ಎರಡು ಬಾರಿ ಸಚಿವರಾದರೂ ಪಾವಗಡ ಮಾತ್ರ ಪಾವನ ಮಾಡ್ಲಿಲ್ಲ ಶಾಸಕ ವೆಂಕಟರಮಣಪ್ಪ ಎಂದ: ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ

ಪಾವಗಡ: ಇಮ್ರಾನ್ ಉಲ್ಲಾ

ಪಾವಡ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶ ಮಾತಾಡಿದವರು ಅವರು ಶಾಸಕರು ಹೋದ ಕಡೆಯಲ್ಲ ಜೆಡಿಎಸ್ ಬಗ್ಗೆ ಅವಹೇಳನೆ ರೀತಿಯಲ್ಲಿ ಮಾತನಾಡುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಪ್ರತಿ ಕಡೆ ನಾವು ಎಲ್ಲವೂ ಮಾಡಿದ್ದೇವೆ ಎಂಬುದಾಗಿ ಹೇಳಿಕೊಳ್ಳುತ್ತಿರುವುದು ನೋಡಿದರೆ ಅವರಿಗೆಲ್ಲೋ ಭಯ ಹುಟ್ಟಿದಂತಾಗಿದೆ ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಈಗಲ್ಲಿಂದಲೇ ಹುಟ್ಟಿದಂತಾಗಿದೆ.

WhatsApp Image 2023 01 09 at 6.50.27 PM

ಸೋಲಾರ್ ಆಗಿ ಎಷ್ಟು ವರ್ಷಗಳಾಗಿದೆ ಇಲ್ಲಿವರೆಗೂ ಅದರ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ 5 ವರ್ಷಗಳ ಅವಧಿ ಗುಣಗೊಂಡಿದೆ ಸೋಲಾರ್ ಆಗಿ ಇಲ್ಲಿಯವರೆಗೆ ಯಾವುದೇ ತರಹದ ಅಭಿವೃದ್ಧಿ ಕೆಲಸಗಳು ಮಾಡದೆ ಚುನಾವಣೆ ಹತ್ತಿರ ಬಂದಂತ ಸಮಯದಲ್ಲಿ ಗುದ್ದಲಿ ಪೂಜೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.ಎಸ್ ಸಿ ಎಸ್ ಟಿ ಸಮುದಾಯದ ವಿಚಾರವಾಗಿ ಅಸೆಂಬ್ಲಿಯಲ್ಲಿ ಎಷ್ಟು ಬಾರಿ ಚರ್ಚೆ ಮಾಡಿದ್ದಾರೆ ಶಾಸಕ ವೆಂಕಟರವಣಪ್ಪ ನವರು. ನೀರಿಗಾಗಿ ಹತ್ತಾರು ಬಾರಿ ಬೆಂಗಳೂರಿಗೆ ಜನರನ್ನು ಕರೆದೈದು ಮತ್ತು ಪಾದಯಾತ್ರೆಗಳು ಮಾಡುವ ಮುಖಾಂತರ ಸರಕಾರಕ್ಕೆ ಒತ್ತಡ ಹೇರಿದ್ದು ನಾವು. ಈ ಭಾಗದ ಭೂಒಡೆತನದಲ್ಲಿ ಎಷ್ಟು ಜನರಿಗೆ ಭೂಮಿ ಕೊಡಿಸಿದ್ದಾರೆ.

