Document

ಕಂದಾಯ ದಿನಾಚರಣೆ: ಕಾಮಿಡಿ ಕಿಲಾಡಿ ಖ್ಯಾತಿಯ ಜಿ ಜಿ ದಂಪತಿಗಳಿಂದ ಕಾಮಿಡಿ ಕಾರ್ಯಕ್ರಮ

Janataa24 NEWS DESK

IMG 20230702 WA0009

ಎಸ್ ಬಿ ಜಿ ಆವರಣದಲ್ಲಿ ಇಂದು ಕಂದಾಯ ದಿನಾಚರಣೆ. ನಕ್ಕು ನಗಿಸಿದ ಕಾಮಿಡಿ ಕಿಲಾಡಿ ಖ್ಯಾತಿಯ ಜಿ ಜಿ ದಂಪತಿ.


ತುರುವೇಕೆರೆ: ತಾಲೂಕಿನ ಎಸ್ ಬಿ ಜಿ ಆವರಣದಲ್ಲಿ ಇಂದು ಕಂದಾಯ ದಿನಾಚರಣೆಯನ್ನು, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ ಕಲ್ಪಶ್ರೀ, ಹಾಗೂ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್, ಇವರ ನೇತೃತ್ವದಲ್ಲಿ ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

IMG 20230702 WA0010



ಇನ್ನು ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗಕ್ಕೆ ಕೆಲ ಕ್ರೀಡೆಗಳನ್ನು ನಡೆಸಲಾಗಿದ್ದು ,

IMG 20230702 WA0011



ಜೊತೆಗೆ ಮಹಿಳಾ ಸಿಬ್ಬಂದಿಯಿಂದ ಮನೋರಂಜನ ಕಾರ್ಯಕ್ರಮವನ್ನು ಕೂಡ ನಡೆಸಲಾಯಿತು.

ಇನ್ನು ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಕಾಮಿಡಿ ಕಿಲಾಡಿ ಖ್ಯಾತಿಯ ಜಿ ಜಿ ದಂಪತಿಗಳಿಂದ ಕಾಮಿಡಿ ಕಾರ್ಯಕ್ರಮವು ಕೂಡ ನಡೆಯಿತು,

ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಮಹಿಳಾ ಸಿಬ್ಬಂದಿ ವರ್ಗದ ನೃತ್ಯವಂತು ಎಲ್ಲರ ಕಣ್ತುಂಬಿಸಿತ್ತು,

ಇದರ ಜೊತೆಗೆ ಕಾಮಿಡಿ ಕಿಲಾಡಿ,. ಗೋವಿಂದೇಗೌಡ ದಂಪತಿಗಳಿಂದ ಕಾಮಿಡಿ ಕಾರ್ಯಕ್ರಮವಂತು ಎಲ್ಲರನ್ನೂ ನಕ್ಕು ನಗಿಸಿ ಎಲ್ಲರ ಕಣ್ಮನ ಸೆಳೆಯಲು ಕಾರಣವಾಯಿತು.

IMG 20230702 WA0008



ಇನ್ನು ಈ ಕಾರ್ಯಕ್ರಮದ ನಿಮಿತ್ತ ನಡೆದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಸಿಬ್ಬಂದಿ ವರ್ಗಗಳಿಗೆ ಹಾಗೂ ಮನರಂಜನೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ತಂಡಕ್ಕೂ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಕಲ್ಪಶ್ರೀ, ಹಾಗೂ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್, ಅವರು ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.



ಇದೇ ವೇಳೆ ಮಠದ ಪ್ರಧಾನ ಕಾರ್ಯದರ್ಶಿಯಾದ ಪ್ರಸನ್ನನಾಥ ಸ್ವಾಮೀಜಿ ,ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗಗಳು, ಎಸ್ ಬಿ ಜಿ ಶಾಲೆಯ ವಿದ್ಯಾರ್ಥಿಗಳು, ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *