Document

ಕಾಂಗ್ರೆಸ್ ಟಿಕೆಟ್ ಹೆಚ್.ವಿ.ವೆಂಕಟೇಶ್ ಗೆ ಘೋಷಣೆ.

IMG 20230325 WA0004


ಟಿಕೆಟ್‌ ಘೋಷಣೆಯಾದ ನಂತರ ಬಿರುಸಿನ ಪ್ರಚಾರಕ್ಕೆ ಇಳಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್.

IMG 20230325 WA0007



ಟಿಕೆಟ್‌ ಘೋಷಣೆಯಾದ ನಂತರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪಾವಗಡದಲ್ಲಿ ಮಾತನಾಡಿ,
ಟಿಕೆಟ್ ಬಗ್ಗೆ ಈಗಾಗಲೇ ಹಿರಿಯರಿಂದ ಮಾಹಿತಿ ಗೊತ್ತಿತ್ತು ಅದರೆ ಈ ಭಾಗದಲ್ಲಿ

image 3
ಜಾಹೀರಾತು/Advertisement

ಟಕೆಟ್ ಬಗ್ಗೆ ಬಹಳಷ್ಟು ಗೊಂದಲ ಉಂಟುಮಾಡಲು ಹರಸಾಹಮಾಡಿ ಕೆಲವರು ವೆಂಕಟೇಶ್ ಗೆ ಟಿಕೆಟ್ ಸಿಗುವುದಿಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ತಿಳಿಸಿದ್ದರು. ಆದರೆ ಅದರ ಬಗ್ಗೆ ತಲೆಗೆಡಿಸಿಕೂಳ್ಳದೆ ಜನರ ಮದ್ಯ ಹೋಗಿ ಮತ ಕೇಳುತ್ತಿದ್ದೆ.

IMG 20230325 WA0003



ನನಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಬಹಳಷ್ಟು ಜನರಿಗೆ ನಿದ್ದೆ ಕೆಟ್ಟಂತಿದೆ ಎಂದರು.

ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಜನರ ಬಳಿ ಹೋಗಿ ಮತ ಕೇಳುತ್ತೇನೆ. ಈಗಾಗಲೇ ಕೋವಿಡ್ ವೇಳೆಯಲ್ಲಿ ಬಹಳಷ್ಟು ಜನರಿಗೆ ಸ್ಪಂದಿಸುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಜನ ನನ್ನ ಮೇಲೆ ವಿಶ್ವಾಸವಿಟ್ಟು ಮತಹಾಕುತ್ತಾರೆ ಎಂದರು.



ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ವೆಂಕಟೇಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ.

ಟಿಕೆಟ್ ಘೋಷಣೆ ಕಾಂಗ್ರೆಸ್ ಟಿಕೆಟ್ ಹೆಚ್.ವಿ.ವೆಂಕಟೇಶ್ ಗೆ ಘೋಷಣೆಯಾದ ದಿನವೇ ಪಾವಗಡ ರೂಪ್ಪ ಗ್ರಾಮದಿಂದ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭ ಮಾಡಿ, ಗುಟ್ಟಹಳ್ಳಿ,ರೆಡ್ಡಿಕಾಲೋನಿ, ಎ.ಕೆ.ಕಾಲೋನಿಗಳಲ್ಲಿ ಪ್ರಚಾರ ಬೇಟೆ ಪ್ರಾರಂಭ.

image 4
ಜಾಹೀರಾತು/Advertisement



ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪ್ರಚಾರಕ್ಕೆ ಧುಮುಕಿದ ಕಾರ್ಯಕರ್ತರು ಮತ್ತು ಮುಖಂಡರು.
ಪ್ರಚಾರದ ವೇಳೆ ಮಹಿಳೆಯರು ದಂಡು ದಂಡಾಗಿ ಬಂದಿದ್ದು ವಿಶೇಷವಾಗಿತ್ತು.

IMG 20230325 WA0006



ಈ ವೇಳೆ ಮಾಜಿ ಪುರಸಭೆ ಅಧ್ಯಕ್ಷ ಗುರ್ರಪ್ಪ,ಶಂಕರ್ ರೆಡ್ಡಿ,ಪುರಸಭೆ ಸದಸ್ಯರಾದ ಸುದೇಶ್ ಬಾಬು,ರಾಜೇಶ್,ರವಿ,ಮಣಿ,ರಾಜ್ಯ ಅಲ್ಪಸಂಖ್ಯಾತರ ಕಾರ್ಯದರ್ಶಿ ಷ ಬಾಬು,ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ವೀಣಾಅಂಜನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷ ಸುಮಾ ಅನಿಲ್, ಮಹೇಶ್,ರಾಮಲಿಂಗ,ಪಾತಪ್ಪ,ಟಿಪ್ಪು,ಬಾಷ ಸಾಬ್,ಪದ್ಮಕ್ಕೆ,ಬಂಗರಪ್ಪ,ಇತರರು ಇದ್ದರು.

ವರದಿ

ಪಾವಗಡ: ಇಮ್ರಾನ್ ಉಲ್ಲಾ.

IMG 20230325 WA0005
Document

Leave a Reply

Your email address will not be published. Required fields are marked *