕ್ಕೆ ಸೇರುತ್ತಿದ್ದರೆ ಎಂದರು.
ಪಾವಗಡ ತಾಲೂಕಿನ ವೀರ್ಲಗೊಂದಿ ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯರಾದ ಬೋರಣ್ಣನವರು, ರಾಜವಂತಿ ಗ್ರಾಮದ ರಘುನಾಥನವರು, ಸಾಹುಕಾರ ನಾಗರಾಜು, ಎಸ್. ನಾಗರಾಜು, ಆರ್.ಎಂ. ಶಿವಕುಮಾರ್, ಪಾವಗಡ ಪಟ್ಟಣದ ಕೋಳಿ ಬಾಲಾಜಿನವರು, ಸಿ.ಕೆ.ಗ್ರಾಮದ ವೆಂಕಟೇಶರಾವ್ ನವರು, ಜೋಗಣ್ಣ ದೊಡ್ಡಹಟ್ಟಿ ನವರು, ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಗಡ್ಡಂತಿಮ್ಮ, ನಂಜುಂಡಸ್ವಾಮಿ, ಸೊಗಡು ವೆಂಕಟೇಶ, ಚನ್ನಮಲ್ಲಯ್ಯ, ರಾಮಕೃಷ್ಣರೆಡ್ಡಿ, ಭರತ್, ಲಕ್ಷ್ಮೀನರಸಯ್ಯ, ಈರಣ್ಣ, ಬ್ರಹ್ಮೇಂದ್ರ ಕುಮಾರ, ಜಯಂತ್, ರಾಜಶೇಖರಪ್ಪ, ಶ್ರೀರಾಮಪ್ಪ, ಮಾಜಿ ಪುರಸಭೆಯ ಸದಸ್ಯರಾದ ಪ್ರಭು, ಜಿ.ಎ.ವೆಂಕಟೇಶ್, ಗೋಪಾಲ, ನಾಗೇಂದ್ರ, ಶಿವಪ್ಪನಾಯಕ, ಗುಟ್ಟಹಳ್ಳಿ ಮಣಿ, ನಲ್ಲಪ್ಪ, ಶಾಂತಕುಮಾರ್, ಶ್ರೀಧರ್, ಜೆಡಿಎಸ್ ಅಲ್ಪಸಂಖ್ಯಾತರ ಅಧ್ಯಕ್ಷ ಯೂನಸ್, ಲತೀಫ್,ಹೋಟಲ್ ಸಾಧಿಕ್.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಖಾಲಿದ್ ಅಹಮದ್.ಡಿ.ಐ.ಜಿ.ನಾರಾಯಣಪ್ಪ. ಮೇಧಾವಿ ನಾಗರಾಜ್, ಲಾರಿ ಹಮಾಲಿ ಕಾರ್ಯದರ್ಶಿ ಈರಣ್ಣ, ನಾನಿ, ಅಂಜಿ, ದೇವನಾಥ, ಅನಿಲ್, ಕೃಷ್ಣಮೂರ್ತಿ, ಈರಪ್ಪ, ನಾನಿ (ಸ್ಟೂಡಿಯೋ), ಸುಬ್ಬರಾಯಪ್ಪ, ಧರ್ಮಪಾಲ, ಬದ್ರಿ ಸೀನಾ,ಕಾವಲಗೆರೆ ರಾಮಾಂಜಿನಪ್ಪ, ಸೋಡಾ ಮಂಜು, ಗಗನ್ ಉಪಸ್ಥಿತರಿದ್ದರು
ವರದಿ
ಪಾವಗಡ: ಇಮ್ರಾನ್ ಉಲ್ಲಾ.