ಪಾವಗಡ ಉದ್ಭವ ಕಣಿವೇ ಶ್ರೀ ಲಕ್ಮೀನರಸಿಂಹಸ್ವಾಮೀ 68ನೇ ಬ್ರಹ್ಮೋತ್ಸವ ವೇಳೆಯಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಣೆಯ ಮಾಡುವ ಮೂಲಕ ಐಕ್ಯತೆ ಮನೋಭಾವ ಮೆರೆದಿದ್ದಾರೆ.

ಪಾವಗಡ: ಇಮ್ರಾನ್ ಉಲ್ಲಾ


ಪಾವಗಡ ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಾಲಯ 68ನೇ ಬ್ರಹ್ಮರಥೋತ್ಸವ ವೇಳೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ರಥೋತ್ಸವ ನಡೆಯಿತು ಈ ಒಂದು ರಥೋತ್ಸವದ ವೇಳೆಯಲ್ಲಿ ಸಾವಿರಾರು ಜನ ಬಾಗಿಯಾಗಿದ್ದರು. ಐತಿಹಾಸಿಕ ಉದ್ಭವ ಕಣಿವೆ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಇತಿಹಾಸಿವುಳ್ಳ ದೇವಸ್ಥಾನ ರಾಜ್ಯದ ಮೂಲೆ ಮೂಲೆಗಳಿಂದ ಈ ಒಂದು ರಥೋತ್ಸವಕ್ಕೆ ನಾಡಿನ ಜನರು ಭಾಗಿಯಾಗುತ್ತಾರೆ.

ಈ ಒಂದು ರಥೋತ್ಸವಕ್ಕೆ ಸತತ 7 ವರ್ಷಗಳಿಂದ ರಥೋತ್ಸವಕ್ಕೆ ನಾಡಿನ ಸುತ್ತುಮುತ್ತಲಿನ ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರಿಗೆ ಮುಸ್ಲಿಂ ಸಮುದಾಯ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಅಬ್ದುಲ್ ಕಲಾಂ ಮಹಾವೇದಿಕೆ ವತಿಯಿಂದ ರಥೋತ್ಸವಕ್ಕೆ ಬಂದಂತಹ ಭಕ್ತಾದಿಗಳಿಗೆ ಮಜ್ಜಿಗೆ ಹಾಗೂ ಹೆಸರುಬೇಳೆ ವಿತರಣೆ ಮಾಡುವ ಮೂಲಕ ಐಕ್ಯತೆ ಮೆರೆದಿದ್ದಾರೆ.

ಇದೇ ವೇಳೆ ಮುಸ್ಲಿಂ ಸಮುದಾಯದ ಮುಖಂಡ ರಿಜ್ವಾನ್ ಮಾತನಾಡಿ ಐತಿಹಾಸಿಕ ದೇವಸ್ಥಾನ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಎಲ್ಲಿಲ್ಲದ ಬೇಡಿಕೆ ಅದೇ ರೀತಿಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಬರುವ ವಾಡಿಕೆ ಹಾಗಾಗಿ ಇಂತಹ ಒಂದು ಬ್ರಹ್ಮನೋತ್ಸವ ವೇಳೆಯಲ್ಲಿ ವಿವಿಧ ಪ್ರಾಂತಗಳಿಂದ ಬರುವಂತಹ ಭಕ್ತಾದಿಗಳಿಗೆ ನಮ್ಮ ಒಂದು ಮುಸ್ಲಿಂ ಸಮುದಾಯ ವತಿಯಿಂದ ಕಳೆದ ಏಳು ವರ್ಷಗಳಿಂದ ಹೆಸರುಬೇಳೆ ಮಜ್ಜಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದೇವೆ. ಪಾವಗಡ ತಾಲೂಕಿನಲ್ಲಿ ಹಿಂದಿನಿಂದಲೂ ಎಲ್ಲಾ ಸಮುದಾಯದವರು ಒಟ್ಟಾಗಿ ಅನ್ಯೂನತೆ ಇಂದ ಬಾಳುತ್ತಿದ್ದೇವೆ ಎಂದರು.

ವೇಳೆಯಲ್ಲಿ .ಈ ವೇಳೆ ಪಾವಗಡ ಸಿಪಿಐ ಅಜಯ್ ಸಾರಥಿ. ಮುಖಂಡ ನಂಜುಂಡಸ್ವಾಮಿ. ಪುರುಷೋತ್ತಮ್ ರೆಡ್ಡಿ .ಶಿವಪ್ಪ ನಾಯಕ್.ನಾಗರಾಜ್ ನಾಯಕ್.ರೈತ ಸಂಘದ ಅಧ್ಯಕ್ಷ ಪೋಜಾರಪ್ಪ.ಆಶ್ವತ್. ಸ್ವಾಗತ್ ಹೋಟೆಲ್ ಮಾಲೀಕ ಕುಮಾರ್.
ಮುಸ್ಲಿಂ ಮುಖಂಡರಾದ ವೈದ್ಯ ಅತಾವುಲ್ಲ. ಇನಾಯತ್ ಸೇಟ್.ಷ ಬಾಬು. ಸಿಕಂದರ್. ಫ್ರೂಟ್ ವ್ಯಾಪಾರಿ ಇನ್ನು.ಪ್ರೂರ್ ಖಾನ್.ಶಾಂತಿ ನಗರದ ಧರ್ಮ.ಇತರರು ಇದ್ದರು.

