ಪಾವಗಡ: ಇಮ್ರಾನ್
ಪಾವಗಡ ಕಳೆದ ವಾರ ಆದಂತಹ ರಾಜಕಲ್ವೇ ಒತ್ತುವರಿ ಬಗ್ಗೆ ಜನತಾ24 ಸುದ್ದಿ ವಾಹಿನಿಯಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಒತ್ತುವರಿ ತೆರುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಹೀಗೆ ಪಟ್ಟಣದಲ್ಲಿ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಜ ಕಾಲುವೆ ಈ ಹಿಂದೆಯಿಂದಲೂ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬರುತ್ತಿದ್ದರು ಅಧಿಕಾರಿಗಳು ಮಾತ್ರ ನಮ್ಮ ವ್ಯಾಪ್ತಿ ಬರೋದಿಲ್ಲ ಎಂಬಂತೆ ಜಾಣ ಕುರುಡರಂತೆ ವರ್ತಿಸಿಕೊಂಡು ಬರುತ್ತಿದ್ದಾರೆ ಇದರ ಬಗ್ಗೆ ಹಲವು ಬಾರಿ ಸಂಘ ಸಂಸ್ಥೆಗಳು ರಾಜಕಾಲ್ವೆ ಬಗ್ಗೆ ದೂರುಗಳು ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿರಲಿಲ್ಲ.
ಅದರಂತೆ ಕಳೆದವಾರ ಕೆಲವೊಂದು ಜನತಾ24 ಸುದ್ದಿ ವಾಹಿನಿಯಲ್ಲಿ ಸುದ್ದಿಯಾಗಿತ್ತು ಅದರಂತೆ ಈ ದಿನ ಗುರುವಾರದೊಂದು ರಾಜ ಕಾಲುವೆ (ಡೊಳ್ಳಾರ ಹಳ್ಳ) ಒತ್ತುವರಿ ಮಾಡಿದಂತಹ ಸ್ಥಳವನ್ನು ಪುರಸಭೆ ಮುಖ್ಯ ಅಧಿಕಾರಿ ಜಗಾ ರೆಡ್ಡಿ ಹಾಗೂ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ರಾಜಗೋಪಾಲ್ ಪುರಸಭೆ ಆರೋಗ್ಯಧಿಕಾರಿ ಸ್ಥಳದಲ್ಲಿ ನಿಂತು ಒತ್ತುವರಿ ಸ್ಥಳವನ್ನು ಜೆಸಿಬಿ ಮೂಲಕ ತೆರವು ಯೋಗೊಳಿಸಲು ಮುಂದಾದಾಗ ಅದೇ ಪುರಸಭೆಯ ಸದಸ್ಯ ಅಧಿಕಾರಿಗಳಿಗೆ ಆವಾಜ್ ಹಾಕಿರುವವುದು ಬೆಳಕಿಗೆ ಬಂದಿದೆ. ಸಾರ್ವಜನಿಕ ಹಿತ ಕೋರುವ ಇಂತಹ ಜನಪ್ರತಿನಿಧಿಗಳು ಬೇಕೆ ಎಂಬ ಪ್ರಶ್ನೆ ಸಾರ್ವಜನಿಕರದು.
ಹೀಗೆ ಪಟ್ಟಣದ ಅನೇಕ ಜಾಗದಲ್ಲಿ ಇದೇ ರೀತಿಯಲ್ಲಿ ರಾಜಕೀಯ ಹಾಗೂ ಪ್ರಭಾವಿಗಳ ಒತ್ತಡದಿಂದ ಪಟ್ಟಣದ ಹಾದೂ ಹೋಗಿರುವ ರಾಜಕಾಲೂವೆ ಒತ್ತುವರಿ ಮಾಡಿಕೊಂಡಿರುವ ಸ್ಥಳವೂ ಸಹ ಇದೇ ರೀತಿಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವುಗೊಳಿಸಲು ಮುಂದಾಗಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.