ಪಾವಗಡ: ಇಮ್ರಾನ್ ಉಲ್ಲಾ.

ಪಾವಗಡ: ಉಪ್ಪಾರ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮುದಾಯಕ್ಕೆ ನನ್ನಿಂದಾಗುವ ಕೊಡುಗೆ ನೀಡಲೇಬೇಕೆಂದು ಪಣತೊಟ್ಟು ರಾಜ್ಯಾದ್ಯಂತ ಸುತ್ತಾಡುತ್ತಿರುವೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ನಿಗಮ ಮಂಡಳಿ ಅಧ್ಯಕ್ಷ ಜಿ ಕೆ ಗಿರೀಶ್ ಉಪ್ಪಾರ ರವರು ಹೇಳಿದರು.
ಶನಿವಾರ ಪಟ್ಟಣದ ಯೋಗಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪಾವಗಡ ತಾಲ್ಲೂಕು ಭಗೀರಥ ಉಪ್ಪಾರ ಸಂಘ ಹಾಗೂ ಭಗಿರಥ ಉಪ್ಪರ ಯುವ ಘಟಕ ಉಪ್ಪಾರ ಸಂಘದ ವತಿಯಿಂದ ಹಮ್ಮಿಕೊಂಡಿದ ಜಿ ಕೆ ಗಿರೀಶ್ ರವರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ
ಉಪ್ಪಾರ ಜನಾಂಗ ತಾಲ್ಲೂಕಿನಲ್ಲಿ ಸುಮಾರು ಎಂಟರಿಂದ ಹತ್ತು ಸಾವಿರ ಮತಗಳಿದ್ದು ಇವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉಪ್ಪಾರ ಜನಾಂಗ ಅಭಿವೃದ್ಧಿಯಾಗಲು ಮುಂದೊಂದು ದಿನದಲ್ಲಿ ಸಾಧ್ಯವಾಗುತ್ತದೆ ಹಾಗೂ ಉಪ್ಪಾರ ಜನಾಂಗದ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಬಲವಾಗಲು ಒಗ್ಗಟ್ಟಿನ ಮಂತ್ರ ಜಪಿಸಿದರೆ ಮಾತ್ರ ನಮ್ಮ ಸಮಾಜ ಸಾಧ್ಯವಾಗುತ್ತದೆ ಎಂದರು.
ಈ ತಾಲೂಕಿನಲ್ಲಿ ನಿಗಮದ ವತಿಯಿಂದ ವಸತಿ ಯೋಜನೆ,ಗಂಗಾ ಕಲ್ಯಾಣ ಯೋಜನೆ, ನೇರ ಸಾಲ ಇನ್ನು ಮುಂತಾದ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಉಪ್ಪಾರ ನಿಗಮ ಮಂಡಳಿ ವತಿಯಿಂದ ಕಡು ಬಡವರಿಗೆ ನೀಡಲು ನಾನು ಸಿದ್ದನಾಗಿರುವೆನು ತಾಲೂಕಿನ ಜನತೆಗೆ ತಿಳಿಸಿದರು.
ಕಡುಬಡತನದಲ್ಲಿದ್ದಂತಹ ಕುಟುಂಬದಲ್ಲಿ ಮರಣ ಹೊಂದಿದಂತಹ ವ್ಯಕ್ತಿಗೆ 25,000 ರೂ ತನ್ನ ವೈಯಕ್ತಿಕ ಧನ ಸಹಾಯ ಮಾಡಲು ಮಾಡುತ್ತಿರುವೆ. ಇದನ್ನು ನಮ್ಮ ಜನಾಂಗ ಸದುಪಯೋಗ ಪಡೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ತಾಲೂಕಿನಲ್ಲಿ ಶಾಸಕರಿಂದ ಉಪ್ಪಾರ ಜನಾಂಗದ ಸಮುದಾಯ ಭವನಕ್ಕೆ ಸ್ಥಳ ನಿಗದಿ ಪಡಿಸಿಕೊಳ್ಳಿ ತಕ್ಷಣ ಸಮುದಾಯ ಭವನಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಿಸಿಕೊಡುವ ಜವಾಬ್ದಾರಿ ನನ್ನದಾಗಿದೆ ಎಂದು ಆಶ್ವಾಸನೆ ನೀಡಿದರು.
ಸಮುದಾಯದ ನಾಯಕರು ಮತ್ತು ಯುವಕರು ರಾಜಕೀಯವಾಗಿ ಪ್ರಬಲರಾಗಬೇಕು ಅವರು ಯಾವ ಪಕ್ಷದಲ್ಲಿ ಆದರೂ ಇರಲಿ ಅವರನ್ನು ಮೇಲೆ ಎತ್ತುವ ಕೆಲಸ ನಮ್ಮ ಸಮುದಾಯದವರೆಲ್ಲರೂ ಕೈಜೋಡಿಸಬೇಕೆಂದು ಉಪ್ಪಾರ ಜನಾಂಗದ ಸಮುದಾಯಕ್ಕೆ ಕಿವಿಮಾತು ಹೇಳಿದ ಜಿ ಕೆ ಗಿರೀಶ್ ಉಪ್ಪಾರ ಕರ್ನಾಟಕ ಉಪ್ಪಾರ ನಿಗಮ ಮಂಡಳಿ ಅಧ್ಯಕ್ಷ
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಕೃಷ್ಣಪ್ಪ ಮಾತನಾಡುತ್ತಾ ತಮ್ಮ ಸಮುದಾಯದಲ್ಲಿ ಚಿಕ್ಕ ವಯಸ್ಸಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿರುವುದು ತಮ್ಮ ಸಮುದಾಯದ ಕಿರೀಟ ಪ್ರಾಯವಾಗಿದೆ ಎಂದರು.ನಮ್ಮ ಸಮುದಾಯದವರು ರಾಜವಂಶಸ್ಥರಂದು ಹೇಳುವುದಷ್ಟೇ ಆಗಿದೆ ಆದರೆ ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದೇವೆಂದು ಅಭಿಪ್ರಾಯ ಪಟ್ಟರು.
ನಮ್ಮ ಸಮುದಾಯ ವಿದ್ಯೆಗೆ ಹೆಚ್ಚು ಆದ್ಯತೆ ನೀಡಿ ಸಮುದಾಯದಲ್ಲಿರುವಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರನ್ನು ಶೈಕ್ಷಣಿಕವಾಗಿ ಆರ್ಥಿಕವಾಗಿ ಪ್ರಬಲಗೊಳಿಸಲು ಮುಂದಾಗ ಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಗಂಗಪ್ಪ, ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಅಶ್ವಥ್ ನಾರಾಯಣ, ಸರಸಪ್ಪ, ವಿಜಯ್ ಕುಮಾರ್, ಕಾರ್ಯದರ್ಶಿ ಜಿ ಎಚ್ ನಾಗರಾಜು, ಗೌರವಾಧ್ಯಕ್ಷ ಅಶ್ವತಪ್ಪ, ಖಜಾಂಚಿ ನಾರಾಯಣಪ್ಪ, ಯುವ ಘಟಕದ ಅಧ್ಯಕ್ಷ ಅಕಲಪ್ಪ, ಕಾರ್ಯದರ್ಶಿ ಗೋವಿಂದಪ್ಪ, ಸಿದ್ದಾಪುರ ರಾಮಕೃಷ್ಣ, ಮುರಳಿ, ಸಂಘದ ನಿರ್ದೇಶಕರು ಸಮುದಾಯದವರು ಹಾಜರಿದ್ದರು.