Document

ಕವಿ ಕುಮಾರ್ ಇಂದ್ರಬೆಟ್ಟ ರವರಿಗೆ ಡಾಕ್ಟರೇಟ್ ಪದವಿ ಪ್ರದಾನ

Janataa24 NEWS DESK

IMG 20231022 WA0016

ಪಾವಗಡ: ತಾಲೂಕಿನ ಕವಿ ಡಾ. ಕುಮಾರ ಇಂದ್ರಬೆಟ್ಟ ಅವರು 17.10.2023 ರಂದು ನಡೆದ 58ನೇ ಘಟಿಕೋತ್ಸವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಸಮಕಾಲೀನ ಬರಹಗಾರರಲ್ಲಿ ಭರವಸೆಯ ಬರಹಗಾರರಾದ ಶ್ರೀಯುತರು ಪಾವಗಡ ತಾಲ್ಲೂಕಿನ,

IMG 20231022 WA0014

ಇಂದ್ರಬೆಟ್ಟ ಗ್ರಾಮದವರು. 1987ರಲ್ಲಿ ಶ್ರೀ ದುರ್ಗಪ್ಪ ಹಾಗೂ ಶ್ರೀಮತಿ ಲಕ್ಷ್ಮಮ್ಮ ಅವರ ಮಗನಾಗಿ ಜನಿಸಿ, ಹುಟ್ಟೂರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನ ಹುಟ್ಟೂರಲ್ಲೇ ಮುಗಿಸಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪಾವಗಡದ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿ,

IMG 20231022 WA0013

ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಕೇಂದ್ರದಲ್ಲಿ ನಂತರ ಪಿಹೆಚ್.ಡಿ. ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಕೇಂದ್ರದಲ್ಲಿ JRF ಧನಸಹಾಯದೊಂದಿಗೆ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರ ಮಾರ್ಗದರ್ಶನದಲ್ಲಿ “ಹೊಸ ತಲೆಮಾರಿನ ಕನ್ನಡ ಮಹಿಳಾ ಕಾವ್ಯ: ವಸ್ತು ಮತ್ತು ಅಭಿವ್ಯಕ್ತಿಯ ನೆಲೆಗಳು” ಎಂಬ ವಿಷಯದ ಮೇಲೆ ಸಂಶೊಧನ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.

ಶ್ರೀಯುತರ ಎಲ್ಲಾ ಸಾಹಿತ್ಯ ಬರಹಗಳು ‘UGC NET AND KSET SYLLABUS ನಲ್ಲಿ ಸೇರ್ಪಡೆಗೊಂದಿವೆ. ಇದುವರೆಗೂ ‘ನಿನಗೂ ಕೂಡ ಕಳಂಕವೆ’, ‘ಬೆಂಕಿ ಸುವುವ ಜಲ’ಎಂಬ ಎರಡು ಕವನ ಸಂಕಲನಗಳನ್ನೂ, ‘ತೇವ ತಾಗಿದ ಬೀಜ’, ‘ಎಳೆ ಬಿಸಿಲು’ ಎಂಬ ವಿಮರ್ಶಾ ಸಂಕಲನಗನ್ನೂ, ‘ಬರಿಗಾಲು’,’ಹಲವು ನುಡಿಗಳ ನಡಿಗೆ’, ಕವಡೆಯ ಕಣ್ಣು, ಸಾಹಿತ್ಯ ಚೇತನ, ಸಾಹಿತ್ಯ ಪ್ರಸ್ತಾನ, ದಲಿತ ಕಾವ್ಯ ಯಾನ ಹಾಗೂ ‘ugc NET&K-SET ಕನ್ನಡ ಪ್ರಶ್ನೊತ್ತರ ಕೋಶ’ ಮೊದಲಾದ ಕೃತಿಗಳನ್ನು ಇತರರೊಂದಿಗೆ ಸೇರಿ ಸಂಪಾದನೆ ಮಾಡಿದ್ದಾರೆ.

IMG 20231022 WA0015

ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಬಿಎಸ್ಸಿ ಆನರ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರಿಗೆ ಪಾವಗಡ ತಾಲೂಕಿನ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಅಭಿನಂದನೆಗಳು ಸಲ್ಲಿಸಿದ್ದಾರೆ.

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *