Document

ಗುಂಡ್ಲುಪೇಟೆ: ಹಂಗಳ ಗ್ರಾಮದಲ್ಲಿ ನಿವೇಶನಗಳ ಹಂಚಿಕೆಯ ವಿಳಂಬಕ್ಕೆ ಶಾಸಕ ಸಿ.ಎಸ್ ನಿರಂಜನಕುಮಾರ್ ಕಾರಣ ಎಂದ: ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ

ಗುಂಡ್ಲುಪೇಟೆ: ಕಾಂತರಾಜು

ಹಂಗಳ ಗ್ರಾಮದಲ್ಲಿ ಗುರುವಾರ ನಡೆದ ರಸ್ತೆ ಕಾಮಗಾರಿ ಚಾಲನೆ ವೇಳೆ ಶಾಸಕ ಸಿ.ಎಸ್.ನಿರಂಜನಕುಮಾರ್ ನಾನು ಮನಸ್ಸು ಮಾಡದಿದ್ದರೆ ಸದ್ಯಕ್ಕೆ ನಿವೇಶನ ಹಂಚಿಕೆ ಆಗುತ್ತಿರಲಿಲ್ಲ ಎಂದು ಹೇಳಿದ್ದರು. ಆದರೆ ಗ್ರಾಮದಲ್ಲಿ ನಿವೇಶನ ಹಂಚಿಕೆಯಲ್ಲಿ ನನ್ನ ಮತ್ತು ಗ್ರಾಪಂ ಪರಿಶ್ರಮ ಅಡಗಿದೆ ಆದರೆ ಶಾಸಕರ ಪರಿಶ್ರಮವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

WhatsApp Image 2022 11 13 at 4.05.29 PM


ಗ್ರಾಮದ ನಾಯಕರು, ಆದಿ ಜಾಂಬವರಿಗೆ ಮನೆ ಇಲ್ಲದನ್ನು ಗಮನಿಸಿ, ಏನೇ ಆಗಲಿ ನಿವೇಶನ ಕೊಡಿಸಬೇಕು ಎಂದು ನಿರ್ಧರಿಸಿ ನಾನು ಖರೀದಿಸಿದ್ದ ಜಮೀನು ಆಶ್ರಯ ಸಮಿತಿಗೆ ಕೊಟ್ಟು ಮತ್ತು ಗ್ರಾಮದ ಸ.ನಂ.1 ಮತ್ತು 2ರಲ್ಲಿ 2 ಎಕರೆ ಬಿಡಿಸಿ ನಿವೇಶನ ನಾಂದಿ ಹಾಡಿದ್ದೇನೆ ಎಂದಿದ್ದಾರೆ.

Screenshot 2022 11 13 165316


ಆದಿ ಜಾಂಬವರಿಗೆ ನಿವೇಶನ ಕೊಡಲು ನಿರ್ಧರಿಸಲಾಗಿತ್ತು. ನಿವೇಶನ ಹಂಚಲು ಶಾಸಕರು ಬಿಡದೆ ನಾನು ಶಾಸಕನಾಗಿದ್ದೀನಿ, ಪಟ್ಟಿಯನ್ನು ರದ್ದು ಪಡಿಸುತ್ತೇನೆ ಎಂದು ಹೇಳಿದಾಗ ನಾನು ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದು ನಿವೇಶನ ಹಂಚಲು ಶ್ರಮ ಹಾಕಿದ್ದೇನೆ ಎಂದರು.

WhatsApp Image 2022 11 13 at 4.05.29 PM 1


173 ನಿವೇಶನಗಳಲ್ಲಿ ಶಾಸಕರಿಗೆ 30 ನಿವೇಶನ ಕೊಟ್ಟಿದ್ದೇವೆ. 30 ನಿವೇಶನ ದಲಿತರಿಗೆ ಸಲ್ಲಬೇಕಿತ್ತು. ದಲಿತರಿಗೆ ಕೊಡಿ ಎಂದು ನಾನು ಹೇಳಿದರೂ ಶಾಸಕರು ಅವರಿಷ್ಟ ಬಂದವರಿಗೆ ನಿವೇಶನ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Document

Leave a Reply

Your email address will not be published. Required fields are marked *