ಚಾಮರಾಜನಗರ: ಶಿವು
ಇಂದು ಚಾಮರಾಜನಗರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಾಗೂ ಚಾಮರಾಜನಗರ ತಾಲೂಕು ಮತ್ತು ನಗರ ಘಟಕದ ವತಿಯಿಂದ ಡಾ. ಪುನೀತ್ ರಾಜಕುಮಾರ್ ರವರ ಸವಿನೆನಪಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಡಾಕ್ಟರ್ ರಾಜಕುಮಾರ್ ಕಲಾಮಂದಿರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಜಿತೆಗಳಾಗಿ ಚಲನಚಿತ್ರ ನಟ ಧನ್ವೀರವರು ಹಾಗೂ ಪ್ರವೀಣ್ ಕುಮಾರ್ ಶೆಟ್ಟಿ ರವರು ಆಗಮಿಸಿದರು ಕಾರ್ಯಕ್ರಮದಲ್ಲಿ ವಾಮನ ಮತ್ತು ಬಂಪರ್ ಚಿತ್ರದ ಟೀಸರ್ ಅನ್ನು ಪ್ರದರ್ಶಿಸಲಾಯಿತು.

ಸೈರನ್ ಚಿತ್ರದ ಟೀಸರ್ ಅನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮ ವನ್ನು ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಚನ್ನಬಸವ ಸ್ವಾಮಿಗಳವರು ಸಿದ್ದ ಮಲ್ಲೇಶ್ವರ ವಿರಕ್ತ ಮಠ ಚಾಮರಾಜನಗರ ಮತ್ತು ಸ್ಥಳಿಯ ಶಾಸಕರು ಹಾಗೂ ಮಾಜಿ ಸಚಿವರು ಶ್ರೀಯುತ ಶ್ರೀ ಪುಟ್ಟರಂಗ ಶೆಟ್ಟರವರು ಹಾಗೂ ರೈತ ಬಿಜೆಪಿ ಮುಖಂಡರು ಅಮ್ಮನಪುರ ಮಲ್ಲೇಶ್ ರವರು ಮಹೇಶ್ ಕುದಾರ್ ಅವರು ರಾಮಚಂದ್ರರವರು ನಿಜುಗುಣರಾಜುರವರು.

ಹಲವಾರು ಗಣ್ಯರು ವೇದಿಕೆಯಲ್ಲಿ ಹಾಸಿನರಿದ್ದರು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ತಾಲೂಕು ಘಟಕದ ಪದಾಧಿಕಾರಿಗಳು ನಗರ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಎಲ್ಲರೂ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ರವರ ಸ್ಮರಣೆ ಮಾಡಿ ಅವರ ಸಾಧನೆಗಳ ಬಗ್ಗೆ ಮೇಲಕ್ಕೆ ಹಾಕಿ ಮುಂದಿನ ಪೀಳಿಗೆ ಗೆ ಮಾರ್ಗದರ್ಶನವಾಗಿರಲಿ ಅಂತ ಹೇಳಿ ಚಲನಚಿತ್ರ ನಟ ಧನ್ಯರು ಮಾತನಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು.