ಕೊರಟಗೆರೆಯ ನಾಗೇನಹಳ್ಳಿ ಬಳಿ ರಸ್ತೆ ಅಪಘಾತ.
ಸ್ಥಳಕ್ಕೆ ಶಾಸಕರೇ ಬಂದರು ಬರಲಿಲ್ಲ ಆಂಬುಲೆನ್ಸ್..!
108ಕ್ಕೆ ನೂರೆಂಟು ವಿಘ್ನಗಳು.

108ಕ್ಕೆ ಬೇಕಿದೆ ತುರ್ತು ಚಿಕಿತ್ಸೆ.
ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ನಾಗೇನಹಳ್ಳಿ ಹತ್ತಿರ ಮಲ್ಲೇಶ್ಪುರ ಮಾರ್ಗದ ಬಳಿ ರಾಜ್ಯ ಹೆದ್ದಾರಿ 3ರಲ್ಲಿ(SH3) ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ಓರ್ವ ಬೈಕ್ ಸವಾರ ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಬೈಕ್ ನಿಂದ ಬಿದ್ದು ತೀವ್ರ ರಕ್ತಸ್ರಾವದಿಂದ ನೆರಳಾಡುತ್ತಿದ್ದಂತಹ ವ್ಯಕ್ತಿ ವ್ಯಕ್ತಿಯೇ, 108 ಸಂಖ್ಯೆಗೆ ತುರ್ತು ಸಹಾಯಕ್ಕಾಗಿ ಕರೆ ಮಾಡಿರುತ್ತಾರೆ.
108 ಸಹಾಯವಾಣಿಯಿಂದ ಒಂದು ಗಂಟೆ ಕಳೆದರೂ ಕೂಡ ಯಾವುದೇ ನೆರವಾಗಿರುವುದಿಲ್ಲ.
ಕೊನೆಗೆ ವಿಷಯ ತಿಳಿದು ಶಾಸಕರೇ ಸ್ಥಳಕ್ಕೆ ಬಂದು ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಕಾರಿನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ.

ಇದು ಮೊದಲೇನಲ್ಲ..!

ಹಲವಾರು ಬಾರಿ ಆಗಿದೆ, 108ರ ಸಿಬ್ಬಂದಿಗಳ ನಿರ್ಲಕ್ಷತೆಯನ್ನು, ತಾಲೂಕು ವೈದ್ಯಾಧಿಕಾರಿಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇಂತಹ ಘಟನೆಗಳನ್ನು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತುಬಿಡುತ್ತಾರೆ.
ಕೆಲವೇ ತಿಂಗಳುಗಳ ಹಿಂದೆ ಮಾನ್ಯ ನಿಕಟಪೂರ್ವ ತಹಸೀಲ್ದಾರ್ ರವರು ಇಂತಹ ಹಲವಾರು ಸಾರ್ವಜನಿಕ ದೂರುಗಳನ್ನು ಆಲಿಸಿ 108ಕ್ಕೆ ಸ್ವತಃ ತಹಸೀಲ್ದಾರ್ ರವರೇ ಕರೆಮಾಡಿ, 108ರ ಅವ್ಯವಸ್ಥೆಯನ್ನು ಬಯಲು ಮಾಡಿದ್ದರು.

ಆದರೆ ಇದೀಗ ಮತ್ತೆ 108 ತುರ್ತು ಸಹಾಯವಾಣಿಯ ಸಿಬ್ಬಂದಿಗಳ ಅವ್ಯವಸ್ಥೆಯಿಂದ ಸಾರ್ವಜನಿಕರು ರಸ್ತೆಯಲ್ಲಿಯೇ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಇನ್ನು ಮುಂದಾದರು ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಪ್ರತಿನಿತ್ಯ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲಾರರು.
ವರದಿ
ಕೊರಟಗೆರೆ:ಮಂಜುನಾಥ್