Janataa24 NEWS DESK
ಕಾಂಗ್ರೆಸ್ ಮುಖಂಡ ಎಚ್ ಕೆ ನಾಗೇಶ್ ರವರು ನಿಧನ .ಶ್ರದ್ಧಾಂಜಲಿ ಸಲ್ಲಿಸಲು ತಾಲೂಕಿಗೆ ಗೃಹ ಮಂತ್ರಿಗಳ ಆಗಮನ.

ತುರುವೇಕೆರೆ: ತಾಲೂಕಿನ ಸಿ ಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಕೆ ನಾಗೇಶ್ ರವರು (55 ವರ್ಷ) ನೆನ್ನೆ ಮಧ್ಯಾಹ್ನ ಹೃದಯಘಾತದಿಂದ ಸಾವನಪ್ಪಿದ್ದಾರೆ .
ಇಂದು ಅವರ ಅಂತ್ಯ ಕ್ರಿಯೆಯು ಸ್ವಗ್ರಾಮವಾದ ತಾಲೂಕಿನ ದಬ್ಬೇಗಟ್ಟ ಹೋಬಳಿಯ ಕೆ ಹೊಸಳ್ಳಿಯಲ್ಲಿ ನಡೆಯಲಿದ್ದು, ನಾಗೇಶ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಗೃಹಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಇನ್ನು ನಿಧನರಾದ ಎಚ್ ಕೆ ನಾಗೇಶ್ ರವರು ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿ, ಹಾಗೂ ಜಿಲ್ಲಾ ಕುರುಬರ ಸಂಘದಲ್ಲಿ ಗುರುತಿಸಿಕೊಂಡಿದ್ದು, ಇವರು ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟನೆ ಮಾಡುವುದರಲ್ಲಿಯೂ ಸಕ್ರಿಯವಾಗಿ ಇದ್ದು .
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲೂ ಕೂಡ ಗುರುತಿಸಿಕೊಂಡಿದ್ದರು,
ಇವರು ಪತ್ನಿ, ಓರ್ವ ಪುತ್ರ ,ಓರ್ವ ಪುತ್ರಿ ,ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇನ್ನು ಭಾನುವಾರ ವಾದ ನೆನ್ನೆ ಅಷ್ಟೇ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ವ್ಯಾಪ್ತಿಯ ನಾರನಹಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯೊಂದಿಗೆ ನಾಗೇಶ್ ಅವರು ಬೆಳಗ್ಗೆ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಒಟ್ಟಾರೆ ಸಾರ್ವಜನಿಕವಾಗಿ ತೊಡಿಸಿಕೊಂಡಿದ್ದ ಸ್ನೇಹಪರರು ಆತ್ಮೀಯರು ಹಾಗಿದ್ದ ನಾಗೇಶ್ ನಿಧನದಿಂದ ಓರ್ವ ಸಹೃದಯ ವ್ಯಕ್ತಿಯನ್ನು ಈ ತಾಲೂಕು ಕಳೆದು ಕೊಂಡಂತಾಗಿದೆ.