ಕೊರಟಗೆರೆ ವಿದ್ಯಾರ್ಥಿನಿ ರಮ್ಯಾ ಗೆ ಒಲಿದ ಚಿನ್ನದ ಪದಕ. ‘‘ಕನ್ನಡ ಕೌಸ್ತುಭ’’ ರಾಜ್ಯ ಪ್ರಶಸ್ತಿ.

Janataa24 NEWS DESK
ಕೊರಟಗೆರೆ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದ ವಿದ್ಯಾರ್ಥಿ.
ಕೊರಟಗೆರೆ: ೨೦೨೨-೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ರಮ್ಯ ಎಸ್.ಎನ್ ೫೮೭ ಅಂಕ ಪಡೆದಿದೆ, ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೫ ಪರಿಪೂರ್ಣ ಅಂಕವನ್ನು ಗಳಿಸಿದ್ದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಚಿನ್ನದ ಲೇಪನದ ಪದಕ ‘‘ಕನ್ನಡ ಕೌಸ್ತುಭ’’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ರಾಜ್ಯದಲ್ಲಿ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿನ ಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೫ಕ್ಕೆ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೊರಟಗೆರೆಯ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ರಮ್ಯ ಎಸ್.ಎನ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು, ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದಂತೆ ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಭವ್ಯ ದಿವ್ಯ ವೇದಿಕೆಯ ಸಿಂಹಾಸನದಲ್ಲಿ ಕೂರಿಸಿ ಕನ್ನಡ ಕಂಕಣ ಕಟ್ಟಿ, ಕನ್ನಡ ತಿಲಕವಿಟ್ಟು, ಕನ್ನಡರಾತಿ ಬೆಳಗಿ, ವಿದ್ಯಾರ್ಥಿಗೆ ಕಿರೀಟವಿಟ್ಟು ಪುಷ್ವವೃಷ್ಠಿಯೊಂದಿಗೆ ಸ್ಮರಣಿಕೆ, ಅಭಿನಂದನಾ ಪತ್ರ ನೀಡಿ, ಚಿನ್ನದ ಲೇಪನದ ಪದಕದೊಂದಿಗೆ ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆಯೊಂದಿಗೆ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ನಂತರ ಪ್ರತಿಭಾನ್ವಿತ ವಿದ್ಯಾರ್ಥಿನಿ ರಮ್ಯ ಎಸ್.ಎನ್ ಮಾತನಾಡಿ, ನಮ್ಮ ತಂದೆ-ತಾಯಿ, ಶಿಕ್ಷಕರ ಬೆಂಬಲದಿAದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಾಯಿತು. ಅವರಿಗೆ ನಾ ಸದಾ ಋಣಿಯಾಗಿರುತ್ತೇನೆ, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ನನ್ನತಂಹ ಅದೆಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳನ್ನು ಗುರುತಿಸಿ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿಯನ್ನು ನೀಡಿ ಅಭಿನಂದನೆಯನ್ನು ಸಲ್ಲಿಸಿದ್ದಕ್ಕೆ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದರು.ಕೊರಟಗೆರೆಗೆ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ವಿದ್ಯಾರ್ಥಿನಿ ರಮ್ಯ ರವರಿಗೆ ಪೋಷಕರು, ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು ಅಭಿನಂದನೆ ಸಲ್ಲಿಸಿ ಶುಭಕೋರಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.