ಗುಬ್ಬಿ: ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ತಾಂತ್ರಿಕ ತೊಂದರೆ ಹೊರತುಪಡಿಸಿ ಯಾವುದೇ ಗೊಂದಲವಿಲ್ಲದೆ ಮತದಾನ ನಡೆಯಿತು.
ಕ್ಷೇತ್ರದಲ್ಲಿ ಒಟ್ಟು 1.81.086 ಮತದಾರರು ಇದ್ದು
ಮಹಿಳೆಯರು90.592
ಪುರುಷರು 90.483
ಮತದಾರರು ಇದ್ದಾರೆ.

ಕ್ಷೇತ್ರದಲ್ಲಿ 212 ಮತಗಟ್ಟೆಗಳಿದ್ದು 48 ಅತಿ ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ.
ಮಾರಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
ಮತದಾರರು ಬೆಳಗ್ಗೆ 7.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಇಡೀ ಪುರುಷ ಮತ್ತು ಮಹಿಳೆಯರು ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.
ಮತಗಟ್ಟೆಯ 100 ಮೀಟರ್ ಹೊರಗೆ ಇದ್ದ ಕಾರ್ಯಕರ್ತರು ಯಾವುದೇ ಗಲಾಟೆ ಗೊಂದಲಗಳಿಗೆ ಆಸ್ಪದ ನೀಡದೆ ಅವರದೇ ಆದ ರೀತಿಯಲ್ಲಿ ಮತದಾರರ ಮನವೊಲಿಸಿ ಮತ ಕೇಂದ್ರಕ್ಕೆ ಕಳುಹಿಸುತ್ತಿದ್ದರು.

ಕ್ಷೇತ್ರಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ
ಚುನಾವಣಾ ಆಯೋಗ ಪೋಲಿಸ್ ಇಲಾಖೆಯು ತೆಗೆದುಕೊಂಡ ಕಾನೂನು ಕ್ರಮಬದ್ಧ ನಿಯಮಗಳಿಗೆ ನಿಯಮಾನುಸಾರ ದಿಂದ ಇಂದು ಮತದಾರರು ಶಾಂತಿಯುತ ಮತದಾನ ನಡೆಸಿದರು.

ವರದಿ
ಗುಬ್ಬಿ: ಶ್ರೀಕಾಂತ್