Janataa24 NEWS DESK
ಗುಬ್ಬಿ ತಾಲೂಕಿನಲ್ಲಿ ಬಿಜೆಪಿ ವಿಜಯದ ಬಾವುಟವನ್ನು ಹಾರಿಸುತ್ತೇವೆ ಎಂದು ಲೋಕಸಭಾ ಸದಸ್ಯರಾದ ಜಿ ಎಸ್ ಬಸವರಾಜ್ ತಿಳಿಸಿದರು.
ಗುಬ್ಬಿ :
ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಹಲವಾರು ಸಾಂಸ್ಕೃತಿಕ ಕಲಾಮೇಳಗಳೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿದರು.

ನಂತರ ಸುದ್ದಿಗಾರರೊಂದಿಗೆ ಸಂಸದ ಜಿಎಸ್ ಬಸವರಾಜು ರವರು ಮಾತನಾಡಿ ಗುಬ್ಬಿ ಕ್ಷೇತ್ರದ ಅಭ್ಯರ್ಥಿಯಾಗಿ ಎಸ್ ಡಿ ದಿಲೀಪ್ ಕುಮಾರ್ ಅವರನ್ನು ನಮ್ಮ ವರಿಷ್ಠರು ನಾಯಕರು ಆಯ್ಕೆ ಮಾಡಿದ್ದಾರೆ ನಾನು ಪ್ರಚಾರಪ್ರಿಯನಲ್ಲ ನಮ್ಮ ರಾಜ್ಯ ಸರ್ಕಾರವು ಗುಬ್ಬಿ ಕ್ಷೇತ್ರಕ್ಕೆ ಅನೇಕ ಅನುದಾನಗಳನ್ನು ನೀಡಿದೆ ಎಚ್ ಎ ಎಲ್ ನಂತ ಬೃಹತ್ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡಿದ್ದೇವೆ.
ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಆಂತರಿಕ ಒಳಜಗಳಗಳಿದ್ದವು ಆದರೆ ಈ ಬಾರಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.
ನರೇಂದ್ರ ಮೋದಿಯವರ ನಿರಂತರ ಹೋರಾಟ ಪ್ರತಿಫಲದಿಂದಾಗಿ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರದ ಗದ್ದುಗೆಯನ್ನೇರಿದೆ. ಹಾಗೂ ಗುಬ್ಬಿ ಕ್ಷೇತ್ರದ ಮುಖಂಡರಾಗಿದ್ದ ಜಿ ಏನ್ ಬೆಟ್ಟಸ್ವಾಮಿ ಅವರು ಬೇರೆ ಪಕ್ಷಕ್ಕೆ ಹೋಗಿರುವುದುದು ದುರದೃಷ್ಟಕರ ಸಂಗತಿ ಬಿಜೆಪಿ ಪಕ್ಷದ ಮುಖಂಡ ಸ್ಥಾನವನ್ನು
ಮುಂದುವರಿಸಬಹುದಾಗಿತ್ತು. ನನಗೂ ಇದು ಬೇಸರದ ಸಂಗತಿ. ಕ್ಷೇತ್ರದ ಮತದಾರರ ಪ್ರೀತಿಯ ಅಭಿಮಾನ ಬಿಜೆಪಿ ಪಕ್ಷದ ಮೇಲಿದೆ, ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ವಿಜಯದ ಬಾವುಟವನ್ನು ಹಾರಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಬೂತ್ ಮಟ್ಟದಿಂದ ಎಲ್ಲಾ ವರ್ಗದವರು ಅಭೂತಪೂರ್ವ ಬೆಂಬಲವನ್ನು ನೀಡಿದ್ದಾರೆ ತಾಲೂಕಿನಲ್ಲಿ ಮೂರು ಜನರು ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದೆವು ಆದರೆ ಸಮೀಕ್ಷೆ ಮೂಲಕ ಪಕ್ಷ ನಿರ್ಧಾರ ಮಾಡಿದೆ. ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಲ್ಲ.
ನಾನು ಕ್ಷೇತ್ರದ ಅಭಿವೃದ್ಧಿಯನ್ನು ಬಯಸುತ್ತೇನೆ, ಕ್ಷೇತ್ರದಲ್ಲಿ ಜಾತ್ಯತೀತವಾಗಿ ಕೆಲಸ ಮಾಡುತ್ತೇನೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು, ರೈತರಿಗೆ ನೀರಾವರಿ ಸೌಲಭ್ಯ, ಹಳ್ಳಿಗಳಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು. ಎಲ್ಲಾ ಜನಾಂಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿ ಕೊಡಬೇಕು, ಇನ್ನೂ ಅನೇಕ ಜನಪರ ಕಾರ್ಯಕ್ರಮಗಳ ಗುರಿ ನಾವಿಟ್ಟುಕೊಂಡು ಬಂದಿದ್ದೇವೆ. ಹಾಗಾಗಿ ನನ್ನ ಕ್ಷೇತ್ರದ ಜನ ನನಗೆ ಅಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಕುಮಾರ್, ಚಂದ್ರಶೇಖರ್ ಬಾಬು ಪ ಪಂ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಶಿವಕುಮಾರ್, ಬಲರಾಮ್, ಶಿವ ಸ್ವಾಮಿ, ಜಗದೀಶ್ ಇತರರು ಹಾಜರಿದ್ದರು.

ವರದಿ:ಗುಬ್ಬಿ ಶ್ರೀಕಾಂತ್