ಪಾವಗಡ: ಇಮ್ರಾನ್ ಉಲ್ಲಾ
ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಮಗ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ವಿ ವೆಂಕಟೇಶ್ ತಾಲೂಕಿನ 34 ಪಂಚಾಯಿತಿ ಇಂದ ತಲಾ ಮೂರು ಬಸ್ ಗಳಂತೆ ತಾಲೂಕಿನ ವದನಕಲ್ಲು ತಿಪ್ಪೆರುದ್ರಸ್ವಾಮಿ ದೇವಲಯದ ಅವರಣದಲ್ಲಿ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಶಾಸಕರಾದ ಸೋಮ್ಲಾನಾಯ್ಕ್ ಮಗಳು ಈ ಬಾರಿ ಮಹಿಳಾ ವಿಭಾಗದಿಂದ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದಿದ್ದಾರೆ ಇವರು ಸಹ ಸಮವೆಶಕ್ಕೆ 12 ಬಸ್ ಗಳ ವ್ಯವಸ್ಥೆಯನ್ನು ತಮ್ಮ ಹರ್ಷಿತ ಹಾಲ್ ಮುಂಭಾಗದಲ್ಲಿ ವ್ಯವಸ್ಥೆ ಕಲ್ಪಸಿದ್ದರು. ಇನ್ನೂರ ಆಕಾಂಕ್ಷಿ ಅಭ್ಯರ್ಥಿ ರಾಮಯ್ಯನಪಾಳ್ಯ ರಾಮಚ೦ದ್ರಪ್ಪ ಸಹ 6 ಬಸ್ ಗಳ ವ್ಯೆವಸ್ಥೆ ಕಲ್ಪಸಿರುವ ಮಾಹಿತಿ ತಿಳಿದು ಬಂದಿದೆ.
ಈ ಕುರಿತು ಮಾಜಿ ಶಾಸಕ ಸೊಮ್ಲಾನಾಯ್ಕ್ ರವರ ಮಗಳು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಲಿ ಈಗ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಯಾದ ಗಾಯಿತ್ರಿ ಬಾಯಿ ಮಾತನಾಡಿದ ಅವರು, ತಾಲೂಕು ಕಾಂಗ್ರೆಸ್‌ನ ಸಕ್ರಿಯ ಮುಖಂಡ, ಕಾರ್ಯಕರ್ತನಾಗಿ ಆನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ವಿಧಾನ ಸಭೆ ಕಾಂಗ್ರೆಸ್ ಟಿಕೆಟ್ ಬಯಸಿ, ನಿಯಮನುಸಾರ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದೆನೆ ನನ್ನ ಸಮುದಾಯದ ಮುಖಂಡರು ಮತ್ತು ಬೆಂಬಲಿಗರೊಂದಿಗೆ ಚಿತ್ರದುರ್ಗ ದಲ್ಲಿ ನಡೆಯುತ್ತಿರುವ ಎಸ್.ಸಿ.ಎಸ್.ಟಿ ಸಮಾವೇಶಕ್ಕೆ ಹೋಗುತ್ತಿದ್ದೆವೆ ಎಂದರು.
ಕಾಂಗ್ರೆಸ್ ನ ಆಕಾಂಕ್ಷಿ ಅಭ್ಯರ್ಥಿ ಗಾಯಿತ್ರಿ ಬಾಯಿ ತಮ್ಮ ಲಂಬಾಣಿ ಸಮುದಾಯದ ಗೀತೆಯೊಂದಿಗೆ ಹಾಡುವ ಮೂಲಕ ಚಿತ್ರದುರ್ಗದ ಕಡೆ ಪ್ರಯಾಣಸಿದ್ದು ವಿಶೇಷವಾಗಿತ್ತು.