Janataa24 NEWS DESK

ಕಲುಷಿತ ನೀರು ಕುಡಿದು ಅಸ್ವಸ್ಥರಾದ 15 ಜನ ಆಸ್ಪತ್ರೆಗೆ ದಾಖಲು.ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ..!

ಪಾವಗಡ: ತಾಲೂಕಿನ ವೈ ಎನ್ ಹೊಸಕೋಟೆ ಪಟ್ಟಣದ ಬೆಸ್ತರಹಳ್ಳಿ ರಸ್ತೆ ಹೊಂದಿಕೊಂಡಿರುವ ತಾತಯ್ಯನ ಗುಡಿ ಹಿಂಭಾಗದ ಹಾಗೂ ಡಿ ಬ್ಲಾಕ್ ನ ಕೆಲ ನಿವಾಸಿಗಳು ಶುಕ್ರವಾರ ಶನಿವಾರ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಘಟನೆ ನಡೆದಿದೆ.

13 ಜನರನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಇನ್ನು ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಬಡ ವರ್ಗದ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಮುಖ್ಯವಾಗಿ ಈ ಭಾಗದ ಬಗ್ಗೆ ಸ್ಥಳೀಯ ಆಡಳಿತ ಸೇರಿದಂತೆ ಅಧಿಕಾರಿ ವರ್ಗದವರು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಟ್ಟಣದ ಸಾರ್ವಜನಿಕ ನಳಗಳಿಗೆ(Tap) ಪೂರೈಕೆ ಆಗುವ ನೀರಿನ ಸರಬರಾಜು ಪಟ್ಟಣದ ಗೇಟ್ ವಾಲ್‌ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು ಅದರಲ್ಲಿ ಕಸಕಡ್ಡಿ ಸೇರಿ ಕ್ರಿಮಿಕೀಟಗಳು ಸೇರಿಕೊಂಡಿವೆ ಇಂತಹ ಸುಮಾರು 30 ಗೆಟ್ ವಾಲ್ ಗಳಿದ್ದು ಬಹುಪಾಲು ಈ ಗುಂಡಿಗಳಲ್ಲಿ ಶೇಖರಣೆಗೊಂಡ ನೀರು ಕೆಟ್ಟು ಮತ್ತು ನರಗಳಲ್ಲಿ ಸೇರಿಕೊಂಡು ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನಲ್ಲಿ ಮಿಶ್ರಣವಾಗುತ್ತಿರುವುದು ಈ ಒಂದು ಅಸ್ವಸ್ಥತೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ತಾಲೂಕಿನ ವೈ ಎನ್ ಹೊಸಕೋಟೆ ಪಟ್ಟಣದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ನೀರಿನ ಸೌಲಭ್ಯ ಒದಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಲುಷಿತ ನೀರು ಕುಡಿದು ಅಸ್ವಸ್ಥರಾದ 15 ಜನ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ತಾಲೂಕು ಪಂಚಾಯತಿ ಇಓ ಅಸ್ತವ್ಯಸ್ತಗೊಂಡ ಬಗ್ಗೆ ಮಾಹಿತಿ ಪಡೆಯದೆ ಶೌಚಾಲಯ ಅರಿವು ಮೂಡಿಸಲು ಮುಂದಾದ ತಾಲೂಕು ಪಂಚಾಯತಿ ಇಓ ಶಿವರಾಜಯ್ಯ.
ವರದಿ
ಇಮ್ರಾನ್ ಉಲ್ಲಾ:ಪಾವಗಡ