ಎಸ್.ಸಿ-ಎಸ್.ಟಿ ಬಡ ಫಲಾನುಭವಿಗಳಿಗೆ ಮನೆಗಳಿಗೆ ಶ್ರೀಕಾರ ಮಾಡುವಲ್ಲಿ ನಿಮ್ಮಿಂದ ಸಾಧ್ಯವಾಗಿಲ್ಲ

ಬಜೆಟ್ ನಲ್ಲಿ ನಾನು ಮಾತನಾಡಿದ್ದೇನೆ ನನ್ನ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಮಾಡಬೇಕು ಅಷ್ಟು ನಾನು ಮಾಡಿದ್ದೇನೆ ಆದರೆ ಎರಡು ಬಾರಿ ಸಚಿವರಾಗಿದ್ದೀರಿ ನೀವು ಎಷ್ಟು ಇನ್ನೂ ಅಭಿವೃದ್ಧಿ ಮಾಡಬೇಕಾಗಿತ್ತು ಎಷ್ಟು ಮಾಡಿದ್ದೀರಾ ಎಂಬುದು ತಾವು ಅರಿತುಕೊಳ್ಳಬೇಕು. ಸುಮ್ಮನೆ ಜೆಡಿಎಸ್ ಅವರ ಮೇಲೆ ಇಲ್ಲಸಲ್ಲದ ಆರೋಪಗಳು ಮಾಡೋದು ನಿಲ್ಲಿಸಬೇಕು ನಿಮ್ಮ ಅಭಿವೃದ್ಧಿಗೊಳ ಬಗ್ಗೆ ಸಂಪೂರ್ಣ ಮಾಹಿತಿ ನಮಗೂ ಇದೆ. ಓಬಳಾಪುರ ಮತ್ತು ಕಣಿವೆನಹಳ್ಳಿ ಬಳಿ ಬೃಹತ್ ಸೇತುವೆಗಳು ನಿರ್ಮಾಣ ಮಾಡಿರೋದು ನನ್ನ ಅವಧಿಯಲ್ಲಿ ಸುಮಾರು ಒಂದುವರೆ ಕೋಟಿ ಒಂದುವರೆ ಕೋಟಿ ವೆಚ್ಚದಲ್ಲಿ.

ಇದೇ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ ತಾಲೂಕಿ ಪ್ರತಿಯೊಬ್ಬ ನಾಗರಿಕರು ಮಾತನಾಡುವ ಹಕ್ಕು ಇದೆ ಈ ಭಾಗದ ಶಾಸಕರು ಅಭಿವೃದ್ಧಿ ಇನ್ನು ಮಾಡಬೇಕಾಗಿತ್ತು ಎಂಬುದಾಗಿ ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಸೋಲುತ್ತಾರೆಂಬ ಭಯ ಈಗಲ್ಲಿಂದಲೇ ಬೀತಿ ಶುರುವಾಗಿದೆಯೇ.

ಪ್ರಜಾಪ್ರಭುತ್ವದ ನಾಡು ಇದು ಯಾರು ಬೇಕಾದರೂ ಮಾತನಾಡುವ ಹಕ್ಕು ಇದೆ.

ನೀವು ರಾಜಕೀಯ ಮಾಡುತ್ತಿದ್ದೀರಾ ನಾವು ರಾಜಕೀಯ ಮಾಡ್ತಿದ್ದೀವಿ ಇಬ್ಬರೂ ರಾಜಕೀಯದ ರೀತಿಯಲ್ಲಿ ಇರಬೇಕು ಇಲ್ಲ ಸಲ್ಲದ ಮಾತುಗಳು ಅಡಬಾರದು. ಮಂತ್ರಿ ಆದಾಗ ನಾವು ಸಂತೋಷಪಟ್ಟಿದ್ದೇವೆ. ನಿಮ್ಮಿಂದ ಹೆಚ್ಚಿನ ಅಭಿವೃದ್ಧಿ ಆಗುತ್ತೆ ಎಂಬುದು ಅಂದುಕೊಂಡಿದ್ದೇವೆ ಆದರೆ ಅಭಿವೃದ್ಧಿ ಮಾತ್ರ ಆಗಲಿಲ್ಲ ಹಾಗಾಗಿ ಕೇಳುತ್ತೇವೆ ಅದನ್ನೇ ಹಿಡಿದು ವಿರೋಧ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡೋದು ಸರಿಯಲ್ಲ ನೀವು ಪಾವಗಡದ ಮಕ್ಕಳೇ ನಾವು ಪಾವಗಡದ ಮಕ್ಕಳೇ ನಿಮ್ಮ ಅಭಿವೃದ್ಧಿ ಬಗ್ಗೆ ಏನು ಬೇಕಾದರೂ ಎಲು ಬೇಕಾದರೂ ಚರ್ಚೆ ಮಾಡಿಕೊಳ್ಳಿ ಬೇರೆಯವರ ಚರ್ಚೆ ಏಕೆ.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ. ಜಿಲ್ಲಾಧ್ಯಕ್ಷರಾದ ಆರ್.ಸಿ.ಅಂಜಿನಪ್ಪ. ತಾಲ್ಲೂಕು ಅಧ್ಯಕ್ಷರಾದ ಬಲರಾಮರೆಡ್ಡಿ. ಕೋಟಗುಡ್ಡ ಅಂಜಿನಪ್ಪ, ಈರಣ್ಣ. ರಾಜಶೇಖರಪ್ಪ. ಅಕ್ಕಲಪ್ಪನಾಯ್ಡು,ಜಯರಾಮರಡ್ಡಿ. ಪಾಲಾನಾಯಕ, ರಾಜಶೇಖರ್ ರೆಡ್ಡಿ, ಕಾವಲಗೇರಿ ರಾಮಾಂಜಿ,ಯುವ ಮುಖಂಡ ಅಂಜನ್, ಗಂಗಾಧರನಾಯ್ಡು ಇನ್ನೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *