ಗುಬ್ಬಿ : ಶ್ರೀಕಾಂತ

ತಾಲೂಕಿನ ಕಡಬ ಹೋಬಳಿಯ ಬೆಲವತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೇಮಾರನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆ ಡಿ ಎಸ್ ಪಕ್ಷದ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿ ನಂತರ ಮಾತನಾಡಿದ ಅವರು ಸಾಹುಕಾರರಿಗೆ ಶಾಸಕರು ಬೇಕೋ ಬೇಡವೋ ಗೊತ್ತಿಲ್ಲ ಆದರೆ ಬಡ ಜನತೆಗೆ ಶಾಸಕರು ಅಗತ್ಯವಾಗಿ ಬೇಕಾಗಿದೆ. ಎಂಬುದನ್ನು ಅರಿತು ಮುಂದಿನ ದಿನಗಳಲ್ಲಿ ವಾಸಣ್ಣ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡುತ್ತೇವೆ .ಅಲ್ಲದೆ ಸಾಮಾನ್ಯ ಜನತೆಯ ಜೊತೆ ಅವರಿಗೆ ಇರುವ ಒಡನಾಟಕ್ಕೆ ಇಂದಿಗೂ ಅವರು ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಎಂದು ತಿಳಿಸಿದರು.

ಮುಖಂಡ ರಮೇಶ್ ಮಾತನಾಡಿ ವಾಸಣ್ಣನಿಂದ ಜೆಡಿಎಸ್ ಪಕ್ಷವೇ ಹೊರತು ಜೆಡಿಎಸ್ ನಿಂದ ವಾಸಣ್ಣ ಅಲ್ಲಾ ಎಂಬುದನ್ನು ಮೊದಲು ಅರಿಯಬೇಕು ಎಂದು ತಿಳಿಸಿ ಕುಮಾರಣ್ಣ ಅವರು ಸರ್ಕಾರ ನಡೆಸುವ ವೇಳೆ ಗುಬ್ಬಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಆದರೂ ಏನೂ ಎಂಬುದನ್ನು ಜನತೆಗೆ ತಿಳಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ಕೊಡದೇ ನಮ್ಮ ಶಾಸಕರನ್ನು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಿಗರಾಮಯ್ಯ ಮಾತನಾಡಿ ಇಂದು ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಾಸಣ್ಣ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾ ಇದ್ದು, ಮುಂದಿನ ಜೆಡಿಎಸ್ ಅಭ್ಯರ್ಥಿಯು ವಾಸಣ್ಣ ಅವರನ್ನು ಅಭಿವೃದ್ಧಿ ಏನು ಮಾಡಿದ್ದಾರೆ, ಶೂನ್ಯ ಎಂದು ಹೇಳುವ ಅವರ ಕೊಡುಗೆ ಏನು ಎಂಬುದನ್ನು ತಿಳಿಸಲಿ ನಾನು ಸಹ ಅವರ ಆದಿಯಲ್ಲೇ ಸತತವಾಗಿ ನಾಲ್ಕನೇ ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ ಕಾರಣ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಂಬುದನ್ನು ಅರಿತು ಮಾತನಾಡಬೇಕು. ಎಂದರು.

ಮುಖಂಡ ಸ್ವಾಮಿ ಮಾತನಾಡಿ ಶಾಸಕರು ಯಾವ ಪಕ್ಷಕ್ಕೆ ಹೋದರೂ ಸಹ ನಾವೆಲ್ಲರೂ ಸಹ ಬೆಂಬಲ ಕೊಡುತ್ತೇವೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಈ ಬಾರಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಗೆಲ್ಲುವುದು ಶತಸಿದ್ಧ ನಮ್ಮ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು 20 ವರ್ಷದಿಂದ ನೀಡುತ್ತಿರುವ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಅವರು ಎಲ್ಲಿ ನಾವು ಅಲ್ಲಿ ಹೋಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ ರಾಜಣ್ಣ, ದಯಾನಂದ್, ಕುಮಾರ್, ಮುಖಂಡರಾದ ಕೋಡಿಹಳ್ಳಿ ಆಂಜಿನಪ್ಪ, ರಮೇಶ್, ಅರ್ಚಕ ಲೋಕೇಶ್, ಲಕ್ಷ್ಮಯ್ಯ, ರಂಗಯ್ಯ, ಸ್ವಾಮಿ ಸೇರಿದಂತೆ ವಾಸಣ್ಣ ಅಭಿಮಾನಿ ಬಳಗದ ಮುಖಂಡರು ಕಾರ್ಯಕರ್ತರು ಹಾಗೂ ಇನ್ನಿತರರು ಹಾಜರಿದ್ದರು.